Actor Yash Birthday: ಯಶ್ ಬರ್ತಡೆ ದಿನ ಡಿ ಬಾಸ್ ಫ್ಯಾನ್ಸ್ ಹಾವಳಿ, ದಾಖಲೆ ಬರೆದ ದರ್ಶನ್ ಫ್ಯಾನ್ಸ್

Actor Yash Birthday Celebration ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜನವರಿ 8 ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕನಟ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮ ದಿನಾಚರಣೆಯ (Birthday Celebration) ಸಂಭ್ರಮದ ದಿನವಾಗಿದೆ. ಅಭಿಮಾನಿಗಳು ಅವರ ಜನ್ಮ ದಿನಾಚರಣೆಯನ್ನು ಸಾಕಷ್ಟು ವಿವಿಧ ರೀತಿಯಲ್ಲಿ ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯದಾದ್ಯಂತ ಹಾಗೂ ದೇಶ ವಿದೇಶಗಳಲ್ಲಿ ಕೂಡ ಆಚರಿಸಿಕೊಂಡಿರುವುದು ತಿಳಿದು ಬಂದಿದೆ. ಇನ್ನು ಅವರ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನಾಚರಣೆಯ ಪ್ರಯುಕ್ತವಾಗಿ ವಿಶೇಷ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದ್ದಾರೆ.

Actor Yash Birthday Celebration

ಹೌದು ಮಿತ್ರರೇ, ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಕರಿಯರ್ ನಲ್ಲಿ (Film Career) ಮೈಲಿಗಲ್ಲನ್ನು ನೆಟ್ಟಿರುವ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ವನ್ನು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಮರು ಬಿಡುಗಡೆ ಮಾಡಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೆಯ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಮಾಡಿರುವ ಸೆಲೆಬ್ರೇಶನ್ ಅದಕ್ಕೂ ಮಿಗಿಲಾಗಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Darshan D Boss
Darshan D Boss

ಹೌದು ಗೆಳೆಯರೇ ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಟ್ರೈಲರ್ ( Trailer ) ಅನ್ನು ದರ್ಶನ್ ಅವರ ಅಭಿಮಾನಿಗಳು ಕರ್ನಾಟಕ ರಾಜ್ಯದಾದ್ಯಂತ ಬರೋಬರಿ 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಸೆಲೆಬ್ರೇಷನ್ (Celebration) ಮಾಡಿದ್ದಾರೆ. ಕೇವಲ ಟ್ರೈಲರ್ ಬಿಡುಗಡೆಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಯನ್ನು ಮಾಡಿದ್ದಾರೆ ಎಂದರೆ ಖಂಡಿತವಾಗಿ ಇದೊಂದು ದಾಖಲೆಯೇ ಸರಿ ಎಂದು ಹೇಳಬಹುದಾಗಿದೆ. ಈಗಾಗಲೇ ದಾಖಲೆಯ ಮಟ್ಟದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾದ ಟ್ರೈಲರ್ ವೀಕ್ಷಣೆಯನ್ನು ಪಡೆದುಕೊಂಡಿದೆ.

ಇದನೊಮ್ಮೆ ಓದಿ..ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ, ಸಂಚಲನಾತ್ಮಕ ಹೇಳಿಕೆ ಕೊಟ್ಟ ಸ್ಟಾರ್ ನಟಿ

ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿರುವ ಕ್ರಾಂತಿ ಟ್ರೈಲರ್ ಕನ್ನಡ ಚಿತ್ರರಂಗದ ಹಲವಾರು ದಾಖಲೆಗಳನ್ನು (Records) ಈಗಾಗಲೇ ಮುರಿದು ಬಿಸಾಕಿದೆ. ಒಟ್ಟಾರೆಯಾಗಿ ಹೇಳುವುದಾದರೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ನೆಚ್ಚಿನ ನಟ ಯಶ್ ಅವರಿಗಾಗಿ ಅವರ ಜನ್ಮ ದಿನಾಚರಣೆಯ ಸಂಭ್ರಮವನ್ನು ಆಚರಿಸಿದ್ದಕ್ಕಿಂತ ಹೆಚ್ಚಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕ್ರಾಂತಿ ಸಿನಿಮಾದ ಟ್ರೈಲರ್ ಬಿಡುಗಡೆಯನ್ನು ಸಂಭ್ರಮಿಸಿರುವುದೇ ದೊಡ್ಡದಾಗಿ ಸೌಂಡ್ ಮಾಡುತ್ತಿದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!