ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಿದ್ದು ಯಾರು ಗೊತ್ತಾ?

12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪಾಕಿಸ್ತಾನ ಮೂಲದ ಖ್ಯಾತ ಕ್ರಿಕೆಟ್ ಈಗ ಶೋಯಬ್ ಮಲ್ಲಿಕ್ ಹಾಗೂ ಭಾರತೀಯ ಮೂಲದ ಮೂಗುತಿ ಸುಂದರಿ ಹಾಗೂ ಖ್ಯಾತ ಟೆನಿಸ್ ಆಟಗಾರ್ತಿ ಆಗಿರುವ ಸಾನಿಯಾ ಮಿರ್ಜಾ ಅವರು ಇಬ್ಬರೂ ಕೂಡ ತಮ್ಮ 12 ವರ್ಷಗಳ ದಾಂಪತ್ಯ ಜೀವನಕ್ಕೆ ಶುಭಂ ಹಾಡಲು ಮುಂದಾಗಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಇದಕ್ಕೆ ಜೀವಂತ ಸಾಕ್ಷಿ ಎನ್ನುವಂತೆ ಇಬ್ಬರು ಕೂಡ ಪರಸ್ಪರ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂಬ ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ ಅವರ ಆಪ್ತ ಮೂಲದ ಮಾತುಗಳೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಬಹುದಾಗಿದೆ.

ಇಬ್ಬರೂ ಕೂಡ ಬೇರೆ ಬೇರೆಯಾಗಿ ವಾಸಿಸುತ್ತಿದ್ದು ಮುಂದಿನ ದಿನಗಳಲ್ಲಿ ಕಾನೂನು ನಿಯಮಾನುಸಾರ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವ ಮೂಲಕ ಬೇರೆ ಬೇರೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದರ ಕುರಿತಂತೆ ಇವರಿಬ್ಬರು ಎಲ್ಲೂ ಕೂಡ ಬಾಯಿ ಬಿಟ್ಟಿಲ್ಲ ಆದರೆ ಇವರಿಬ್ಬರ ಆಪ್ತ ಮೂಲಗಳು ಬಹುತೇಕ ಇದನ್ನೇ ಸಾಬೀತುಪಡಿಸುತ್ತಿವೆ. ಇನ್ನು ಇವರಿಬ್ಬರ ವಿವಾಹಕ್ಕೆ ಹುಳಿ ಹಿಂಡಿದ್ದು ಒಬ್ಬ ಪಾಕಿಸ್ತಾನ ಮೂಲದ ನಟಿ ಎಂಬುದಾಗಿ ತಿಳಿದು ಬಂದಿದೆ.

ಆಯೇಶ ಓಮರ್ ಎನ್ನುವ ಖ್ಯಾತ ಯೂಟ್ಯೂಬರ್ ಹಾಗೂ ಪಾಕಿಸ್ತಾನಿ ಸಿನಿಮಾಗಳ ನಟಿ ಇವರಿಬ್ಬರ ದಾಂಪತ್ಯ ಜೀವನದ ನಡುವೆ ಬಂದಿದ್ದಾಳೆ ಎನ್ನುವ ಸುದ್ದಿ ಇದೆ. ಕೆಲವು ಮೂಲಗಳ ಪ್ರಕಾರ ಆಯಷ ಹಾಗೂ ಶೋಯಬ್ ಮಲ್ಲಿಕ್ ಅವರಿಬ್ಬರು ಬೋಲ್ಡ್ ಆಗಿ ಫೋಟೋ ತೆಗೆಸಿಕೊಂಡ ನಂತರ ಇವರಿಬ್ಬರ ನಡುವೆ ಬೇಡದ ಸುದ್ದಿಗಳು ಹರಿದಾಡಿರುವ ಹಿನ್ನೆಲೆಯಲ್ಲಿಯೇ ಶೋಯಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ಇಬ್ಬರು ಕೂಡ ದಾಂಪತ್ಯ ಜೀವನದಿಂದ ಹೊರಬರಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

12 ವರ್ಷಗಳ ಹಿಂದೆ ಹೈದರಾಬಾದ್ ನಲ್ಲಿ ತಾಜ್ ಕೃಷ್ಣ ಹೋಟೆಲ್ ನಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಇವರಿಬ್ಬರಿಗೆ ಒಬ್ಬ ಮಗ ಕೂಡ ಇದ್ದು ಇವರಿಬ್ಬರು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ಪೋಸ್ಟ್ ನೋಡಿದರೆ ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಅಧಿಕೃತವಾಗಿ ತಿಳಿಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!