Shivanna: ಶಿವಣ್ಣನ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿ. ಶಿವಣ್ಣನ ಅಭಿಮಾನಿಗಳಿಗೂ ಕೂಡ ತಿಳಿಯದ ವಿಷಯ ಇದು.

Shivarajkumar ಸ್ನೇಹಿತರೆ ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗದಲ್ಲಿ ಭರ್ಜರಿ 35 ವರ್ಷಗಳಿಗಿಂತಲೂ ಅಧಿಕಕಾಲ ಸ್ಟಾರ್ ನಾಯಕ ನಟನಾಗಿ ತಮ್ಮ ವೃತ್ತಿ ಜೀವನವನ್ನು ಈಗಾಗಲೇ ಸಂಪೂರ್ಣಗೊಳಿಸಿದ್ದಾರೆ. ನಿಜಕ್ಕೂ ಶಿವಣ್ಣ ಇಂದಿಗೂ ಕೂಡ 20ರಹರೆಯದ ಯುವಕರನ್ನು ನಾಚಿಸುವಂತೆ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಅವರ ನಟನೆಯಂತೂ ಅದ್ಭುತ ಎನ್ನುವುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ.

ಇಂದಿಗೂ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಂದು ಯಶಸ್ವಿ ಸಿನಿಮಾವನ್ನು ನೀಡಲು ಯುವ ನಾಯಕನಟರು ಕಾಯುತ್ತಿದ್ದರೆ ಅದೇ ಕಡೆ ಶಿವಣ್ಣನನ್ನು ನೋಡುವುದಾದರೆ ಸತತವಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ನಂತರ ಅವರು ನಡೆಸಿಕೊಂಡು ಬರುತ್ತಿದ್ದಂತಹ ಎಲ್ಲಾ ಪುಣ್ಯ ಕಾರ್ಯಗಳನ್ನು ಕೂಡ ತಮ್ಮನ ನೆನಪಿಗಾಗಿ ತಾವೇ ಮಾಡಿಕೊಂಡು ಹೋಗುತ್ತಿದ್ದಾರೆ. ನಿಜಕ್ಕೂ ಕೂಡ ಇತ್ತೀಚಿನ ದಿನಗಳಲ್ಲಿ ಶಿವಣ್ಣನವರ ಕಾರ್ಯ ಹಾಗೂ ಅವರ ಬದುಕಿನ ಶೈಲಿ ಪ್ರತಿಯೊಬ್ಬರಿಗೂ ಕೂಡ ಮಾದರಿಯಾಗಿದೆ ಎನ್ನಬಹುದು.

ಇನ್ನು ಶಿವಣ್ಣನವರ(Shivanna) ಅಭಿಮಾನಿಗಳಿಗೆ ಗೊತ್ತಿರದ ಒಂದು ವಿಚಾರದ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ, ಕರುನಾಡು ಚಕ್ರವರ್ತಿ ಶಿವಣ್ಣ ನಟಿಸುತ್ತಿರುವ ಸಿನಿಮಾ ಒಂದರಲ್ಲಿ ಮಿಲ್ಕಿ ಬ್ಯುಟಿ ತಮನ್ನ(Tamanna) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ತಮ್ಮನ್ನ ಕೆಜಿಎಫ್ ಚಾಪ್ಟರ್ 1 ಹಾಗೂ ನಿಖಿಲ್ ಕುಮಾರಸ್ವಾಮಿ ನಾಯಕನಟನಾಗಿ ನಟಿಸಿರುವ ಜಾಗ್ವಾರ್ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು.

ಈಗ ಸದ್ಯಕ್ಕೆ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ರಜನಿಕಾಂತ್ ನಾಯಕ ನಟನಾಗಿ ನಟಿಸಿರುವ ಜೈಲರ್(Jailer Movie) ಸಿನಿಮಾದಲ್ಲಿ ನಾಯಕಿಯಾಗಿ ತಮನ್ನ ಆಯ್ಕೆಯಾಗಿದ್ದು ಇಬ್ಬರು ಕೂಡ ಒಂದೇ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಜೈಲರ್ ಸಿನ್ಮಾದ ಮೇಲೆ ಸಿನಿಮಾ ಪ್ರೇಮಿಗಳಿಗೆ ಸಾಕಷ್ಟು ನಿರೀಕ್ಷೆ ಇದ್ದು ಯಾವ ರೀತಿಯಲ್ಲಿ ಸಿನಿಮಾ ಮೂಡಿಬರಲಿದೆ ಎಂಬುದಾಗಿ ಎಲ್ಲರೂ ಕೂಡ ಕಾತರರಾಗಿದ್ದಾರೆ.

Leave a Comment

error: Content is protected !!