Chikkanna: ಉಪಾಧ್ಯಕ್ಷ ಸಿನಿಮಾದ ಪ್ರಮೋಶನ್ ವೇಳೆ ದರ್ಶನ್ ಅವರನ್ನು ಭೇಟಿ ಮಾಡಿದ ಚಿಕ್ಕಣ್ಣ ಮತ್ತು ಮಲೈಕಾ

Chikkanna: ಸ್ನೇಹಿತರೆ ಕನ್ನಡ ಕಿರುತೆರೆಯ ಹಿಟ್ಲರ್ ಕಲ್ಯಾಣ ಎಂಬ ಧಾರಾವಾಹಿಯ ನಾಯಕ ನಟಿ ಮಲೈಕಾ ವಾಸುಪಾಲ್(Malaika Vasupal) ರವರು ಸದ್ಯ ಹಾಸ್ಯ ನಟ ಚಿಕ್ಕಣ್ಣ ಅವರ ಉಪಾಧ್ಯಕ್ಷ ಸಿನಿಮಾದ ನಾಯಕ ನಟಿಯಾಗಿ ಅಭಿನಯಿಸಿದ್ದು ಕಳೆದ ಶುಕ್ರವಾರ ಜನವರಿ 26 ನೇ ತಾರೀಕು 2024 ರಂದು ಉಪಾಧ್ಯಕ್ಷ ಸಿನಿಮಾ ರಾಜದಾದ್ಯಂತ ಬಿಡುಗಡೆಗೊಂಡಿದ್ದು ಎಲ್ಲಾ ಸಿನಿಮಾ ಮಂದಿರಗಳಲ್ಲಿಯೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಾ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದೆ.

ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಇದಾಗಿದ್ದು ಚಿಕ್ಕಣ್ಣನ ಪ್ರತಿಯೊಂದು ಡೈಲಾಗ್ಗಳು ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡುವುದು ಖಂಡಿತ ಇನ್ನು ಬಹು ಮುಖ್ಯವಾಗಿ ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಹಾಸ್ಯ ನಟ ಚಿಕ್ಕಣ್ಣ ಅವರು ಉಪಾಧ್ಯಕ್ಷ ಸಿನಿಮಾದ(Upaadhyaksha movie) ಮೂಲಕ ಬಡ್ತಿ ಪಡೆಯುತ್ತಿದ್ದು ಸಿನಿಮಾದಲ್ಲಿ ನಾರಾಯಣ ಎಂಬ ಪಾತ್ರದಲ್ಲಿ ಕಾಣಿಸಿಕೊಂಡ ಅದ್ಭುತ ಹಾಸ್ಯ ಪಂಚಿಂಗ್ ಡೈಲಾಗ್ ಗಳು ಹಾಗೂ ಒನ್ಲೈನರ್ ಸಂಭಾಷಣೆಗಳ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಚಿತ್ರ ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ .

ಸಿನಿಮಾ ಗೆ ಎಲ್ಲೆಡೆಯಿಂದ ಬಾರಿ ಪ್ರತಿಕ್ರಿಯೆ ದೊರಕುತ್ತಿದ್ದು ವಿಮರ್ಶಕರಿಂದಲೂ ಅದ್ಭುತ ಮೆಚ್ಚುಗೆಗಳು ದೊರಕಿದೆ. ಪ್ರಮೋಷನ್ ಕೆಲಸಗಳನ್ನು ಭರ್ಜರಿಯಾಗಿ ಮಾಡುತ್ತಿರುವಂತಹ ಚಿಕ್ಕಣ್ಣ ಮತ್ತು ನಾಯಕ ನಟಿ ಮಲೈಕಾ ವಾಸು ಪಾಲ್ ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರ ಮನೆಗೆ ಭೇಟಿ ನೀಡಿ ರಾಧಿಕಾ ಪಂಡಿತ್(Radhika Pandit) ಅವರು ತಮ್ಮ ಕೈಯಾರೆ ತಯಾರಿಸಿರುವಂತಹ ತಿಂಡಿ ಸೇವನೆ ಮಾಡಿ ಸಿನಿಮಾದ ಕುರಿತು ಭರ್ಜರಿ ಪ್ರಮೋಷನ್ ಮಾಡಿಸುವುದರ ಜೊತೆಗೆ ಅವರೊಂದಿಗೆ ಅಪ್ಪಿ ತಗ್ಗಿಸಿಕೊಂಡಂತಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಆಗಿದ್ದರು.

ಅದರಂತೆ ಡಿ ಬಾಸ್ ದರ್ಶನ್ ಅವರನ್ನು ಚಿಕ್ಕಣ್ಣ ಮತ್ತು ಮಲೈಕ ವಾಸು ಪಾಲ್ ಭೇಟಿ ಮಾಡಿದ್ದು ಆ ಸುಂದರ ಕ್ಷಣದ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಡಿ ಬಾಸ್ ದರ್ಶನ್(Darshan) ಕೂಡ ಉಪಾಧ್ಯಕ್ಷ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದ್ದು ಸಿನಿಮಾ ನೋಡುವಂತೆ ತಮ್ಮ ಅಭಿಮಾನಿಗಳಲ್ಲಿಯೂ ಕೇಳಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!