Athiya Shetty: ಕೆ ಎಲ್ ರಾಹುಲ್ ಅವರನ್ನು ಮದುವೆಯಾದ ಕೆಲವೇ ತಿಂಗಳಿಗೆ ನನ್ನ ಆಸೆ ಪೂರೈಸಿತು ಎಂದು ಗುಡ್ ನ್ಯೂಸ್ ನೀಡಿದ ಸುನಿಲ್ ಶೆಟ್ಟಿ ಮಗಳು!

KL Rahul Wife ಕೆಲವು ತಿಂಗಳುಗಳ ಹಿಂದೆ ಹೋದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಮೂಲದ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಆಗಿರುವಂತಹ ಕೆಎಲ್ ರಾಹುಲ್(KL Rahul) ರವರು ಸುನಿಲ್ ಶೆಟ್ಟಿ(Suniel Shetty) ಅವರ ಮಗಳಾಗಿರುವ ನಟಿ ಅಥಿಯಾಶೆಟ್ಟಿ(Athiya Shetty) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಸಾಕಷ್ಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗಳು ಕೊನೆಗೂ ಕೂಡ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಪ್ರೀತಿಸಿ ಮದುವೆಯಾಗುವುದರ ಮೂಲಕ ಇಂದಿನ ಯುವ ಜನತೆಗೆ ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಗುಟ್ಟನ್ನು ಈ ಮೂಲಕ ತಿಳಿಸಿದ್ದಾರೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಇವರಿಬ್ಬರ ಪ್ರೀತಿ ಎನ್ನುವುದು ಪ್ರತಿಯೊಬ್ಬರಿಗೂ ಮಾದರಿಯಾಗಿತ್ತು.

ಇನ್ನು ಮದುವೆಯಾದ ಕೆಲವೇ ತಿಂಗಳಿಗೆ ಈಗ ನಟಿ ಅಥಿಯ ಶೆಟ್ಟಿ(Athiya Shetty) ತನ್ನ ತಂದೆಗೆ ಗುಡ್ ನ್ಯೂಸ್ ತಿಳಿಸಿದ್ದು ಪ್ರತಿಯೊಬ್ಬರೂ ಕೂಡ ಇದರಿಂದ ಸಂತೋಷಗೊಂಡಿದ್ದಾರೆ. ಅಷ್ಟಕ್ಕೂ ಆ ಗುಡ್ ನ್ಯೂಸ್ ಯಾವುದು ಹಾಗೂ ಎಲ್ಲರೂ ಯಾಕೆ ಸಂತೋಷ ಪಡುತ್ತಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಚಿಕ್ಕ ವಯಸ್ಸಿನಿಂದಲೂ ಕೂಡ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿದ್ದ ಸುನಿಲ್ ಶೆಟ್ಟಿ(Suniel Shetty) ಅವರ ಮಗಳಿಗೆ ತನ್ನ ತಂದೆಯ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಬೇಕೆನ್ನುವ ಆಸೆ ಇತ್ತು. ಕೊನೆಗೂ ಕೂಡ ಈಗ ಒಂದೇ ಜಾಹಿರಾತಿನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅದು ಈಡೇರಿದ್ದು ಇದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

Leave a Comment

error: Content is protected !!