Ashwini Puneeth Rajkumar: ಅಪ್ಪು ಅವರನ್ನು ಕೂಡ ಮೀರಿಸುವಂತೆ ವರ್ಕೌಟ್ ಮಾಡ್ತಾರೆ ಅಶ್ವಿನಿ. ವೀಡಿಯೊ ವೈರಲ್.

Ashwini Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣದ ನಂತರ ದೊಡ್ಡಮನೆಯ ಅದರಲ್ಲೂ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ನಡೆಸಿಕೊಂಡು ಹೋಗುತ್ತಿದ್ದ ಎಲ್ಲಾ ಕೆಲಸ ಕಾರ್ಯಗಳ ಜವಾಬ್ದಾರಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಹೆಗಲ ಮೇಲೆ ಬಿದ್ದಿದೆ. ಹೀಗಿದ್ದರೂ ಕೂಡ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಿಡದೇ ನೇರ ದಿಟ್ಟವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಲ್ಲ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಬರುತ್ತಿದ್ದ ಪಿಆರ್‌ಕೆ ಪ್ರೊಡಕ್ಷನ್(PRK Production) ಹಾಗೂ ಪಿಆರ್ ಕೆ ಆಡಿಯೋ ಸಂಸ್ಥೆಗಳನ್ನು ಕೂಡ ಅಶ್ವಿನಿಯ ಅವರೇ ನೋಡಿಕೊಳ್ಳುತ್ತಿದ್ದಾರೆ. ಅಪ್ಪು ಅವರು ಇದ್ದಾಗಲೂ ಕೂಡ ಅವರ ಬೆನ್ನ ಹಿಂದಿನ ದೊಡ್ಡ ಶಕ್ತಿಯಾಗಿ ಅಶ್ವಿನಿ ಅವರು ಕಾಣಿಸಿಕೊಳ್ಳುತ್ತಿದ್ದರು. ಆದರೆ ಯಾವತ್ತೂ ಕೂಡ ಮಾಧ್ಯಮಗಳ ಎದುರು ಬರುತ್ತಿರಲಿಲ್ಲ. ಈಗ ಅಪ್ಪು(Appu) ಅವರ ಅನುಪಸ್ಥಿತಿಯಲ್ಲಿ ಮಾಧ್ಯಮಗಳ ಮುಂದೆ ಬರಲೇಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Ashwini Puneeth Rajkumar Workout Video

ದೊಡ್ಮನೆ ಸೊಸೆಯಾಗಿ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅರಿತು ಅದರಂತೆ ನಡೆದುಕೊಳ್ಳುತ್ತಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಇನ್ನು ಇತ್ತೀಚಿಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರ ವರ್ಕೌಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲರೂ ಕೂಡ ಅವರ ವರ್ಕೌಟ್ ಸ್ಟೈಲ್ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವರ್ಕೌಟ್ ಸ್ಟೈಲ್ ಗೆ ಹೋಲಿಸಿದ್ದಾರೆ. ಪ್ರತಿಯೊಬ್ಬರು ನಿಬ್ಬೆರಗಾಗುವಂತೆ ದೈಹಿಕ ಕಸರತ್ತನ್ನು ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.

ಅಶ್ವಿನಿ ಪುನೀತ್ ರಾಜಕುಮಾರ್ ತಮ್ಮ ಜಿಮ್ ನಲ್ಲಿ ತರಬೇತುದಾರರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕ ನಟನಾಗಿ ನಟಿಸಿರುವ ಯುವರತ್ನ ಸಿನಿಮಾದ ಫೀಲ್ ದ ಪವರ್ ಹಾಡನ್ನು ಬ್ಯಾಗ್ರೌಂಡಲ್ಲಿ ಹಾಕಿಕೊಂಡು ಮೈನವಿರೇಳಿಸುವಂತಹ ದೈಹಿಕ ಕಸರತ್ತನ್ನು ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲರೂ ಕೂಡ ಮೆಚ್ಚುಗೆಯನ್ನು ಸೂಚಿಸಿದ್ದು ಇನ್ನು ಕೆಲವರು ಅಪ್ಪು ಅವರ ವರ್ಕೌಟ್ ಗೆ ಹೋಲಿಸಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!