ಮುಹೂರ್ತ ಪೂಜೆಯಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹಾಕಿದ ಚಿನ್ನದ ಸರದ ಬೆಲೆ ಎಷ್ಟು ಗೊತ್ತಾ?ಕೇಳಿದರೆ ಬೆರಗಾಗುತ್ತೀರಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಹಲವಾರು ಸಮಯಗಳಿಂದ ಕನ್ನಡ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಸಾಕಷ್ಟು ಸಮಯಗಳ ಕಾಲ ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದ ರಮ್ಯಾ ಅವರನ್ನು ಮತ್ತೆ ಚಿತ್ರರಂಗದಲ್ಲಿ ಕಾಣಬೇಕೆನ್ನುವ ಆಸೆ ಅವರ ಅಭಿಮಾನಿಗಳಲ್ಲಿ ಅದಮ್ಯವಾಗಿತ್ತು. ಕೊನೆಗೂ ಕೂಡ ರಮ್ಯ ಅವರ ಅಭಿಮಾನಿಗಳ ಆಸೆ ಈಡೇರುವ ಸಂದರ್ಭ ಒದಗಿ ಬಂದಿದೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ರತ್ನನ್ ಪ್ರಪಂಚ ತಂಡ ಮತ್ತೊಮ್ಮೆ ಒಂದಾಗಿದ್ದು ರೋಹಿತ್ ಪದಕ್ಕೆ ನಿರ್ದೇಶನದಲ್ಲಿ ಕಾರ್ತಿಕ್ ಗೌಡ ನಿರ್ಮಾಣದಲ್ಲಿ ಹಾಗೂ ಡಾಲಿ ಧನಂಜಯ್ ನಾಯಕನಾಗಿ ಕಾಣಿಸಿಕೊಂಡಿರುವ ಉತ್ತರಕಾಂಡ ಸಿನಿಮಾ ಗೆ ಈಗ ರಮ್ಯಾ ಅವರು ನಾಯಕಿಯಾಗಿ ಆಯ್ಕೆಯಾಗಿದ್ದು ಕನ್ನಡ ಚಿತ್ರರಂಗಕ್ಕೆ ಇದೇ ಸಿನಿಮಾದ ಮೂಲಕ ಈಗ ನಾಯಕಿಯಾಗಿ ಮತ್ತೆ ಪುನರ್ ಪಾದರ್ಪಣೆ ಮಾಡಲು ಹೊರಟಿದ್ದಾರೆ.

ಇನ್ನು ಈ ಸಿನಿಮಾದ ಮುಹೂರ್ತ ಪೂಜೆ ಈಗಾಗಲೇ ಬೆಂಗಳೂರಿನ ದೇವಸ್ಥಾನ ಒಂದರಲ್ಲಿ ನಡೆದಿದ್ದು ಈ ಮುಹೂರ್ತ ಪೂಜೆಗೆ ಸೀರೆಯನ್ನುಟ್ಟು ರಮ್ಯಾ ಅವರು ದೇವತೆಯಂತೆ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಹಾಕಿಕೊಂಡಿದ್ದ ಚಿನ್ನದ ನೆಕ್ಲೆಸ್ ಈಗ ಎಲ್ಲರ ಕಣ್ಣನ್ನು ಕುಕ್ಕುತ್ತಿದ್ದು ಈ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿವೆ. ಇನ್ನು ಈ ಫೋಟೋದಲ್ಲಿ ಅವರು ಧರಿಸಿರುವ ಚಿನ್ನದ ನೆಕ್ಲೆಸ್ ಬೆಲೆ ಎಷ್ಟು ಎಂದು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದು ಖಚಿತ.

ಹೌದು ಮಿತ್ರರೇ ನಟಿ ರಮ್ಯಾ ಅವರು ಉತ್ತರಕಾಂಡ ಸಿನಿಮಾದ ಮುಹೂರ್ತ ಪೂಜೆಯ ಸಂದರ್ಭದಲ್ಲಿ ಧರಿಸಿದ್ದ ಚಿನ್ನದ ನೆಕ್ಲೆಸ್ ಬೆಲೆ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಎಂಬುದಾಗಿ ತಿಳಿದು ಬಂದಿದ್ದು ಇದನ್ನು ಜೋಯಲುಕಾಸ್ ಸಂಸ್ಥೆಯಿಂದ ಖರೀದಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ನಿಜಕ್ಕೂ ಕೂಡ ಇದರ ಡಿಸೈನ್ ಎನ್ನುವುದು ಎಲ್ಲರನ್ನೂ ಆಕರ್ಷಿಸುತ್ತಿದ್ದು ತೆಗೆದುಕೊಂಡರೆ ಇಂತಹ ಚಿನ್ನದ ಸರವನ್ನು ತೆಗೆದುಕೊಳ್ಳಬೇಕು ಎನ್ನುವುದಾಗಿ ಮಹಿಳೆಯರ ನಡುವೆ ಮಾತುಕತೆಗಳು ಪ್ರಾರಂಭವಾಗುವಷ್ಟರ ಮಟ್ಟಿಗೆ ಸುದ್ದಿಯಾಗಿದೆ.

Leave a Comment

error: Content is protected !!