Drone Prathap: ಎಲ್ಲರಿಗೂ ಕಾಗೆ ಹಾರಿಸಿದ್ದ ಡ್ರೋನ್ ಪ್ರತಾಪ್ ರಾಹುಲ್ ಗಾಂಧಿ ಹತ್ರ ಕೂಡ ಹೋಗಿದ್ಯಾಕೆ? ವೈರಲ್ ಆಯ್ತು ಫೋಟೋ.

Rahul Gandhi ಕರ್ನಾಟಕದಲ್ಲಿ ಕೆಲವು ವರ್ಷಗಳ ಹಿಂದೆ ಹೋದರೆ ಡ್ರೋನ್ ಪ್ರತಾಪ್(Drone Prathap) ಎನ್ನುವ ವ್ಯಕ್ತಿಯ ಪರಿಚಯ ಕಾಣುತ್ತದೆ. ಈತ ಮಂಡ್ಯ ಮೂಲದವನಾಗಿದ್ದು ಈತನ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಬಿತ್ತರಿಸಲಾಗಿತ್ತು. ಅದರಲ್ಲೂ ಎರಡು ರೀತಿಯಲ್ಲಿ ಸುದ್ದಿ ಬಿತ್ತರವಾಗಿತ್ತು ಅವುಗಳೆರಡರ ಬಗ್ಗೆ ಕೂಡ ತಿಳಿಯೋಣ ಬನ್ನಿ.

ಮೊದಲಿಗೆ ಈತ ಯಾವುದೇ ಹಣಕಾಸಿನ ನೆರವು ಇಲ್ಲದೆ ಹಾಗೂ ಆರ್ಥಿಕ ಸಮಸ್ಯೆಗಳ ನಡುವೆ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಯಾಗಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾನೆ ಹಾಗೂ ಪ್ರವಾಹದ ಸಂದರ್ಭದಲ್ಲಿ ನೆರವು ನೀಡುವಂತಹ ಡ್ರೋನ್ ಗಳನ್ನು ಸಿದ್ಧಪಡಿಸಿದ್ದಾನೆ ಎಂಬುದಾಗಿ ಸುದ್ದಿಯಾಗಿತ್ತು. ಈತನಿಗೆ ವಿದೇಶದ ಸರ್ಕಾರಗಳು ಕೋಟಿ ಕೋಟಿ ಸಂಬಳವನ್ನು ನೀಡಿದರು ಕೂಡ ಭಾರತಕ್ಕಾಗಿ ಏನಾದರು ಮಾಡಲು ಅವುಗಳನ್ನೆಲ್ಲ ತಿರಸ್ಕರಿಸಿದ್ದಾನೆ ಎನ್ನುವ ಸುದ್ದಿಗಳು ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಓಡಾಡಿದವು.

ನಂತರ ಎರಡನೇ ಸುದ್ದಿಯಲ್ಲಿ ಆತ ಯಾವ ವಿಜ್ಞಾನಿಯೂ ಅಲ್ಲ ಯಾವ ಡ್ರೋನ್ ಗಳನ್ನು ಕೂಡ ತಯಾರಿಸಿಲ್ಲ ಕೇವಲ ಬುರುಡೆ ಬಿಡುತ್ತಿದ್ದಾನೆ ಎಂಬುದಾಗಿ ಸುದ್ದಿ ಆಗಿತ್ತು. ನಟ ಜಗ್ಗೇಶ್ ಸೇರಿದಂತೆ ಹಲವಾರು ಜನರು ಆತನ ಬೊಗಳೆತನವನ್ನು ಬಯಲು ಮಾಡಿದ್ದರು. ನಂತರ ಆತ ಕೂಡ ನನ್ನ ವಿರುದ್ಧ ಷಡ್ಯಂತರ ರಚಿಸಲಾಗಿದೆ ಎಂಬುದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಸಂದರ್ಶನಗಳ ಮೂಲಕ ಸುದ್ದಿ ಮಾಡಿದ್ದ. ಈಗ ಆತ ಖ್ಯಾತ ರಾಜಕಾರಣಿ ಒಬ್ಬರ ಜೊತೆಗೆ ಇರುವಂತಹ ಫೋಟೋ ವೈರಲ್ ಆಗಿದ್ದು ಮತ್ತೆ ಸುದ್ದಿಗೆ ಬಂದಿದ್ದಾನೆ.

ಹೌದು ಗೆಳೆಯರೇ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಆಗಿರುವ ರಾಹುಲ್ ಗಾಂಧಿ(Rahul Gandhi) ಅವರ ಜೊತೆಗೆ ಡ್ರೋನ್ ಪ್ರತಾಪ್(Drone Prathap) ಇರುವಂತಹ ಫೋಟೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಕೂಡ ಈ ಫೋಟೋದ ಕುರಿತಂತೆ ಟೀಕೆ ಟಿಪ್ಪಣಿಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಈ ಫೋಟೋ ನೋಡಿದರೆ ನಿಮಗೇನು ಅನ್ನಿಸುತ್ತದೆ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!