Kiccha Sudeep ಕ್ರಾಂತಿ ಸಿನಿಮಾಗಾಗಿ ಪ್ರಮೋಷನ್ ಮಾಡಲು ಹೊರಟ್ರಾ ಕಿಚ್ಚ ಸುದೀಪ್? ಯಾರಿಗೂ ಗೊತ್ತಿಲ್ಲದ ವಿಚಾರ ಹೊರಬಿತ್ತು ನೋಡಿ.

Dboss Kiccha ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಅಂದ್ರೆ ಇದೇ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿವೆ. ಅಭಿಮಾನಿಗಳೇ ಕ್ರಾಂತಿ ಸಿನಿಮಾವನ್ನು ತಮ್ಮ ಸ್ವಂತ ಸಿನಿಮಾ ಎನ್ನುವಂತೆ ರಾಜ್ಯಾದ್ಯಂತ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಪ್ರಮೋಷನ್(Promotion) ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಸಿನಿಮಾ ಎಂಬುದಾಗಿ ಕ್ರಾಂತಿಯನ್ನು ಪರಿಗಣಿಸಬಹುದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.

ಕ್ರಾಂತಿ ಸಿನಿಮಾ ಪಾಸಿಟಿವ್ ಹಾಗೂ ನೆಗೆಟಿವ್ ಎರಡು ರೀತಿಯಲ್ಲಿ ಕೂಡ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಾರೆಯಾಗಿ ಪ್ರಚಾರವನ್ನಂತೂ(Publicity) ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಂತೆ ಕೂಡ ಕೆಲವೊಂದು ನೆಗೆಟಿವ್ ವಿಚಾರಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿವೆ. ಇದರ ನಡುವಲ್ಲಿಯೇ ಅವರ ಅಭಿಮಾನಿಯೊಬ್ಬ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾನೆ ಹಾಗೂ ಇದಕ್ಕೆ ಈಗ ಕಿಚ್ಚ ಸುದೀಪ್ ಅವರ ಹೆಸರು ಕೂಡ ಸೇರಿಕೊಂಡಿದೆ.

ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಒಬ್ಬ ತನ್ನ ಬೈಕ್ ಗೆ ಕ್ರಾಂತಿ ಸಿನಿಮಾದ ಡಿಸೈನ್(Design) ಗಳನ್ನು ಪೋಸ್ಟರ್ ಮಾಡಿಕೊಂಡು ಹಚ್ಚಿಕೊಂಡಿದ್ದಾನೆ. ಕನ್ನಡ ಚಿತ್ರರಂಗದ ಹಲವಾರು ಸೆಲಬ್ರೆಟಿಗಳ ಜೊತೆಗೆ ಕ್ರಾಂತಿ ಸಿನಿಮಾದ ಬೈಕ್ ಜೊತೆಗೆ ವೀಡಿಯೋ ಹಾಗೂ ಫೋಟೋ ತೆಗೆದುಕೊಂಡು ಪ್ರಮೋಷನ್ ಮಾಡುತ್ತಿದ್ದಾರೆ. ಇದಕ್ಕೆ ಈಗ ಕಿಚ್ಚ ಸುದೀಪ್ ಅವರ ಹೆಸರು ಕೂಡ ತಳುಕು ಹಾಕಿಕೊಂಡಿದೆ.

ಹೌದು ಗೆಳೆಯರೇ ಕ್ರಾಂತಿ ಬೈಕ್ ಅನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಕಿಚ್ಚ ಸುದೀಪ್ ಅವರ ಮನೆಗೆ ಕೂಡ ಅವರ ಜೊತೆಗೆ ಸೆಲ್ಫಿ(Selfie) ಹಾಗೂ ವಿಡಿಯೋ ತೆಗೆದುಕೊಂಡು ಕ್ರಾಂತಿ ಸಿನಿಮಾಗೆ ಪ್ರಚಾರ ಮಾಡಲು ಹೋಗಿದ್ದರು ಆದರೆ ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ಮನೆಯಲ್ಲಿರಲಿಲ್ಲ. ಹೀಗಾಗಿ ದರ್ಶನ್ ಅಭಿಮಾನಿ ಆ ಒಂದು ಕನಸು ಮಾತ್ರ ಈಡೇರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕಿಚ್ಚ ಸುದೀಪ್ ಅವರು ಈ ವಿಡಿಯೋವನ್ನು ನೋಡಿ ಮತ್ತೆ ಆ ದರ್ಶನ್ ಅಭಿಮಾನಿಯನ್ನು ಕರೆದು ಕ್ರಾಂತಿ ಸಿನಿಮಾಗೆ ಪ್ರಚಾರವನ್ನು ನೀಡಿದರೂ ಕೂಡ ಆಶ್ಚರ್ಯ ಎನಿಸಲಾರದು.

Leave a Comment

error: Content is protected !!