Gurudev Hoysala: ಹೊಯ್ಸಳನಿಗೆ ಪ್ರಾರಂಭವಾಯಿತು ನಮ್ಮವರಿಂದಲೇ ಕಾಟ! ಕೇಳಿದ್ರೆ ನೀವು ಬೇಸರ ಪಡ್ತೀರಾ.

Daali Dhananjay ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟ ನಟ ರಾಕ್ಷಸ ಡಾಲಿ ಧನಂಜಯ್(Daali Dhananjay) ನಟನೆಯ ಹೊಯ್ಸಳ ಸಿನಿಮಾ ಇದೇ ಮಾರ್ಚ್ 30ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಅನ್ನು ಕೂಡ ಪಡೆದುಕೊಂಡಿತು. ಆರಂಭದಲ್ಲಿ ಚಿತ್ರ ಮಂಕಾದ ಕಲೆಕ್ಷನ್ ಕಂಡಿದ್ದರು ಕೂಡ ದಿನದಿಂದ ದಿನಕ್ಕೆ ಪ್ರೇಕ್ಷಕರ ಪಾಸಿಟಿವ್ ರೆಸ್ಪಾನ್ಸ್ ನಿಂದ ಕಲೆಕ್ಷನ್ ನಲ್ಲಿ ಕೂಡ ಹೆಚ್ಚಳ ಕಂಡುಬಂದಿದೆ.

ಅಮೃತ ಅಯ್ಯಂಗಾರ್(Amrutha Iyengar) ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವಂತಹ ಸತತ ಮೂರನೇ ಸಿನಿಮಾ ಇದಾಗಿದ್ದು ಇವರಿಬ್ಬರ ಕಾಂಬಿನೇಷನ್ ಕೂಡ ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗತೊಡಗಿದೆ. ಸಿನಿಮಾದ ಯಶಸ್ಸಿನ ನಂತರ ಡಾಲಿ ಧನಂಜಯ್ ಅವರಿಗೆ ನಿರ್ಮಾಪಕರಾಗಿರುವ ಕಾರ್ತಿಕ್ ಗೌಡ(Karthik Gowda) ಒಂದು ಕೋಟಿಗೂ ಅಧಿಕ ಮೌಲ್ಯದ Toyota Vellfire ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಆದರೆ ಈಗ ಸಿನಿಮಾ ಚಿತ್ರಮಂದಿರಗಳಲ್ಲಿ ಅಷ್ಟೊಂದು ಚೆನ್ನಾಗಿ ಪ್ರದರ್ಶನ ಕಾಣುತ್ತಿಲ್ಲ ಯಾಕೆಂದರೆ ಐಪಿಎಲ್ ಈಗಾಗಲೇ ಪ್ರಾರಂಭವಾಗಿದ್ದು ಪ್ರೇಕ್ಷಕರೆಲ್ಲರ ಗಮನ ಕೂಡ ಐಪಿಎಲ್ ಪಂದ್ಯಗಳತ್ತ ಹೊರಟಿದೆ. ಹೀಗಾಗಿ ಗುರುದೇವ್ ಹೊಯ್ಸಳ(Gurudev Hoysala) ಸಿನಿಮಾದ ಕಲೆಕ್ಷನ್ ವಿಚಾರದಲ್ಲಿ ಕೂಡ ಇಳಿಮುಖ ಕಂಡು ಬಂದಿದೆ.

ಐಪಿಎಲ್(IPL) ಕಾರಣದಿಂದಾಗಿ ಒಂದೊಳ್ಳೆ ಕನ್ನಡ ಸಿನಿಮಾವನ್ನು ನಾವು ಬಿಟ್ಟುಕೊಡುತ್ತಿರುವುದು ಸರಿಯಲ್ಲ ಎಂಬುದು ಪ್ರತಿಯೊಬ್ಬ ಸಿನಿಮಾ ಪ್ರೇಕ್ಷಕರ ನಿಜವಾದ ವಾದವಾಗಿದ್ದು ಒಂದು ವೇಳೆ ನೀವು ಇನ್ನೂ ಕೂಡ ಹೊಯ್ಸಳ ಸಿನಿಮಾವನ್ನು ನೋಡದೆ ಹೋದರೆ ತಪ್ಪದೇ ನಿಮ್ಮ ಕುಟುಂಬದ ಜೊತೆಗೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾವನ್ನು ವೀಕ್ಷಿಸಿ.

Leave a Comment

error: Content is protected !!