Dhruva Sarja: ಮೊದಲ ಬಾರಿಗೆ ಮಗಳ ಫೋಟೋವನ್ನು ಬಹಿರಂಗಪಡಿಸಿದ ನಟ ಧ್ರುವ ಸರ್ಜಾ!

Dhruva Sarja ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಆಗಿರುವಂತಹ ನಟ ದ್ರುವ ಸರ್ಜಾ(Dhruva Sarja) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರೇರಣಶಂಕರ್ ಅವರನ್ನು ಮದುವೆ ಆಗುವ ಮೂಲಕ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವೇ ಇದೆ.

ಮಾಡಿರೋದು ಬೆರಳೆಣಿಕೆಯಷ್ಟು ಸಿನಿಮಾಗಳು ಆಗಿದ್ದರೂ ಕೂಡ ಚಿತ್ರರಂಗದಲ್ಲಿ ಅವರಿಗೆ ಇರುವಂತಹ ಬೇಡಿಕೆ ಹಾಗೂ ಅಭಿಮಾನಿ ಬಳಗದ ಸಂಖ್ಯೆ ಸಾಕಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಯಾರು ಕೂಡ ನೆನಪು ಬಿಡಬಾರದು. ಧ್ರುವ ಸರ್ಜಾ(Dhruva Sarja) ಅವರು ಸದ್ಯದ ಮಟ್ಟಿಗೆ ನಿಮಗೆಲ್ಲರಿಗೂ ಗೊತ್ತಿರಬಹುದು ಮಾರ್ಟಿನ್(Martin Kannada Film) ಹಾಗೂ ಕೆ ಡಿ ಸಿನಿಮಾಗಳ ಚಿತ್ರಿಕರಣದಲ್ಲಿ ನಿರತರಾಗಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರಬಹುದು ಕೆಲವು ತಿಂಗಳುಗಳ ಹಿಂದಷ್ಟೇ ಅಂದರೆ ಏಳು ತಿಂಗಳ ಹಿಂದಷ್ಟೇ ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ದಂಪತಿಗಳು ಹೆಣ್ಣು ಮಗುವಿಗೆ ತಂದೆ ತಾಯಿಗಳಾಗಿರುತ್ತಾರೆ. ಸಾಕಷ್ಟು ಸಮಯಗಳಿಂದ ದುಃಖದ ಮಡುವಿನಲ್ಲಿ ತುಂಬಿದ ಸಂಸಾರಕ್ಕೆ ಇದು ಸಂತೋಷದ ಗಳಿಗೆ ಆಗಿ ಪರಿಣಮಿಸಿತ್ತು. ಆದರೆ ಇದುವರೆಗೂ ಕೂಡ ಯಾವುದೇ ಅಭಿಮಾನಿಗಳು ಮಗುವಿನ ಮುಖ ನೋಡಲು ಸಾಧ್ಯವಾಗಿರಲಿಲ್ಲ.

ಈಗ ಕೊನೆಗೂ ಕೂಡ ಧ್ರುವ ಸರ್ಜಾ(Dhruva Sarja) ಅವರ ತಮ್ಮ ಮಗಳ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಪ್ರತಿಯೊಬ್ಬ ಅಭಿಮಾನಿಗಳು ಕೂಡ ಇದನ್ನು ನೋಡಿ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ನೀವು ಕೂಡ ಈ ಫೋಟೋವನ್ನು ನೋಡಬಹುದಾಗಿದ್ದು ತಪ್ಪದೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!