ಅಪ್ಪು ಅವರ ಬಾಡಿಗಾರ್ಡ ಚಲಪತಿಯ ತಿಂಗಳ ಸಂಬಳ ಎಷ್ಟಾಗಿತ್ತು ಗೊತ್ತಾ? ಅಬ್ಬಾ ಇಷ್ಟೊಂದಾ

ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಆಗಿ ಮೆರೆದು, ಕಣ್ಮರೆಯಾದ ಪುನೀತ್ ರಾಜಕುಮಾರ್ ಅವರ ನೆನಪುಗಳು ಅಮರ. ಅಪ್ಪು ಎಂದಾಕ್ಷಣ ನೆನಪಿಗೆ ಬರುವುದೇ ಅವರ ಸರಳತೆ, ಮುಗ್ಧ ನಗು, ಒಳ್ಳೆಯ ನಡತೆ, ಬಡ ಕುಟುಂಬಗಳಿಗೆ ವಿದ್ಯಾರ್ಥಿಗಳಿಗೆ ಮಾಡಿದ ಸಹಾಯ, ಕಲಾವಿದರಲ್ಲಿ ತೋರಿದ ಕರುಣೆ….ಇವರ ನೆನಪುಗಳು ಅಭಿಮಾನಿಗಳಲ್ಲಿ ಎಂದಿಗೂ ಜೀವಂತವಾಗಿರುತ್ತದೆ.

ಅರಸು, ವಂಶಿ, ರಾಜಕುಮಾರ, ಯುವರತ್ನ, ಅಣ್ಣಾಬಾಂಡ್, ಗಂಧದಗುಡಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ, ಕೋಟಿ ಕನ್ನಡಿಗರ ಮನೆ ತಲುಪುವ ಕನ್ನಡದ ಕೋಟ್ಯಾಧಿಪತಿಯಲ್ಲಿ ಕಾಣಿಸಿಕೊಂಡಿರುವ ಇವರ ನುಡಿಗಳು ದೃಶ್ಯಾವಳಿಗಳು ಎಲ್ಲರ ಕಣ್ಮುಂದೆ ಆಗಾಗ ಸುಳಿದು ಸಂತಸ ಪಡಿಸುತ್ತವೆ. ಅವರ ಅಕಾಲಿಕ ಮರಣ ಎಲ್ಲರಿಗೂ ನೋವು ತಂದಿದೆ. ಇವರ ಜೊತೆಯಲ್ಲಿಯೇ ಇರುತ್ತಿದ್ದ ಕಾವಲಿಗ ಚಲಪತಿಯವರು “ಯಜಮಾನರಿಲ್ಲದೆ ಏನು ಆಗುವುದಿಲ್ಲ. ಆದರೆ ಇರಬೇಕೆಂದು ಇದ್ದೀವಿ ಅಷ್ಟೇ. ಪ್ರತಿ ಗಲ್ಲಿ ಊರುಗಳಲ್ಲಿಯೂ ಅಭಿಮಾನಿಗಳು ಅವರ ನೆನಪುಗಳನ್ನು ಹಬ್ಬದಂತೆ ಇಂದಿಗೂ ಸಂಭ್ರಮಿಸುವುದನ್ನು ಕಂಡಾಗ ಅವರು ಇರಬೇಕೆಂದು ಅನಿಸಿ ನೋವಾಗುತ್ತಿತ್ತು. ಯಜಮಾನರ ನಡೆ-ನುಡಿಗಳು ನನ್ನಲ್ಲಿ ತುಂಬಿ ನನ್ನನ್ನು ಒಳ್ಳೆಯ ದಾರಿಯಲ್ಲಿ ನಡೆಸುತ್ತದೆ ಎಂಬ ನಂಬಿಕೆ ಇದೆ” ಎಂದು ಭಾವುಕರಾಗಿ ನಡೆದಿದ್ದಾರೆ.

ಪುನೀತ್ ರಾಜಕುಮಾರ್ ಅವರು ಅವರ ಬಾಡಿಗಾರ್ಡ್ ಆದ ಚಲಪತಿಯನ್ನು ಎಂದಿಗೂ ಕಡೆಗಣಿಸಿರಲಿಲ್ಲವಂತೆ. ಆತನ ಊಟೋಪಚಾರ, ಕ್ಷೇಮ ಕುಶಲೋಪರಿಗಳ ಬಗ್ಗೆ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿದ್ದಾಗಲೂ, ದೊಡ್ಡ ದೊಡ್ಡ ವೇದಿಕೆಯಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಆಗಮಿಸಿರುವಾಗಲೂ, ಕಾರ್ಯಕ್ರಮಗಳಿಗೆ ಹೋದಾಗಲೂ ಕೇಳುತ್ತಿದ್ದರಂತೆ. ಚಲಪತಿಯವರಿಗೆ ಅಪ್ಪು ಅವರ ಜೊತೆಯಲ್ಲಿರುವಾಗ ‘ತಾನು ದೇವರ ಜೊತೆಯಲ್ಲಿ ಇದ್ದೇನೆ’ ಅನಿಸುತ್ತಿತ್ತಂತೆ.

ಬಾಡಿಗಾರ್ಡ್ ಆಗಿರುವ ಚಲಪತಿಯವರನ್ನು ಎಂದಿಗೂ ದೂರದವನು ಎಂದು ಭಾವಿಸದೆ ದೊಡ್ಡ್ಮನೆ ಕುಟುಂಬದ ಸದಸ್ಯನಂತೆ ನೋಡುತ್ತಿದ್ದರಂತೆ. ಅಪ್ಪು ಅವರು ತನ್ನ ಪಕ್ಕದಲ್ಲಿಯೇ ಸದಾ ಜೊತೆಗಾರನಂತೆ ಇರುವ ಬಾಡಿಗಾರ್ಡ್ಗೆ ತಿಂಗಳಿಗೆ ಸುಮಾರು 70 ಸಾವಿರ ರೂಪಾಯಿಗಳನ್ನು ಸಂಬಳವಾಗಿ ನೀಡುತ್ತಿದ್ದರಂತೆ. ‘ಅವರ ಪ್ರೀತಿಯನ್ನು ಹಣದಲ್ಲಿ ಅಳೆಯಲು ಸಾಧ್ಯವಿಲ್ಲ’ ಎಂಬ ವಿಚಾರವನ್ನು ಚಲಪತಿಯವರೇ ಹೇಳುತ್ತಾರೆ. ‘ಅವರ ಜೊತೆಯಲ್ಲಿದ್ದು ಅವರನ್ನು ನೋಡಿಕೊಳ್ಳುವ ಕೆಲಸ ದೊರೆತಿರುವುದೇ ನನ್ನ ಪುಣ್ಯ’ ಎಂದು ಚಲಪತಿಯವರು ಭಾವಿಸುತ್ತಾರಂತೆ.

Leave a Comment

error: Content is protected !!