Darshan: ಡಿ ಬಾಸ್ ದರ್ಶನ್ ಅವರ ಡೆವಿಲ್ ಸಿನಿಮಾದ ಹೇರ್ ಕಟ್ಗೆ ಕೇರ್ ಫಿದಾ ಆದ ಫ್ಯಾನ್ಸ್!

ಸ್ನೇಹಿತರೆ ಫೆಬ್ರವರಿ 16ನೇ ತಾರೀಕು 2024 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಮುಂದಿನ ಚಿತ್ರ ಡೆವಿಲ್(Devil cinema) ನ ಕೆಲ ಗ್ಲಿಮ್ಸ್ ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದರು. ಇನ್ನು ಫಸ್ಟ್ ಲುಕ್ ಪೋಸ್ಟರ್ ನಲ್ಲಿ ದರ್ಶನ್(Darshan) ಅವರಂತೂ ಬಹಳಾನೆ ಸ್ಟೈಲಿಶ್ ಆಗಿ ಹಿಂದೆಂದೂ ಕಾಣಿಸಿಕೊಳ್ಳದ ರೀತಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳಂತೂ ದರ್ಶನ್ ಅವರ ಹೊಸ ಲುಕ್ಕಿಗೆ ಫಿದಾ ಆಗಿ ಹೋಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಡೆವಿಲ್ ಸಿನಿಮಾದ ಫೋಟೋ ಭಾರಿ ವೈರಲ್ ಕೂಡ ಆಗಿತ್ತು.

ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಕೂಡ ದರ್ಶನ್ ಅವರ ಹೊಸ ಲುಕ್ಕನ್ನು ಇಷ್ಟಪಟ್ಟಿದ್ದರು ಹಾಗೂ ಮತ್ತಷ್ಟು ಜನ ಅದನ್ನು ಅನುಸರಿಸಲು ಪ್ರಾರಂಭಿಸಿ ಬಿಟ್ಟಿದ್ದಾರೆ. ಹೌದು ಗೆಳೆಯರೇ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ರವರು ತಮ್ಮ ಡೆವಿಲ್ ಸಿನಿಮಾಗಾಗಿ ಹೇರ್ ಕಟ್ ಮಾಡಿಸಿದಂತಹ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗುತ್ತಾ ನೆಟ್ಟಿಗಳನ್ನು ಸೆಳೆಯುತ್ತಿದೆ.

ಕ್ರಾಂತಿ ಹಾಗೂ ಕಾಟೇರ ಸಿನಿಮಾಗಳಲ್ಲಿ ಪಕ್ಕಾ ಹಳ್ಳಿ ಹೈದನಾಗಿ ಪ್ರೇಕ್ಷಕರ ಗಮನ ಸೆಳೆದಿದ್ದ ದರ್ಶನ್ ಇದೀಗ ಮತ್ತೆ ತಮ್ಮ ಹಳೆ ಸಿನಿಮಾಗಳ ಎರಾಗೆ ವಾಪಸ್ ಆಗುತ್ತಿದ್ದು ಹಿಂದೆಂದೂ ಕಾಣಿಸಿಕೊಳ್ಳದಷ್ಟು ಹ್ಯಾಂಡ್ಸಮ್ ಆಗಿ ಕಂಬ್ಯಾಕ್ ಮಾಡಿದ್ದಾರೆ. ಸದಾ ತಮ್ಮ ಸಿನಿಮಾಗಳಿಂದ ಸಮಾಜಕ್ಕೆ ಯಾವುದಾದರೂ ಸಂದೇಶ ಕೊಡುವಂತಹ ನಿಟ್ಟಿನಲ್ಲಿ ತೆರೆಗೆ ಬರುವಂತಹ ದರ್ಶನ್ ಅವರು ಡೆವಿಲ್ ಚಿತ್ರದ ಮೂಲಕ ಯಾವ ನೀತಿ ಪಾಠವನ್ನು ಹೇಳ ಹೊರಟಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಹಿಂದೆ 2018 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಸಿನಿಮಾದಲ್ಲಿ ಕೆಲಸ ಮಾಡಿದ ಪ್ರಕಾಶ್ ವೀರ್ ಅವರ ಆಕ್ಷನ್ ಕಟ್ ನಲ್ಲಿ ಸಿನಿಮಾ ತಯಾರಾಗುತ್ತಿದ್ದು ಚಿತ್ರಕ್ಕೆ ಸರ್ಕಸ್ ಮತ್ತು ವಾಮನ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿ ಭಾರಿ ಪ್ರಖ್ಯಾತಿ ಪಡೆದಿರುವಂತಹ ರಚನಾ ರೈ(Rachana Rai) ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಇರುವಂತಹ ಪ್ರಸನ್ನ ಥಿಯೇಟರ್ ನಲ್ಲಿ ನಡೆದಂತಹ ಕಾರ್ಯಕ್ರಮ ಒಂದರಲ್ಲಿ ದರ್ಶನ್ರವರು ಡೆವಿಲ್ ಸಿನಿಮಾ ಇದೆ ವರ್ಷ ಅಂದ್ರೆ 2024ರ ಅಂತ್ಯದೊಳಗೆ ತೆರೆಗೆ ಬರಲಿರುವಂತಹ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದ್ದು, ಈಗಾಗಲೇ ಸಿನಿಮಾದ ಶೂಟಿಂಗ್ ಕೆಲಸಗಳು ಪ್ರಾರಂಭವಾಗಿರುವಂತಹ ಮಾಹಿತಿ ಅಧಿಕೃತವಾಗಿ ತಿಳಿದು ಬಂದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!