Dacchu Kiccha: ನಿಮ್ಮಿಬ್ಬರನ್ನು ಒಂದೇ ಸಿನಿಮಾದಲ್ಲಿ ಯಾವಾಗ ನೋಡೋದು ಎಂದು ಕೇಳಿದಾಗ ದಚ್ಚು ನೀಡಿದ ಉತ್ತರ ಏನು? ಇಲ್ಲಿದೆ ನೋಡಿ ಸಂಪೂರ್ಣ ಸುದ್ದಿ.

Dacchu Kiccha ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಎರಡು ದೇಹ ಒಂದೇ ಜೀವ ಎನ್ನುವಂತಹ ವ್ಯಕ್ತಿತ್ವವನ್ನು ಹೊಂದಿದಂತಹ ಸ್ನೇಹಕ್ಕೆ ಮತ್ತೊಂದು ರೂಪ ಎನ್ನುವಂತಹ ರೀತಿಯಲ್ಲಿ ಬಾಳಿ ಬದುಕಿದವರು. ಅಂಬಿ ಹಾಗೂ ವಿಷ್ಣು ನಂತರ ಕನ್ನಡ ಚಿತ್ರರಂಗದ ಕುಚಿಕುಗಳಾಗಿ ಎಲ್ಲರ ಮನಸ್ಸನ್ನು ಗೆದ್ದಂತಹ ಜೀವಗಳು ಇವರಿಬ್ಬರು.

ಆದರೆ ಇವರಿಬ್ಬರ ನಡುವೆ ಯಾರು ಹುಳಿ ಹಿಂಡಿದ್ದಾರೋ ಏನೋ ಇವರಿಬ್ಬರೂ ಕೂಡ ಈಗ ಬದ್ಧ ವೈರಿಗಳಾಗಿದ್ದಾರೆ. ಇವರಿಬ್ಬರ ನಡುವಿನ ವೈ ಮನಸ್ಸಿಗೆ ಕಾರಣ ಏನೇ ಇರಬಹುದು ಆದರೆ ಇಂದಿಗೂ ಕೂಡ ಇವರಿಬ್ಬರ ಅಭಿಮಾನಿಗಳು ಇವರಿಬ್ಬರು ಜೊತೆಯಾಗಿ ನಟಿಸಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಇನ್ನು ಇವರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಬೇಕು ಎನ್ನುವಂತಹ ಆಸೆ ಕೂಡ ಅಭಿಮಾನಿಗಳಲ್ಲಿ ಇತ್ತು.

ಇನ್ನು ಇದೇ ಪ್ರಶ್ನೆಯನ್ನು ಅಂಬರೀಶ ಸಿನಿಮಾದ ಬಿಡುಗಡೆಯ ಸಂದರ್ಭದಲ್ಲಿ ಸಂದರ್ಶಕ್ಕೆ ಒಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್(challenging Star Darshan) ರವರಿಗೆ ಕೇಳಿದಾಗ ಅವರು ನೀಡಿದಂತಹ ಉತ್ತರ ಏನಾಗಿತ್ತು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಈ ಪ್ರಶ್ನೆಯನ್ನು ದರ್ಶನ್ ಅವರ ಬಳಿ ಕೇಳಿದಾಗ ಡಿ ಬಾಸ್(Dboss) ಇಬ್ಬರಿಗೂ ಕೂಡ ಒಂದೇ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಆದರೆ ನಮ್ಮಿಬ್ಬರನ್ನು ಕೂಡ ನಾಯಕ ನಟರನ್ನಾಗಿ ಹ್ಯಾಂಡಲ್ ಮಾಡಬಲ್ಲಂತಹ ನಿರ್ದೇಶಕರು ನಮ್ಮ ಚಿತ್ರರಂಗದಲ್ಲಿ ಇಲ್ಲ ಆ ರೀತಿಯಾದ ನಿರ್ದೇಶಕರು ಬಂದಾಗ ಖಂಡಿತವಾಗಿ ನಾವು ಮಾಡುತ್ತೇವೆ ಎಂಬುದಾಗಿ ಹೇಳಿದ್ದರು. ಇದರ ಬಗ್ಗೆ ಮಾತನಾಡುತ್ತಾ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂತಹ ನಿರ್ದೇಶಕ ಕೇವಲ ಪುಟ್ಟಣ್ಣ ಕಣಗಾಲ್(Puttanna Kanagal) ಆಗಿದ್ದರೂ ಎಂಬುದಾಗಿ ಕೂಡ ನೆನಪಿಸಿಕೊಂಡಿದ್ದಾರೆ.

Leave a Comment

error: Content is protected !!