Haripriya: ನಟಿ ಹರಿಪ್ರಿಯಾ ಅವರ ಫಸ್ಟ್ ಲವ್ ಯಾರಂತೆ ಗೊತ್ತಾ? ವಸಿಷ್ಟ ಅಲ್ವಂತೆ.

Hariprriya ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಹರಿಪ್ರಿಯಾ(Actress Hariprriya) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಹಾಗೂ ತುಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸುವ ಮೂಲಕ ಅತ್ಯಂತ ಕಡಿಮೆ ವಯಸ್ಸಿನಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದವರು. ಉಗ್ರಂ ಸಿನಿಮಾದ(Ugramm Cinema) ಮೂಲಕ ಕನ್ನಡದಲ್ಲಿ ದೊಡ್ಡಮಟ್ಟದ ಹೆಸರನ್ನು ಮಾಡುತ್ತಾರೆ.

ಬಹುತೇಕ ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಸ್ಟಾರ್ ನಟರ ಜೊತೆಗೂ ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಟಿ ಹರಿಪ್ರಿಯ ಅವರು ಇತ್ತೀಚಿಗಷ್ಟೇ ನಟ ವಸಿಷ್ಟ ಸಿಂಹ(Vasishta Simha) ಅವರನ್ನು ಪ್ರೀತಿಸಿ ಮದುವೆಯಾಗುವ ಮೂಲಕ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಆಶ್ಚರ್ಯವನ್ನು ನೀಡಿದ್ದರು. ಇವರಿಬ್ಬರ ನಡುವೆ ಯಾವಾಗ ಪ್ರೀತಿ ಆಯಿತು ಯಾವಾಗ ಮದುವೆ ಆಗೋದಕ್ಕೆ ನಿರ್ಧಾರ ಮಾಡಿದರು ಎನ್ನುವ ಗೊಂದಲ ಇಂದಿಗೂ ಕೂಡ ಇದೆ.

ಇತ್ತೀಚಿಗಷ್ಟೇ ನಟನೆಯ ಜೊತೆಗೆ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಪ್ರಾರಂಭಿಸಿರುವ ನಟಿ ಹರಿಪ್ರಿಯ(Haripriya) ಅವರು ತಮ್ಮ ಮೊದಲ ಲವ್ ಕುರಿತಂತೆ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಆದರೆ ವಸಿಷ್ಟ ಅವರ ಹೆಸರನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಬೇರೆ ಹೆಸರು ಕೇಳಿ ಬಂದಿದ್ದು ಆಶ್ಚರ್ಯ ಎಂದನಿಸಿದೆ. ಅಷ್ಟಕ್ಕೂ ನಟಿ ಹರಿಪ್ರಿಯಾ ಅವರ ಫಸ್ಟ್ ಲವ್ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ನಟಿ ಹರಿಪ್ರಿಯಾ(Hariprriya) ಅವರೇ ಖುದ್ದಾಗಿ ಹೇಳಿರುವಂತೆ 17ನೇ ವರ್ಷದ ವಯಸ್ಸಿನಲ್ಲಿ ಹರಿಪ್ರಿಯಾ ಅವರು ಒಬ್ಬರನ್ನು ನೋಡಿ ಇಷ್ಟಪಟ್ಟಿದ್ದರಂತೆ ಅವರೇ ಹರಿಪ್ರಿಯ ಅವರ ಫಸ್ಟ್ ಕ್ರಷ್ ಆಗಿದ್ದರು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿದ್ದು ಅವರ ಹೆಸರನ್ನು ಹೇಳಲು ಮಾತ್ರ ಇಚ್ಚಿಸಿಲ್ಲ. ನಟಿ ಹರಿಪ್ರಿಯಾ ಅವರ ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!