Gurudev Hoysala: ಡಾಲಿ ನಟನೆಯ ಹೊಯ್ಸಳ ಸಿನಿಮಾ ಮೊದಲ ದಿನ ಗಳಿಸಿದ ಕಲೆಕ್ಷನ್ ಎಷ್ಟು ಗೊತ್ತಾ?

Daali Dhananjay ಡಾಲಿ ಧನಂಜಯ್(Dhananjay) ಅಂದ್ರೇನೆ ಹಾಗೆ ಅವರು ನಟಿಸಿರುವ ಸಿನಿಮಾದಲ್ಲಿ ಒಂದಲ್ಲ ಒಂದು ಸಾಮಾಜಿಕ ಸಂದೇಶವನ್ನು ನೀಡಿಯೇ ನೀಡಿರುತ್ತಾರೆ. ಅದೇ ರೀತಿ ಅವರ ಹೊಸ ಸಿನಿಮಾ ಆಗಿರುವಂತಹ ಗುರುದೇವ್ ಹೊಯ್ಸಳ(Gurudev Hoysala) ಸಿನಿಮಾ ಕೂಡ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮಾರ್ಚ್ 30ರಂದು ಬಿಡುಗಡೆಯಾಗಿರುವ ಈ ಸಿನಿಮಾ ಈಗಾಗಲೇ ರಾಜ್ಯದಂತೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವಂತಹ ಡಾಲಿ ಧನಂಜಯ್(Daali Dhananjay) ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್(Amrutha Iyengar) ಅವರು ಕೂಡ ಸಾಕಷ್ಟು ಮೆಚ್ಚುವಂತಹ ಪರ್ಫಾರ್ಮೆನ್ಸ್ ನೀಡಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಅಷ್ಟರ ಮಟ್ಟಿಗೆ ಇಬ್ಬರೂ ಕೂಡ ಸಿನಿಮಾದಲ್ಲಿ ಚೆನ್ನಾಗಿ ನಟನೆಯ ಪ್ರದರ್ಶನವನ್ನು ನೀಡಿದ್ದಾರೆ.

ಸಿನಿಮಾ ಕೂಡ ಎಂಟರ್ಟೈನ್ಮೆಂಟ್ ಜೊತೆಗೆ ಸಮಾಜದಲ್ಲಿ ನಡೆಯುವಂತಹ ಕೆಲವೊಂದು ತಪ್ಪು ವಿಚಾರಗಳ ಕುರಿತಂತೆ ಎತ್ತಿ ಹಿಡಿಯುವ ಪ್ರಯತ್ನವನ್ನು ಕೂಡ ಮಾಡಿದ್ದು ಈ ಸಿನಿಮಾವನ್ನು ನೋಡಿದ ನಂತರ ಖಂಡಿತವಾಗಿ ಪ್ರೇಕ್ಷಕರಿಗೆ ಇದರ ಕುರಿತಂತೆ ತಿಳಿದು ಬರಲಿದೆ. ಇನ್ನು ಹೊಯ್ಸಳ(Hoysala) ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಮಾಡಿರುವಂತಹ ಕಲೆಕ್ಷನ್ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಬಾಕ್ಸ್ ಆಫೀಸ್ ಪಂಡಿತರ ಮೂಲಗಳ ಪ್ರಕಾರ ಮೊದಲ ದಿನವೇ ಭರ್ಜರಿ ಐದರಿಂದ ಆರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಎಂಬುದಾಗಿ ತಿಳಿದು ಬಂದಿದ್ದು ಈಗಾಗಲೇ ಸಿನಿಮಾ ಪ್ರೇಕ್ಷಕರಲ್ಲಿ ಸಿನಿಮಾದ ಕುರಿತಂತೆ ಪಾಸಿಟಿವ್ ರಿಪೋರ್ಟ್ ಓಡಾಡುತ್ತಿದೆ. ಹೀಗಾಗಿ ಖಂಡಿತವಾಗಿ ಮುಂದಿನ ದಿನಗಳಲ್ಲಿ ಹೊಯ್ಸಳ ಸಿನಿಮಾ(Hoysala Movie) ದೊಡ್ಡಮಟ್ಟದ ಕಲೆಕ್ಷನ್ ಮಾಡೋದು ಮಾತ್ರವಲ್ಲದೆ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಕೂಡ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು.

Leave a Comment

error: Content is protected !!