Dhanushree: ಇತ್ತೀಚಿಗಷ್ಟೇ ಬಿಗ್ ಬಾಸ್ ಗೆ ಹೋಗಿ ಬಂದಿರುವ ಟಿಕ್ ಟಾಕ್ ಸ್ಟಾರ್ ಧನುಶ್ರೀ ತಿಂಗಳಿಗೆ ದುಡಿಯೋ ಸಂಪಾದನೆ ಎಷ್ಟು ಗೊತ್ತಾ? ಯಾವ ಇಂಜಿನಿಯರ್ ಗೂ ಕಡಿಮೆ ಇಲ್ಲ.

Dhanushree Tik Tok ಸ್ನೇಹಿತರು ನಿಮಗೆ ತಿಳಿದಿರಬಹುದು ಸಿನಿಮಾಗಳಲ್ಲಿ ಗುರುತಿಸಿಕೊಂಡು ಹೆಸರು ಮಾಡಿ ಸ್ಟಾರ್ ಪಟ್ಟವನ್ನು ಗಳಿಸಿಕೊಳ್ಳುವುದು ಸಾಕಷ್ಟು ವರ್ಷಗಳ ಪರಿಶ್ರಮವನ್ನು ಕೇಳುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ(Social Media) ಹಾಗಲ್ಲ ರಾತ್ರೋರಾತ್ರಿ ಯಾರು ಬೇಕಾದರೂ ಕೂಡ ಸ್ಟಾರ್ ಆಗಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಪರಭಾಷೆಗಳಲ್ಲಿ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಕೂಡ ಸದ್ದು ಮಾಡುತ್ತಿದೆ.

ಇನ್ನು ಇದೇ ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಮ್ ರೀಲ್ಸ್ ಮುಖಾಂತರ ಜನಪ್ರಿಯತೆಯನ್ನು ಪಡೆದು ಬಿಗ್ ಬಾಸ್ ಗೆ ಕೂಡ ಹೋಗಿ ಬಂದಿರುವ ಧನುಶ್ರೀ(Dhanushree) ಅವರ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಟಿಕ್ ಟಾಕ್ ನಲ್ಲಿ ಜನಪ್ರಿಯತೆಯನ್ನು ಸಾಧಿಸಿದ್ದ ಧನುಶ್ರೀ ಅವರು ಇನ್ಸ್ಟಾಗ್ರಾಮ್ ನಲ್ಲಿ ಕೂಡ ಅದನ್ನೇ ಮುಂದುವರಿಸುತ್ತಾರೆ.

ಇನ್ನು ಅವರು ಈಗ ತಿಂಗಳಿಗೆ ಲಕ್ಷಾಂತರ ರೂಪಾಯಿ ಪ್ರಮೋಷನ್ ಮೂಲಕ ದುಡಿಯುತ್ತಿದ್ದು ಆರಂಭದಲ್ಲಿ ಅವರ ದಿನಗಳು ಹೇಗಿತ್ತು ಎಂಬುದನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಅವರಿಗೆ 1000 ಸಿಕ್ಕರೂ ಸಾಕು ಎನ್ನುವ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಂಡಲ್ ಮಾಡುತ್ತಿದ್ದ ಟೀಂ ನವರು ಅವರಿಗೆ ಒಂದು ಪ್ರಮೋಷನ್ ಆಫರ್ ನೀಡಿದ್ದು ನಿಜಕ್ಕೂ ಕೂಡ ಅವರಿಗೆ ಪ್ರಾರಂಭದಲ್ಲಿಯೇ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸಿಂಗ್ ಮೂಲಕ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣವನ್ನು ಗಳಿಸಬಹುದು ಎಂಬುದಾಗಿ ತಿಳಿದು ಬರುತ್ತದೆ.

ಕೇವಲ ಒಂದು ಸಾವಿರ ರೂಪಾಯಿ ಸಿಕ್ಕರು ಸಾಕು ಎನ್ನುವ ಸಂದರ್ಭದಲ್ಲಿ ಅವರಿಗೆ ಒಂದು ಪ್ರಮೋಷನ್ ಗೆ ಭರ್ಜರಿ 25000 ಸಿಕ್ಕಿತ್ತು. ಅದಾದ ನಂತರ ಮತ್ತೆ ಧನುಶ್ರೀ(Dhanushree) ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇಂದಿಗೂ ಕೂಡ ಪ್ರಮೋಷನ್ಗಳ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದಿಸುತ್ತಿದ್ದಾರೆ. ನೀವು ಕೂಡ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸಿಂಗ್ ಮೂಲಕ ಈ ರೀತಿ ಹಣವನ್ನು ಗಳಿಸಬಹುದಾಗಿದೆ.

Leave a Comment

error: Content is protected !!