ರಿಯಲ್ ಸ್ಟಾರ್ ಉಪೇಂದ್ರ ಮನೆಯ ಅದ್ದೂರಿ ಹೋಳಿ ಸೆಲೆಬ್ರೇಶನ್!

ಸ್ನೇಹಿತರೆ 25 ಮಾರ್ಚ್ 2024 ರಂದು ದೇಶ ವ್ಯಾಪಿ ಬಹಳ ಅದ್ದೂರಿಯಾಗಿ ಹೋಳಿ ಹಬ್ಬವನ್ನು (holi festival) ಆಚರಿಸಲಾಗಿದೆ. ಕನ್ನಡ ಚಲನಚಿತ್ರ ರಂಗದ ಸ್ಟಾರ್ ಸೆಲೆಬ್ರಿಟಿಗಳು ಕೂಡ ಬಣ್ಣದ ಓಕುಳಿಯಲ್ಲಿ ಮಿಂದೆದ್ದು ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ(Upendra) ತಮ್ಮ ಪತ್ನಿ ಪ್ರಿಯಾಂಕ ಉಪೇಂದ್ರ ಹಾಗೂ ಕುಟುಂಬಸ್ಥರು, ಸ್ನೇಹಿತರೊಂದಿಗೆ ಸೇರಿ ಹೋಲಿ ಆಡಿದ್ದು ಅದರ ಕೆಲ ಸುಂದರ ಚಿತ್ರಣಗಳನ್ನು ಉಪೇಂದ್ರ ಅವರ ಅಣ್ಣನ ಮಗ ನಿದರ್ಶನ್ ಸುಧೀಂದ್ರ ಅವರು ತಮ್ಮ ಸಾಮಾಜಿಕ ಹಂಚಿಕೊಂಡು ವೈರಲ್ ಆಗಿದ್ದಾರೆ.

ಬಣ್ಣದ ಹಬ್ಬ ಹೋಲಿಯನ್ನು ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಬಹಳ ವಿಶೇಷವಾಗಿ ಆಚರಿಸಿದ್ದು, ಸುಂದರವಾಗಿ ಅಲಂಕೃತಗೊಂಡಿರುವಂತಹ ಗಾರ್ಡನ್ ನಲ್ಲಿ ಮನೆಯವರೆಲ್ಲರೂ ಒಟ್ಟಿಗೆ ಬಿಳಿ ಬಣ್ಣದ ಉಡುಪುಗಳನ್ನು ಧರಿಸಿ ಸಿಂಗರಿತರಾಗಿ ಬಣ್ಣದ ಓಕುಳಿಯನ್ನು ತಮ್ಮ ಮೈ ಮೇಲೆ ಎರಚಿಕೊಂಡು ಸಂಭ್ರಮಿಸಿದ್ದಾರೆ. ಇನ್ನು ಪ್ರಿಯಾಂಕ ಉಪೇಂದ್ರ(Priyanka Upendra) ಅವರು ನೀಲಿ ಬಣ್ಣದ ಸೀರೆ ಬಿಳಿ ಬಣ್ಣದ ಬ್ಲೌಸ್ ಧರಿಸಿ ಬಹಳ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದು ತಮ್ಮ ಭಾವನ ಮಗ ನಿರಂಜನ್ ಸುಧೀಂದ್ರ ಅವರೊಟ್ಟಿಗೆ ಸೆಲ್ಫಿ ಫೋಟೋಗೆ ಪೋಸ್ ನೀಡಿದ್ದಾರೆ.

ಎಲ್ಲಾ ಹಬ್ಬ ಹರಿದಿನಗಳನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುವಂತಹ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಗಳು ಹೋಲಿ ಹಬ್ಬವನ್ನು ಮಕ್ಕಳು ಜೊತೆ ಸೇರಿ ಸಂಭ್ರಮಿಸಿದ್ದು ತಮ್ಮ ಮನೆಗೆ ಕುಟುಂಬಸ್ಥರನ್ನು ಆಹ್ವಾನಿಸಿ ಎಲ್ಲರೂ ಒಟ್ಟಿಗೆ ಅಮೂಲ್ಯವಾದ ಸಮಯವನ್ನು ಕಳೆಯುವುದರ ಜೊತೆಗೆ ಒಬ್ಬರಿಗೆ ಮತ್ತೊಬ್ಬರು ಬಣ್ಣ ಹಚ್ಚಿ ಹಾಸ್ಯ ಕೀಟಲೆ ತಮಾಷೆ ಮಾಡುತ್ತಾ ಸುಂದರವಾದ ಕ್ಷಣಗಳನ್ನು ಸೃಷ್ಟಿಸಿದ್ದಾರೆ.

ಇನ್ನು ಹೋಲಿ ಹಬ್ಬ ಎಂದ ಮೇಲೆ ನೃತ್ಯ ಇರದೆ ಹೋದರೆ ಹೇಗೆ ಸಂಜೆಯಾಗುತ್ತಿದ್ದ ಹಾಗೆ ಎಲ್ಲರೂ ಹೋಲಿ ಹಚ್ಚಿಕೊಂಡು ಭರ್ಜರಿ ಹಾಡುಗಳಿಗೆ ತಮ್ಮ ಸೊಂಟ ಬೆಳಕಿಸುತ್ತಾ ನೃತ್ಯ ಮಾಡಿದ್ದು ಈ ಎಲ್ಲಾ ಸುಂದರ ಚಿತ್ರಣಗಳನ್ನು ಉಪೇಂದ್ರ ಅವರ ಸಹೋದರ ಸುಧೀಂದ್ರ ಅವರ ಮಗ ನಿರಂಜನ್ ಮತ್ತು ನಿದರ್ಶನ ಸುಧೀಂದ್ರ ಅವರು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಫೋಟೋ ಎಲ್ಲೆಡೆ ಭಾರಿ ವೈರಲ್ ಆಗುತ್ತಿದ್ದು, ತನ್ನ ನೆಚ್ಚಿನ ಸ್ಟಾರ್ ದಂಪತಿಗಳ ಮನೆಯಲ್ಲಿ ಆಚರಿಸಲಾದ ಹೋಳಿ ಹಬ್ಬ ಕಂಡು ಅಭಿಮಾನಿಗಳು ವಾವ್ ಎಂದು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸ ತೊಡಗಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!