KCC: ಕೆಸಿಸಿಯಲ್ಲಿ ನಮ್ಮ ನಟರೊಂದಿಗೆ ಆಡಲು ಕ್ರಿಸ್ ಗೇಲ್ ಹಾಗೂ ಸುರೇಶ್ ರೈನ ಪಡೆಯುತ್ತಿರುವ ಸಂಭವನೆ ಎಷ್ಟು ಗೊತ್ತಾ? ಕೋಟಿ ಕೋಟಿ.

Kiccha Sudeep ಇದೇ ಫೆಬ್ರವರಿ 24 ಹಾಗೂ 25 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಕನ್ನಡ ಚಲನಚಿತ್ರ ಕಪ್ ಅಂದರೆ ಕೆಸಿಸಿ ನಡೆಯುತ್ತಿದೆ. ಕಿಚ್ಚ ಸುದೀಪ್(Kiccha Sudeep) ಅವರ ನಾಯಕತ್ವದಲ್ಲಿ ನಡೆಯುತ್ತಿರುವಂತಹ ಈ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಇಡೀ ಕನ್ನಡ ಚಿತ್ರರಂಗವೇ ಒಂದಾಗುತ್ತಿದೆ. ಇದು ಪ್ರತಿಯೊಬ್ಬರೂ ಕೂಡ ಸಂಭ್ರಮದಿಂದ ಒಂದಾಗಿ ಆಚರಿಸುವಂತಹ ಕ್ರೀಡಾ ಹಬ್ಬವಾಗಿದೆ ಎಂದು ತಪ್ಪಾಗಲಾರದು.

ಈಗಾಗಲೇ ಕೆಸಿಸಿಯ 2 ಆವೃತ್ತಿಗಳು ಮುಗಿದಿದ್ದು ಕಳೆದ ಬಾರಿ ನಮ್ಮ ಕನ್ನಡದ ನಟರೊಂದಿಗೆ ವೀರೇಂದ್ರ ಸೆಹ್ವಾಗ್ ಗಿಬ್ಸ್ ಸೇರಿದಂತೆ ಹಲವಾರು ನ್ಯಾಷನಲ್ ಕ್ರಿಕೆಟರ್ಸ್ ಗಳು ಕೂಡ ಇದ್ದರು. ಇನ್ನು ಈ ಬಾರಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಕ್ರಿಸ್ ಗೇಲ್ ಹಾಗೂ ಸುರೇಶ್ ರೈನ(Suresh Raina) ಅವರು ಕೂಡ ಸೇರ್ಪಡೆಯಾಗುತ್ತಿದ್ದಾರೆ. ಅವರ ಜೊತೆಗೆ ಕಳೆದ ಬಾರಿ ಆಡಿರುವಂತಹ ತಿಲಕರತ್ ದಿಲ್ಶನ್ ಬದ್ರಿನಾಥ್ ಹರ್ಷಲ್ ಗಿಬ್ಸ್ ಬ್ರೈನ್ ಲಾರ್ ಸೇರಿದಂತೆ ಹಲವಾರು ಖ್ಯಾತ ನವರು ಕೂಡ ಆಡುತ್ತಿದ್ದಾರೆ.

ಯುನಿವರ್ಸಲ್ ಬಾಸ್ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಲ್(Chris Gayle) ಹಾಗೂ ಮಿಸ್ಟರ್ ಐಪಿಎಲ್ ಎಂಬುದಾಗಿ ಖ್ಯಾತ ರಾಗಿರುವ ಸುರೇಶ್ ರೈನ ಅವರು ಈ ಬಾರಿಯ ಕೆಸಿಸಿಯಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಹೀಗಾಗಿ ಕೆಸಿಸಿಗೆ ಭಾಗವಹಿಸಲು ಇವರಿಬ್ಬರೂ ಎಷ್ಟು ಕೋಟಿ ಸಂಭಾವನೆಯನ್ನು ಪಡೆದಿರಬಹುದು ಎನ್ನುವ ಲೆಕ್ಕಾಚಾರಗಳು ನಡೆಯುತ್ತಿದ್ದು ಅದನ್ನು ಬಗೆಹರಿಸಲು ನಾವು ಬಂದಿದ್ದೇವೆ.

ಹೌದು ಗೆಳೆಯರೇ ಕೆಸಿಸಿಯಲ್ಲಿ(KCC) ಆಡಲು ಈ ಇಬ್ಬರು ದಿಗ್ಗಜರು ಭರ್ಜರಿ ಒಂದುವರೆ ಕೋಟಿ ಯಿಂದ ಪ್ರಾರಂಭವಾಗಿ ಎರಡು ಕೋಟಿ ರೂಪಾಯಿವರೆಗೆ ಸಂಭಾವನೆಯನ್ನು ಪಡೆದಿರಬಹುದಾಗಿದೆ. ಯಾಕೆಂದರೆ ಟೂರ್ನಮೆಂಟ್ ಇರುವುದು ಕೇವಲ ಎರಡು ದಿನಗಳು ಮಾತ್ರ ಹೀಗಾಗಿ ಇಷ್ಟೊಂದು ಸಂಭಾವನೆಯನ್ನು ಪಡೆದಿರಬಹುದು ಎಂಬುದು ನಮ್ಮ ಲೆಕ್ಕಾಚಾರವಾಗಿದೆ‌. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ ಹಾಗೂ ನಿಮ್ಮ ನೆಚ್ಚಿನ ಕೆಸಿಸಿ ತಂಡ ಯಾವುದು ಎಂಬುದನ್ನು ಕೂಡ ಕಾಮೆಂಟ್ ಮಾಡಿ.

Leave a Comment

error: Content is protected !!