Kabzaa: ಕಬ್ಜಾ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್! ಇದೇನಿದು ಹೊಸ ಗಿಮಿಕ್?

Puneeth Rajkumar ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾ ರಸಿಕರು ಕಾಯುತ್ತಿದ್ದ ಕಬ್ಜಾ ಸಿನಿಮಾ(Kabzaa Film) ಕೊನೆಗೂ ಕೂಡ ನಾಳೆ ಅಂದರೆ ಮಾರ್ಚ್ 17ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ. ಕನ್ನಡದ ಮೂರು ಮಹಾನ್ ಸ್ಟಾರ್ಗಳು ಒಟ್ಟಾಗಿ ನಟಿಸಿರುವಂತಹ ಈ ಸಿನಿಮಾ ನಿಜಕ್ಕೂ ಕೂಡ ಬೇರೆ ಭಾಷೆಗಳಲ್ಲಿ ಕೂಡ ಸಾಕಷ್ಟು ಹೈಪ್ ಅನ್ನು ಕ್ರಿಯೇಟ್ ಮಾಡಿದೆ. ಸ್ವಾತಂತ್ರ್ಯ ಪೂರ್ವದಿಂದ ಪ್ರಾರಂಭವಾಗಿ ಸ್ವಾತಂತ್ರ್ಯ ನಂತರವೂ ಕೂಡ ಸಾಗಿ ಬರುವಂತಹ ಈ ಕಥೆ ಕೆಜಿಎಫ್(KGF) ಫೀಲಿಂಗ್ ಅನ್ನು ಕೊಡುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೀಗಿದ್ದರೂ ಕೂಡ ಕೆಜಿಎಫ್(KGF) ಸಿನಿಮಾ ಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ರಿಚ್ ಆಗಿ ಮೂಡಿ ಬಂದಿರುವ ಈ ಸಿನಿಮಾ ಖಂಡಿತವಾಗಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ದಾಖಲೆಯನ್ನು ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು. ಫಸ್ಟ್ ಡೇ ಕಲೆಕ್ಷನ್ ನಲ್ಲಿ ಕೂಡ ದೊಡ್ಡ ಮಟ್ಟದ ದಾಖಲೆಗಳು ಕಂಡು ಬರುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ ವಿಭಿನ್ನ ರೀತಿಯ ಕಥಹಂದರವನ್ನು ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೊಸ ಭಾಷೆವನ್ನೇ ಬರೆಯಲಿದೆ. ಆದರೆ ಹೊಸದಾಗಿ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಕಬ್ಜಾ ಸಿನಿಮಾದಲ್ಲಿ ಅಪ್ಪು(Appu) ಅವರು ಕೂಡ ನಟಿಸಿದ್ದಾರೆ ಎನ್ನಲಾಗುತ್ತಿದೆ. ನೋಡೋದಕ್ಕೆ ಹೋದರೆ ಕಬ್ಜಾ ಸಿನಿಮಾದ ಚಿತ್ರೀಕರಣದಲ್ಲಿ ಸಿನಿಮಾ ಸೆಟ್ ಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ಕೂಡ ಭೇಟಿ ನೀಡಿ ಹೋಗಿದ್ದರು. ಅದಕ್ಕೆ ತಕ್ಕಂತೆ ಈಗ ಒಂದು ಫೋಟೋ ಕೂಡ ಕಬ್ಜಾ ಚಿತ್ರದಿಂದ ಹೊರ ಬಂದಿದ್ದು ನೋಡೋದಕ್ಕೆ ಅಪ್ಪು ಅವರ ಹಾಗೇನೆ ಇದೆ.

ಹಲವಾರು ಮೂಲಗಳ ಪ್ರಕಾರ ಇದೊಂದು ಗಾಳಿ ಸುದ್ದಿ ಅಪ್ಪು ಅವರು ಕಬ್ಜಾ(Kabzaa) ಸಿನಿಮಾದಲ್ಲಿ ನಟಿಸಿಲ್ಲ ಎಂಬುದಾಗಿ ಕೇಳಿ ಬಂದಿದೆ. ಆದರೆ ಯಾರಿಗೆ ಗೊತ್ತು ಅಪ್ಪು ಅವರು ನಟಿಸಿರಬಹುದು ಹಾಗೂ ಚಿತ್ರತಂಡ ಇದನ್ನು ಮುಚ್ಚಿಟ್ಟಿರಬಹುವುದು ಎಂಬುದಾಗಿ ಕೂಡ ಅಂದಾಜಿಸಲಾಗುತ್ತಿದೆ. ಇವೆಲ್ಲ ಪ್ರಶ್ನೆಗಳಿಗೂ ಕೂಡ ನಮಗೆ ನಾಳೆ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಮೂಲಕವೇ ಉತ್ತರ ಸಿಗಲಿದೆ. ಸಿನಿಮಾದ ಬಗ್ಗೆ ನಿಮಗಿರುವ ನಿರೀಕ್ಷೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!