Kaatera: ಕೊನೆಗೂ ಕಾಟಾರಾ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಯ್ತು?

Kaatera ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಸಿನಿಮಾಗಳನ್ನು ನೋಡುವುದೇ ಒಂಥರಾ ಮಾಸ್ ಫೀಲಿಂಗ್. ಅವರ ಸಿನಿಮಾಗಳು ಖಂಡಿತ ಪ್ರೇಕ್ಷಕರು ಇಷ್ಟಪಡುವಂತಹ ಮನರಂಜನೆಯನ್ನು ಹೊಂದಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯಕ್ಕೆ ಡಿ ಬಾಸ್ ಕಾಟೇರ(Kaatera) ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದು ಅಭಿಮಾನಿಗಳಿಗೆ ತಿಳಿದಿರುವಂತಹ ವಿಚಾರವಾಗಿದೆ.

70ರ ದಶಕದಲ್ಲಿ ಕರ್ನಾಟಕದಲ್ಲಿ ನಡೆದಿರುವಂತಹ ರೈತ ದಂಗೆಯನ್ನು ಆಧರಿಸಿ ಈ ಸಿನಿಮಾವನ್ನು ಮಾಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಸಿನಿಮಾ ಖಂಡಿತವಾಗಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವುದು ಖಂಡಿತ ಯಾಕೆಂದರೆ ಯುನಿವರ್ಸಲ್ ಸಬ್ಜೆಕ್ಟ್ ಅನ್ನು ಈ ಸಿನಿಮಾ ಹೊಂದಿರುತ್ತದೆ. ಹೀಗಾಗಿ ದೊಡ್ಡ ಬಜೆಟ್ ನಲ್ಲಿಯೇ ಈ ಸಿನಿಮಾವನ್ನು ಮಾಡಲಾಗುತ್ತಿದೆ. ಡಿ ಬಾಸ್(Dboss) ಕೂಡ ಮಾಸ್ ಲುಕ್ ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾದಲ್ಲಿ ಮಾಲಾಶ್ರೀ ಅವರ ಮಗಳಾಗಿರುವಂತಹ ರಾಧನ ರಾಮ್(Radhana Ram) ನಾಯಕಿಯಾಗಿ ಪಾದರ್ಪಣೆ ಮಾಡುತ್ತಿದ್ದಾರೆ. ತರುಣ್ ಸುಧೀರ್ ರವರು ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿದ್ದು ರಾಕ್ ಲೈನ್ ವೆಂಕಟೇಶ್(Rockline Venkatesh) ರವರ ನಿರ್ಮಾಣವಿದೆ. ಇನ್ನು ಈಗ ಇತ್ತೀಚಿಗಷ್ಟೇ ಸಿನಿಮಾದ ನಿರ್ಮಾಪಕರು ಕೂಡ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಮಾತನಾಡಿದ್ದಾರೆ.

ಹೌದು ಇದೇ ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವ ಟಾರ್ಗೆಟ್ ಅನು ನಾವು ಹೊಂದಿದ್ದೇವೆ ಎಂಬುದಾಗಿ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ. ಹಾಗಿದ್ರೆ ಈ ಸಾರಿ ನಾಡ ಹಬ್ಬಕ್ಕೆ ನಾಡಿನ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!