RaviChandran: ರವಿಮಾಮನಿಗಾಗಿ ಮತ್ತೆ ಕನ್ನಡಕ್ಕೆ ಬರಲಿದ್ದಾರಂತೆ ಅ ಸ್ಟಾರ್ ನಟಿ! ಅಭಿಮಾನಿಗಳಲ್ಲಿ ಹೆಚ್ಚಾಯ್ತು ಸಂತೋಷ.

Crazy Star Ravichandran ಒಂದು ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ರವರ ಸಿನಿಮಾಗಳು ಎಂದರೆ ಸಾಕು. ಸೂಪರ್ ಹಿಟ್ ಸಾಂಗ್ ಗಳು ಪ್ರತಿಯೊಬ್ಬರು ಇಷ್ಟಪಡುವಂತಹ ಕಥೆಗಳು ಹಾಗೂ ಬೇರೆ ಭಾಷೆಗಳಿಂದ ನಟಿಯರನ್ನು ಕರೆತರಲಾಗುತ್ತಿತ್ತು ಎನ್ನುವ ಕ್ರೇಜ್ ನಿಜಕ್ಕೂ ಕೂಡ ಇಂದಿಗೂ ಅದನ್ನು ಸರಿಸಾಟಿ ಮಾಡುವಂತಹ ಮತ್ತೊಂದು ಸಿನಿಮಾ ಅನುಭವ ಇಲ್ಲ ಎಂದೇ ಹೇಳಬಹುದು.

ಇನ್ನು ಇಂದಿನ ದಿನಗಳಲ್ಲಿ ರವಿಚಂದ್ರನ್(Ravichandran) ರವರ ಸಿನಿಮಾಗಳು ಅಷ್ಟೊಂದು ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡಲು ವಿಫಲವಾಗುತ್ತಿವೆ ಎಂದು ಹೇಳಬಹುದು ಆದರೆ ಒಂದು ಕಾಲದಲ್ಲಿ ಅವರ ಸಿನಿಮಾಗಳು ಮಾಡುತ್ತಿದ್ದ ಕಲೆಕ್ಷನ್ ಹಾಗೂ ಸೃಷ್ಟಿಸುತ್ತಿರುವ ಜನಪ್ರಿಯತೆ ನಿಜಕ್ಕೂ ಕೂಡ ಯಾರಿಂದಲೂ ಕೂಡ ಇಂದಿನ ಕಾಲದಲ್ಲಿಯೂ ಸರಿಗಟ್ಟಲು ಸಾಧ್ಯವಿಲ್ಲ. ಅದಕ್ಕಾಗಿ ತಾನೆ ಅವರನ್ನು ಕನ್ನಡ ಚಿತ್ರರಂಗದ ಹಠವಾದಿ ಎಂಬುದಾಗಿ ಕರೆಯೋದು.

ರವಿಚಂದ್ರನ್ ಅವರಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತಹ ಆ ಕಾಲದ ನಟಿ ಒಬ್ಬರು ಅವರ ಮುಂದಿನ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಆ ನಟಿ ಯಾರು ಎಂಬುದನ್ನು ಬನ್ನಿ ನಾವೆಲ್ಲರೂ ತಿಳಿದುಕೊಳ್ಳೋಣ.

ಸದ್ಯಕ್ಕೆ ಆಸ್ಪತ್ರೆಯಲ್ಲಿ ಜ್ವ’ ರಕ್ಕಾಗಿ ಚಿಕಿತ್ಸೆಯನ್ನು ಪಡೆಯುತ್ತಿರುವ ನಟಿ ಖುಷ್ಬೂ ಸುಂದರ್(Khushbu Sundar) ಅವರು ಮುಂದಿನ ಸಿನಿಮಾದಲ್ಲಿ ರವಿಚಂದ್ರನ್ ರವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದ್ದು ಒಬ್ಬ ನಿರ್ದೇಶಕರು ಇವರಿಬ್ಬರನ್ನು ತಲೆಯಲ್ಲಿ ಇಟ್ಟುಕೊಂಡು ಕಥೆಯನ್ನು ಬರೆದಿದ್ದು ಒಂದು ವೇಳೆ ಇಬ್ಬರ ಕಡೆಯಿಂದ ಗ್ರೀನ್ ಸಿಗ್ನಲ್ ಬಂದ್ರೆ ಮತ್ತೆ ಈ ಇಬ್ಬರು ಎವರ್ ಗ್ರೀನ್ ಜೋಡಿಗಳನ್ನು ತೆರೆಯ ಮೇಲೆ ನಾವು ನೋಡಬಹುದಾಗಿದೆ.

Leave a Comment

error: Content is protected !!