ಅಪ್ಪು ಸಮಾಧಿಯ ದರ್ಶನ ಪಡೆದ ಸಂಗೀತ ಶೃಂಗೇರಿ, ಇಲ್ಲಿವೆ ವೈರಲ್ ಫೋಟೋಸ್

ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ 50ನೇ ವರ್ಷದ ಹುಟ್ಟುಹಬ್ಬವನ್ನು ಮಾರ್ಚ್ 17ನೇ ತಾರೀಕು ಬಹಳ ಅದ್ದೂರಿಯಾಗಿ ಅಭಿಮಾನಿಗಳು ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಆಚರಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್ ಕಳೆದೆರಡು ವರ್ಷಗಳ ಹಿಂದೆ ಅತ್ಯಂತ ಹೃದಯ ಶ್ರೀಮಂತಿಕೆಯುಳ್ಳ ಪುನೀತ್ ರಾಜಕುಮಾರ್(Puneeth Rajkumar) ಅವರು ಹೃದಯಘಾ.ತ ಸಮಸ್ಯೆಯಿಂದ ಮಲಗಿದವರು ಮತ್ತೆ ಮೇಲೆಳಲೇ ಇಲ್ಲ.

ಅಪ್ಪು ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉಳಿದರು ಕೂಡ ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಇಂದಿಗೂ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅಷ್ಟೇ ಅದ್ದೂರಿಯಾಗಿ ದಾನ ಧರ್ಮಗಳ ರೂಪದಲ್ಲಿ ಅಭಿಮಾನಿಗಳು ಆಚರಿಸುತ್ತಾರೆ. ಹೀಗಿರುವಾಗ ಅಪ್ಪು ಜನ್ಮದಿನದ ಅಂಗವಾಗಿ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಕಂಠೀರವ ಸ್ಟುಡಿಯೋದ ಬಳಿ ತೆರಳಿ ಪುನೀತ್ ರಾಜಕುಮಾರ್ ಅವರ ಸಮಾಧಿಯ ದರುಶನ ಪಡೆದಿದ್ದಾರೆ.

ಇದರ ಬೆನ್ನೆಲೆ ಬಿಗ್ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ ಕೂಡ ಕಂಠೀರವ ಸ್ಟುಡಿಯೋಗೆ ತೆರಳಿ ಪುನೀತ್ ರಾಜಕುಮಾರ್ ಅವರ ಸಮಾಧಿಯ ಮುಂದೆ ನಿಂತು ಪ್ರಾರ್ಥಿಸುತ್ತಿರುವಂತಹ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬಾರಿ ವೈರಲ್ ಆಗಿದ್ದಾರೆ. ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಸಂಗೀತ ಶೃಂಗೇರಿ ಅವರು ರಕ್ಷಿತ್ ಶೆಟ್ಟಿ ಅವರ ಚಾರ್ಲಿ ತ್ರಿಬ್ಬಲ್ ಸೆವೆನ್ ಸಿನಿಮಾದ ಮೂಲಕ ಹೆಚ್ಚು ಮನ್ನಣೆಗೆ ಬಂದಂತಹ ನಟಿ.

ಡಾರ್ಲಿಂಗ್ ಕೃಷ್ಣ ಅವರೊಂದಿಗೆ ಲಕ್ಕಿಮಾನ್ ಸಿನಿಮಾದಲ್ಲಿ ಅಭಿನಯಿಸಿದರು, ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರು ದೇವರ ಪಾತ್ರದಲ್ಲಿ ನಟಿಸಿದ್ದರು ಆ ಸಮಯದಿಂದಲೂ ಬಹಳ ಆತ್ಮೀಯವಾದ ಬಾಂಧವ್ಯವನ್ನು ಪುನೀತ್ ರಾಜಕುಮಾರ್ ಅವರೊಟ್ಟಿಗೆ ಬೆಳೆಸಿಕೊಂಡಿದ್ದಂತಹ ಸಂಗೀತ ಶೃಂಗೇರಿ ಯಥಾಪ್ರಕಾರ ಈ ವರ್ಷವೂ ಅವರ ಜನ್ಮದಿನದ ಅಂಗವಾಗಿ ಅವರ ಸಮಾಧಿಯ ಬಳಿ ತೆರಳಿದ್ದಾರೆ.

ಹ್ಯಾಪಿ ಬರ್ತಡೆ ನಮ್ಮ ಅಪ್ಪು ಬಾಸ್ ಸದಾ ನಾನು ನಿಮ್ಮ ಅಭಿಮಾನಿ ಎಂಬ ಶೀರ್ಷಿಕೆ ಬರೆದು ಪುನೀತ್ ರಾಜಕುಮಾರ್ ಅವರ ಸಮಾಧಿ ಮುಂದೆ ನಿಂತು ತೆಗೆಸಿಕೊಂಡಿರುವಂತಹ ಕೆಲ ಸುಂದರಗಳನ್ನು ನಟಿ ಸಂಗೀತ ಶೃಂಗೇರಿ ಅವರು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಎಲ್ಲೆಡೆ ಬಾರಿ ವೈರಲ್ ಆಗುತ್ತಾ ನೆಟ್ಟಿಗರ ಹೃದಯ ಗೆದ್ದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!