Kabzaa: ಬಿಡುಗಡೆಗು ಮುನ್ನವೇ ಕಬ್ಜಾ ಸಿನಿಮಾ ಗಳಿಸಿರುವ ಹಣ ಎಷ್ಟು ಗೊತ್ತಾ? ಬಜೆಟ್ ಗಿಂತಲೂ ಹೆಚ್ಚು!

Kabzaa Business ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ಫ್ಯಾನ್ ಇಂಡಿಯನ್ ಸಿನಿಮಾ ಕಬ್ಜಾ(Kabzaa) ಈಗಾಗಲೇ ಟೀಸರ್ ಟ್ರೈಲರ್ ಹಾಗೂ ಹಾಡುಗಳ ಮುಖಾಂತರ ಕೇವಲ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೆ ಪರಭಾಷೆಗಳನ್ನು ಕೂಡ ಸಿನಿಮಾ ಚಿತ್ರಮಂದಿರಗಳತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವಂತೆ ಸದ್ದು ಮಾಡುತ್ತಿದೆ.

ಇನ್ನು ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ಜೊತೆಗೆ ಈ ಸಿನಿಮಾ ಪರಭಾಷೆಗಳಲ್ಲಿ ಕೂಡ ಇನ್ನಷ್ಟು ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಪರಭಾಷೆಗಳಲ್ಲಿ ಕೂಡ ಇವರಿಗೆ ಇರುವಂತಹ ಜನಪ್ರಿಯತೆ ಸಿನಿಮಾಗೆ ಇನ್ನಷ್ಟು ಮಾರುಕಟ್ಟೆಯನ್ನು ವಿಸ್ತರಿಸಲಿದೆ.

ಇನ್ನು ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಇರುವುದು ಕೂಡ ಚಿತ್ರಕ್ಕೆ ಇನ್ನಷ್ಟು ಬೇಡಿಕೆಯನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ಈಗ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುಂಚೆನೇ ಮಾಡಿರುವಂತಹ ಬ್ಯುಸಿನೆಸ್ ನೋಡಿದರೆ ಖಂಡಿತವಾಗಿ ನೀವು ಕೂಡ ಕನ್ನಡ ಸಿನಿಮಾ ಈ ಲೆವೆಲ್ ನಲ್ಲಿ ಬೆಳೆದು ನಿಂತಿದೆ ಎಂಬುದನ್ನು ನೋಡಿ ಹೆಮ್ಮೆ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟಕ್ಕೂ ಬಿಡುಗಡೆಗು ಮುನ್ನ ಕಬ್ಜಾ ಗಳಿಸಿರುವ ಹಣವೆಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಪಂಚಭಾಷೆಗಳಲ್ಲಿ ಇದೇ ಮಾರ್ಚ್ 17ರಂದು ಬಿಡುಗಡೆ ಕಾಣಲಿರುವ ಕಬ್ಜಾ ಸಿನಿಮಾ(Kabzaa Film) ಬಿಡುಗಡೆಗು ಮುನ್ನವೇ ಆಡಿಯೋ ಸ್ಯಾಟಲೈಟ್ ರೈಟ್ಸ್ ಹಾಗೂ ಇನ್ನಿತರ ಹಕ್ಕುಗಳ ಮೂಲಕ ಭರ್ಜರಿ 65 ಕೋಟಿಗೂ ಅಧಿಕ ಹಣವನ್ನು ಕಲೆಕ್ಷನ್ ಮಾಡಿದ್ದು ಬಿಡುಗಡೆ ಆಗುವುದಕ್ಕೂ ಮುಂಚೇನೆ 100 ಕೋಟಿ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಸಿನಿಮಾದ ಕಥೆ ಇಷ್ಟ ಆದರೆ ಕೆಜಿಎಫ್(KGF) ಸಿನಿಮಾ ನಿರ್ಮಿಸಿರುವ ದಾಖಲೆಗೆ ಸಮೀಪ ಆಗುವಂತಹ ಅವಕಾಶಗಳು ಕೂಡ ಇವೆ ಎಂಬುದನ್ನು ಬಾಕ್ಸ್ ಆಫೀಸ್ ಪಂಡಿತರು ಈಗಾಗಲೇ ಭವಿಷ್ಯ ನುಡಿದಿದ್ದಾರೆ.

Leave a Comment

error: Content is protected !!