ಅಪ್ಪು ಜಾಗದಲ್ಲಿಯೇ ಕೂತು ಅಪ್ಪು ಸ್ಟೈಲ್ ನಲ್ಲಿಯೆ ಕಾರ್ಯ ನಿರ್ವಹಿಸುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ 46ನೇ ವಯಸ್ಸಿಗೆ ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲುವ ಮೂಲಕ ಕೇವಲ ಅವರ ಕುಟುಂಬಸ್ಥರನ್ನು ಮಾತ್ರವಲ್ಲದೆ ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನನ್ನು ಕೂಡ ಅನಾಥನನ್ನಾಗಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಅಷ್ಟೊಂದು ದೈಹಿಕ ದಾರ್ಡ್ಯತೆಯನ್ನು ಹೊಂದಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಆರೋಗ್ಯ ಸಮಸ್ಯೆಯಿಂದ ಆಗಲಿ ಹೋಗುತ್ತಾರೆ ಎಂಬ ಚಿಕ್ಕ ಪರಿವೆ ಕೂಡ ಒಬ್ಬನಿಗೂ ಇರಲಿಲ್ಲ.

ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಲ್ಲಾ ಕೆಲಸಗಳ ಜವಾಬ್ದಾರಿಯನ್ನು ಹೊತ್ತುಕೊಂಡು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸುಗಳನ್ನು ಒಂದೊಂದಾಗಿ ಪೂರೈಸುತ್ತಿದ್ದಾರೆ. ಪ್ರತಿಯೊಬ್ಬ ಅಪ್ಪು ಅಭಿಮಾನಿಗಳು ಕೂಡ ಈ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎನ್ನಬಹುದಾಗಿದೆ.

ಇನ್ನು ಅಪ್ಪು ಅವರ ಕೊನೆಯ ಸಿನಿಮಾ ಆಗಿರುವ ಗಂಧದಗುಡಿಯ ಪ್ರಿ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದಿತ್ತು ಹಾಗೂ ಇದಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಹಲವಾರು ಗಣ್ಯಾತಿ ಗಣ್ಯರು ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಹಲವಾರು ಖ್ಯಾತನಾಮರು ಆಗಮಿಸಿದ್ದರು. ಇಂತಹ ದೊಡ್ಡ ಕಾರ್ಯಕ್ರಮವನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಒಬ್ಬರೇ ಮುಂದೆ ನಿಂತು ನಿರ್ವಹಿಸಿ ಕೊಟ್ಟಿದ್ದು ನಿಜಕ್ಕೂ ಕೂಡ ಅಪ್ಪು ಅವರ ಕನಸನ್ನು ನನಸು ಮಾಡುವ ಅವರ ಅದಮ್ಯ ಆಸೆ ಯಾವ ಮಟ್ಟಿಗೆ ಬಲವಾಗಿರಬಹುದು ಎಂಬ ಚಿಕ್ಕ ಪರಿಚಯವಾಗಿದೆ.

ಇನ್ನು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಾಗೆ ಅವರ ಜಾಗದಲ್ಲಿ ಕೂತು ಮಠ ಎನ್ನುವ ಹೊಸ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಶುಭ ಹಾರೈಸಿದ್ದು ಎಲ್ಲರೂ ಕೂಡ ಅಶ್ವಿನಿ ಮೇಡಂ ಸೇಮ್ ಅಪ್ಪು ಅವರ ಹಾಗೇನೆ ಇದ್ದಾರೆ ಎಂಬುದಾಗಿ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ನೀವು ಕೂಡ ವೈರಲ್ ಆಗಿರುವ ಈ ವಿಡಿಯೋವನ್ನು ನೋಡಬಹುದಾಗಿದ್ದು ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!