ತಿನ್ನಲ್ಲ ಕುಡಿಯಲ್ಲ ನಿಂದೂ ಒಂದು ಲೈಫ್ ಆ? ಅಂತ ನೇರವಾಗಿ ಹೇಳೇ ಬಿಟ್ಟರು ಡಿ ಬಾಸ್

ಡಿ ಬಾಸ್ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ ಡಿ ಬಾಸ್ ಅವರು ಮನಸ್ಸಲ್ಲೊಂದು ಬಾಯಲ್ಲೊಂದು ಮಾತನಾಡುವದಕ್ಕೆ ಮನಸ್ಸಿನಲ್ಲಿ ತೋಚಿದ್ದನ್ನು ಬಾಯಲಿ ಹೇಳಿಬಿಡುತ್ತಾರೆ. ಮಾತು ಕಟುವಾದರೂ ಮನಸ್ಸು ತುಂಬಾ ಮೃದು. ದರ್ಶನ್ ಅವರು ಖಡಕ್ಕಾದ ವ್ಯಕ್ತಿತ್ವವೇ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತದೆ. ಆದರೆ ತಮ್ಮ ನೇರ ನುಡಿ ಇಂದ ದರ್ಶನ್ ಅವರು ಹಲವಾರು ಕಾಂಟ್ರವರ್ಸಿ ಗಳನ್ನು ಕೂಡ ಮೈಮೇಲೆ ಹಾಕಿಕೊಂಡಿದ್ದಾರೆ.

ನಿಮಗೆಲ್ಲ ತಿಳಿದಿರುವ ಹಾಗೆ ದರ್ಶನ್ ಅವರನ್ನು ಕನ್ನಡ ನ್ಯೂಸ್ ಚಾನೆಲ್ ಗಳು ಬ್ಯಾನ್ ಮಾಡಿದ್ದಾರೆ ದರ್ಶನ್ ಅವರ ನೇರ ನುಡಿ ಗಳನ್ನು ಸಹಿಸಲಾರದೆ ನ್ಯೂಸ್ ಚಾನೆಲ್ ಗಳು ದರ್ಶನ್ ಅವರ ಮೇಲೆ ಕೋಪಗೊಂಡಿದ್ದಾರೆ. ಆದರೆ ದರ್ಶನ್ ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡಿಕೊಂಡು ಮುನ್ನುಗ್ಗುತ್ತಿದ್ದಾರೆ. ನ್ಯೂಸ್ ಚಾನೆಲ್ ಗಳಲ್ಲಿ ದರ್ಶನ್ ಅವರ ಸುದ್ದಿ ಪ್ರಸಾರ ಮಾಡಲು ಬಾನ್ಎಂ ಮಾಡಿದರು. ಆದರೆ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಅವರ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

ದರ್ಶನ್ ಅವರು ಇತ್ತೀಚೆಗೆ ಜಮೀರ್ ಅಹ್ಮದ್ ಖಾನ್ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದರು. ಜಮೀರ್ ಅವರ ಹುಟ್ಟು ಹಬ್ಬದ ಸೆಲೆಬ್ರೆಷನ್ ನನ್ನು ಡಿ ಬಾಸ್ ಅದ್ಧೂರಿಯಾಗಿ ಆಚರಿಸಿದ್ದಾರೆ. ಡಿ ಬಾಸ್ ಅವರ ಗೆಳೆಯರು ಮತ್ತು ಜಮೀರ್ ಅಹ್ಮದ್ ಖಾನ್ ಅವರ ಆಪ್ತವರ್ಗದ ಸಿಬ್ಬಂದಿಗಳು ಈ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಜಮೀರ್ ಅವರು ಹುಟ್ಟು ಹಬ್ಬಕ್ಕೆ ಬಂದಿದ್ದ ಅತಿಥಿಗಳಿಗೆ ಜಬರದಸ್ತ್ ಪಾರ್ಟಿಯೊಂದನ್ನು ಅರೇಂಜ್ ಮಾಡಿದ್ದರು. ಪಾರ್ಟಿ ಮುಗಿದ ಮೇಲೆ ದರ್ಶನ್ ಅವರು ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ವ್ಯಕ್ತಿಗೆ ಹೇಳಿದ ನೇರ ನುಡಿಗಳು ಇದೀಗ ವೈ ರಲ್ ಆಗಿವೆ.

ಹುಟ್ಟುಹಬ್ಬದ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ತೆರಳಬೇಕೆಂದು ಜಮೀರ್ ಅಹ್ಮದ್ ಮತ್ತು ದರ್ಶನ್ ಅವರು ಸಿದ್ಧರಾಗಿರುತ್ತಾರೆ. ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ವ್ಯಕ್ತಿಯೊಬ್ಬ ದರ್ಶನ್ ಅವರ ಬಳಿ ಬಂದು ಅಭಿನಂದನೆಗಳನ್ನು ತಿಳಿಸುತ್ತಾನೆ. ಆಗ ಜಮೀರ್ ಅಹಮದ್ ಅವರು ಈ ಹುಡುಗ ನನ್ನ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಏನನ್ನೂ ಕೂಡ ತಿನ್ನಲಿಲ್ಲ ಕುಡಿಯಲಿಲ್ಲ ಎಂದು ಹೇಳಿದ್ದಾರೆ. ಆಗ ದರ್ಶನ್ ಅವರು ತಮಾಷೆಯಾಗಿ ಕುಡಿಯಲ್ಲ ತಿನ್ನಲ್ಲ ನಿಂದೂ ಒಂದು ಲೈಫ್ ಆ? ಎಂದು ನಗಾಡುತ್ತ ಮನಸ್ಸಿನಲ್ಲಿದ್ದ ಖಡಕ್ ಮಾತುಗಳನ್ನು ಹೇಳಿದ್ದಾರೆ.

ದರ್ಶನ್ ಅವರು ಹೇಳಿರುವ ಕುಡಿಯಲ್ಲ ತಿನ್ನೊಲ್ಲ ಎಂಬ ಪದಗಳನ್ನು ಅಪಾರ್ಥ ಮಾಡಿಕೊಂಡು ಕೆಲವರು ಡಿ ಬಾಸ್ ಮೇಲೆ ಬೇಸರ ಹೊರಹಾಕಿದ್ದಾರೆ. ಇನ್ನೂ ಕೆಲವರು ಡಿ ಬಾಸ್ ಅವರು ಏನೇ ಮಾತಾಡಲಿ ಸ್ಟ್ರೇಟ್ ಆಗಿ ಮಾತಾಡ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೊನೆಯದಾಗಿ ದರ್ಶನ್ ಅವರ ಬಗ್ಗೆ ಹೇಳಬೇಕೆಂದರೆ ನೆಲ ಜಲ ಭಾಷೆ ವಿಚಾರಕ್ಕೆ ಬಂದರೆ ಯಾವಾಗಲೂ ದರ್ಶನ್ ಅವರ ಸಪೋರ್ಟ್ ಇದ್ದೇ ಇರುತ್ತೆ ಈ ವಿಷಯಕ್ಕೆ ದರ್ಶನ್ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು.

Leave A Reply

Your email address will not be published.

error: Content is protected !!