Ravichandran: ರವಿಚಂದ್ರನ್ ರ ಸಿಪಾಯಿ ಸಿನಿಮಾ ಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಮೆಗಾಸ್ಟಾರ್ ಚಿರಂಜೀವಿ ಪಡೆದ ಸಂಭಾವನೆಯ ಅಸಲಿಯತ್ತು ಇಲ್ಲಿದೆ ನೋಡಿ.

Megastar Chiranjeevi ಒಂದು ಕಾಲದಲ್ಲಿ ಪರಭಾಷೆಯ ನಟ ನಟಿಯರು ಕನ್ನಡ ಚಿತ್ರರಂಗಕ್ಕೆ ನಟಿಸಲು ಬರುತ್ತಿದ್ದಾರೆ ಎಂದರೆ ಅದು ಖಂಡಿತವಾಗಿ ರವಿಚಂದ್ರನ್(Ravichandran) ರವರ ಸಿನಿಮಾ ಎನ್ನುವುದು ಮೊದಲೇ ಎಲ್ಲರಿಗೂ ತಿಳಿದು ಬರುತ್ತಿತ್ತು. ಮಟ್ಟಿಗೆ ಅದ್ದೂರಿಯಾಗಿ ರವಿಚಂದ್ರನ್ ನಿರ್ಮಾಣದ ಹಾಗೂ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬರುವಂತಹ ಸಿನಿಮಾಗಳು ರೆಡಿಯಾಗುತ್ತಿದ್ದವು.

ಇನ್ನು ಅದೆಷ್ಟೋ ಪರಭಾಷೆ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದಂತಹ ಶ್ರೇಯ ರವಿಚಂದ್ರನ್ ರವರಿಗೆ ಸಲ್ಲುತ್ತದೆ. ಇನ್ನು ಸಿಪಾಯಿ ಸಿನಿಮಾದ ಮೂಲಕ ತೇಲುವಿನ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಅವರನ್ನು ಕೂಡ ರವಿಚಂದ್ರನ್ ರವರು ಕನ್ನಡ ಚಿತ್ರರಂಗಕ್ಕೆ ಕರೆ ತರುತ್ತಾರೆ.

1996ರಲ್ಲಿ ಬಿಡುಗಡೆಯಾದ ಸಿಪಾಯಿ(Sipayi Film) ಸಿನಿಮಾದಲ್ಲಿ ರವಿಚಂದ್ರನ್ ಹಾಗೂ ನಟಿ ಸೌಂದರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೇವಲ ನಾಯಕ ನಟನಾಗಿ ಮಾತ್ರವಲ್ಲದೆ ರವಿಚಂದ್ರನ್ ಈ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ ಆಗಿದ್ದರು. ಇಂಟರ್ವಲ್ ನಂತರ ಈ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಪ್ರಮುಖ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಈ ಸಿನಿಮಾಗೆ ಅವರು ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಎನ್ನುವುದರ ಬಗ್ಗೆ ಇಂದಿನ ಲೇಖನಿಯಲ್ಲಿ ತಿಳಿಯೋಣ ಬನ್ನಿ.

27 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಆ ಸಿನಿಮಾದಲ್ಲಿ ಚಿರಂಜೀವಿ(Chiranjeevi) ಅವರು ನಟಿಸುವುದಕ್ಕಾಗಿ ಭರ್ಜರಿ 35 ರಿಂದ 50 ಲಕ್ಷ ರೂಪಾಯಿ ಸಂಬಾವನೆಯನ್ನು ಪಡೆದಿರಬಹುದು ಎನ್ನುವ ಅಂದಾಜು ಇದೆ. ಇಡೀ ಭಾರತ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಹಿರಿಮೆ ಕೂಡ ಚಿರಂಜೀವಿ ಅವರಿಗೆ ಸಲ್ಲುತ್ತದೆ ಎನ್ನುವುದನ್ನು ಈ ಸಂದರ್ಭದಲ್ಲಿ ನಾವು ಗಮನಿಸಬಹುದಾಗಿದೆ.

Leave a Comment

error: Content is protected !!