Rajkumar: ಕನ್ನಡದ ಘಟಾನುಘಟಿ ನಾಯಕರ ಜೊತೆಗೆ ಕಾಣಿಸಿಕೊಂಡಿದ್ದ ನಟಿ ಭವ್ಯಶ್ರೀ ಅಣ್ಣಾವ್ರ ಜೊತೆಗೆ ಯಾಕೆ ನಟಿಸಲಿಲ್ಲ?

Bhavyashree 80 ಹಾಗೂ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಂತಹ ಹಲವಾರು ನಟಿಯರಲ್ಲಿ ಭವ್ಯಶ್ರೀ(Bhavyashree Kannada Actress) ಅವರು ಇಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿದವರು ನಟಿ ಭವ್ಯಶ್ರೀ.

ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರಾಗಿರುವ ವಿಷ್ಣುವರ್ಧನ್(Vishnuvardhan) ಅನಂತನಾಗ್ ಶಂಕರ್ ನಾಗ್ ಅಂಬರೀಶ್ ಸೇರಿದಂತೆ ಹಲವಾರು ಕಲಾವಿದರ ಜೊತೆಗೆ ನಾಯಕ ನಟಿಯಾಗಿ ಸಿನಿಮಾ ಥೀಯೇಟರ್ಗಳಲ್ಲಿ ಅಭಿಮಾನಿಗಳಿಂದ ಶಿಳ್ಳೆ ಹಾಗೂ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಇದು ಕೂಡ ಅಂದಿನ ಕಾಲದಲ್ಲಿ ಅವರು ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ.

ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ಇಷ್ಟೆಲ್ಲ ನಾಯಕ ನಟರ ಜೊತೆಗೆ ಅಂದಿನ ಕಾಲದಲ್ಲಿ ನಟಿಸಿದ್ದರು ಕೂಡ ಕನ್ನಡ ಚಿತ್ರರಂಗದ ದೇವರಿಂದ ಖ್ಯಾತ ರಾಗಿರುವ ಅಣ್ಣಾವ್ರ(Annavru) ಜೊತೆಗೆ ಮಾತ್ರ ನಟಿಸಲು ಸಾಧ್ಯವಾಗಲಿಲ್ಲ. ಅದು ಯಾಕೆ ಅದಕ್ಕೆ ಇರುವಂತಹ ನಿಜವಾದ ಕಾರಣ ಏನಾಗಿತ್ತು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಮಿತ್ರರೇ, ಇದಕ್ಕಿರುವ ಪ್ರಮುಖ ಕಾರಣ ಏನೆಂದರೆ ಅಂದಿನ ಕಾಲದಲ್ಲಿ ನಟಿ ಭವ್ಯಶ್ರೀ(Actress Bhavyashree) ಅವರು ಅತ್ಯಂತ ಬಹು ಬೇಡಿಕೆಯ ನಟಿಯಾಗಿದ್ದರೂ ಕೂಡ ಅವರು 20ರ ಆಸು ಪಾಸಿನ ವಯಸ್ಸಿನವರು ಹಾಗೂ ಅಣ್ಣಾವ್ರು(Dr Rajkumar) ಆ ಸಂದರ್ಭದಲ್ಲಿ 50ನ್ನೂ ದಾಟಿದ ವಯಸ್ಸನ್ನು ಹೊಂದಿದ್ದರು. ಹೀಗಾಗಿ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಅಗತ್ಯಕ್ಕೂ ಮೀರಿದ್ದಾಗಿತ್ತು ಹೀಗಾಗಿ ಸ್ಕ್ರೀನ್ ಮೇಲೆ ಇದು ವರ್ಕೌಟ್ ಆಗುವುದಿಲ್ಲ ಎನ್ನುವ ಕಾರಣಕ್ಕಾಗಿ ನಿರ್ಮಾಪಕರು ಹಿಂದೇಟು ಹಾಕಿ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ಹಾಕಿಕೊಂಡು ಸಿನಿಮಾ ಮಾಡಲಿಲ್ಲವಂತೆ. ಇಷ್ಟಿದ್ದರೂ ಕೂಡ ಭವ್ಯಶ್ರೀ ಅವರು ಕಲಾವಿದೆಯಾಗಿ ನಿಜಕ್ಕೂ ಕೂಡ ಪ್ರತಿಯೊಬ್ಬರು ಮೆಚ್ಚಿದಂತಹ ನಟಿ.

Leave a Comment

error: Content is protected !!