Weekend With Ramesh: ಎಲ್ಲರಿಗಿಂತ ಹೆಚ್ಚು ಟಿಆರ್ಪಿ ಪಡೆದಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಡಿ ಬಾಸ್ ಸಂಚಿಕೆಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

Darshan Thoogudeepa ಇತ್ತೀಚಿನ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮ ಯಾವ ರೀತಿಯಲ್ಲಿ ಟ್ರೆಂಡಿಂಗ್ ಆಗುತ್ತಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ ಹಾಗೂ ನೀವು ಕೂಡ ವಾರಾಂತ್ಯದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ನೋಡಲು ಈಗ ಕಾತುರರಾಗಿರುತ್ತೀರಿ. ಇದು ಈಗಾಗಲೇ ಕಳೆದ ನಾಲ್ಕು ಸೀಸನ್ ಗಳಿಂದಲೂ ಕೂಡ ಪ್ರೇಕ್ಷಕರನ್ನು ರಂಜಿಸುತ್ತಿರುವಂತಹ ಸ್ಪೂರ್ತಿದಾಯಕ ಕಾರ್ಯಕ್ರಮ.

ಇನ್ನು ಈ ಕಾರ್ಯಕ್ರಮದಲ್ಲಿ ಇದುವರೆಗೂ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಗಾಗಿರುವ ಹಾಗೂ ಹೆಚ್ಚು ಟಿಆರ್‌ಪಿಯನ್ನು ಪಡೆದುಕೊಂಡಿರುವಂತಹ ಎಪಿಸೋಡ್ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ ಮೈಸೂರಿನ ಗಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಎಪಿಸೋಡ್ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಡಿ ಬಾಸ್(Dboss) ರವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದ ಎಪಿಸೋಡ್ ನಲ್ಲಿ ಅವರು ಹೇಗೆ ಹಾಲು ಮಾರುತಿದ್ದ ಹುಡುಗನಿಂದ ಇಂದು ಕಟೌಟ್ಗಳ ಮೇಲೆ ಹಾಲಾಭಿಷೇಕವನ್ನು ಮಾಡಿಸಿಕೊಳ್ಳುವುದರವರೆಗೂ ಕೂಡ ಅವರ ಜೀವನ ಹೇಗೆ ನಡೆದುಕೊಂಡು ಬಂದಿತು ಎಂಬುದನ್ನು ಸಂಪೂರ್ಣ ವಿವರವಾಗಿ ಹೇಳಿದ್ದರು. ಇನ್ನು ಈ ಕಾರ್ಯಕ್ರಮದ ಎರಡು ಎಪಿಸೋಡ್ ಗಳಿಗಾಗಿ ಅವರು ಪಡೆದುಕೊಂಡಂತಹ ಸಂಭಾವನೆ ಎಷ್ಟಿರಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ, ಬಜಾರ್ ನಲ್ಲಿ ಅತ್ಯಂತ ದುಬಾರಿಯಾಗಿರುವಂತಹ ಬಿಳಿಯಾನೆ ನಮ್ಮೆಲ್ಲರ ಆರಡಿ ಕಟೌಟ್ ಆಗಿರುವಂತಹ ಡಿ ಬಾಸ್. ಹೀಗಾಗಿ ಎರಡು ದಿನಗಳ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಎಪಿಸೋಡ್ ಗಳಿಗಾಗಿ 50 ಲಕ್ಷಕ್ಕೂ ಅಧಿಕ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!