Dr Bro: ಸಿನಿಮಾಗೆ ಎಂಟ್ರಿ ಕೊಟ್ಟ ಡಾ ಬ್ರೋ. ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿರುವ ಆ ಸಿನಿಮಾ ಯಾವುದು ಗೊತ್ತಾ?

Dr Bro ಕನ್ನಡ ಯೂಟ್ಯೂಬ್ ಲೋಕದಲ್ಲಿ ಚಿರಸ್ಥಾಯಿ ಆಗುವಂತಹ ಹೆಸರನ್ನು ಮಾಡಿದವರು ಡಾಕ್ಟರ್ ಬ್ರೋ(Dr Bro). ಈ ರೀತಿ ಕೂಡ ಗೊತ್ತಿಲ್ಲದೆ ಇರುವಂತಹ ಜಾಗಕ್ಕೆ ಹೋಗಿ ಅಲ್ಲಿನ ಚಿತ್ರಣವನ್ನು ಜನರಿಗೆ ಯೂಟ್ಯೂಬ್ ವಿಡಿಯೋ ಮೂಲಕ ಕಟ್ಟಿಕೊಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್.

ವಯಸ್ಸು ಚಿಕ್ಕದಾಗಿದ್ದರು ಕೂಡ ಅವರು ತಮ್ಮ ಯುಟ್ಯೂಬ್ ಚಾನೆಲ್ ಹಾಗೂ ಯೂಟ್ಯೂಬ್ ಚಾನೆಲ್ ವಿಡಿಯೋ ಮೂಲಕ ಪ್ರಪಂಚಕ್ಕೆ ಕಟ್ಟಿಕೊಡುತ್ತಿರುವಂತಹ ಅನುಭವ ಇದೆಯಲ್ಲ ಅದು ಮಾತ್ರ ಅಮೂಲ್ಯವಾದದ್ದು. ಈಗ ಯೂಟ್ಯೂಬ್ ನಲ್ಲಿ ಇದ್ದಂತಹ ಡಾಕ್ಟರ್ ಬ್ರೋ(Dr Bro) ಫಿಲಂ ಇಂಡಸ್ಟ್ರಿಗು ಕೂಡ ಕಾಲಿಟ್ಟಿದ್ದಾರೆ.

ಹೌದು ಯಾವುದೇ ಮಾಧ್ಯಮಗಳ ಸಂದರ್ಶನಕ್ಕೂ ಹಾಗೂ ದಿನಪತ್ರಿಕೆಗಳ ಸಂದರ್ಶನಕ್ಕೂ ಸಿಗದ ಡಾ. ಬ್ರೋ ಅದು ಹೇಗೆ ಸಿನಿಮಾರಂಗಕ್ಕೆ ಕಾಲಿಟ್ಟರು ಎಂಬುದಾಗಿ ನೀವು ಕೂಡ ಆಶ್ಚರ್ಯ ಪಡಬಹುದು. ಹೌದು ಕೆಲವು ವರ್ಷಗಳ ಹಿಂದಷ್ಟೇ ಪುನೀತ್ ರಾಜಕುಮಾರ್(Puneeth Rajkumar) ಅವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದ ಡೇವಿಲ್ ಮುಸ್ತಫಾ ಸಿನಿಮಾದ ಭಾಗವಾಗಿ ಡಾಕ್ಟರ್ ಬ್ರೋ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು ನಿನ್ನೆ ಬಿಡುಗಡೆ ಆಗಿರುವ ಡೇರ್ ಡೇವಿಲ್ ಮುಸ್ತಾಫಾ(Dare Devil Mustafa) ಸಿನಿಮಾದ ಟ್ರೈಲರ್ ನಲ್ಲಿ ಪಾತ್ರೆಗಳನ್ನು ಪರಿಚಯಿಸುವಂತಹ ಧ್ವನಿ ಡಾ. ಬ್ರೋ ಅವರದ್ದೇ ಆಗಿದೆ. ಹೀಗಾಗಿ ಈ ಮೂಲಕ ಪರೋಕ್ಷವಾಗಿಯೇ ಡಾ. ಬ್ರೋ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!