ಕನ್ನಡ ಚಿತ್ರರಂಗದ ಈ ಮೂರು ಸ್ಟಾರ್ ಗಳು ನಂದಿನಿ ಪರವಾಗಿ ಉಚಿತವಾಗಿ ಬ್ರಾಂಡ್ ಅಂಬಾಸಿಡರ್ ಆಗಿದ್ದರು!

Kannada Stars ಇಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಯೊಬ್ಬರೂ ಕೂಡ ನಂದಿನಿ(Nandini) ಉತ್ಪನ್ನಗಳ ಕುರಿತಂತೆ ಹಾಗೂ ಅದರ ಹೆಸರು ಬೇರೆ ಕಡೆ ಹೋಗುತ್ತಿರುವ ಹಾಗೂ ಬೇರೆ ಸಂಸ್ಥೆಯ ಜೊತೆಗೆ ವಿಲೀನವಾಗುತ್ತಿರುವ ಬಗ್ಗೆ ಸಾಕಷ್ಟು ಕಳವಳವನ್ನು ವ್ಯಕ್ತಪಡಿಸುತ್ತಿದ್ದು ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಊಹಾಪೋಹಗಳು ಕೂಡ ಓಡಾಡುತ್ತಿವೆ. ಇಂದಿನ ಲೇಖನಿಯಲ್ಲಿ ಕೂಡ ಈ ಸಂಸ್ಥೆಯ ಪರವಾಗಿ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಂತಹ ಕನ್ನಡದ ನಟರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಕರ್ನಾಟಕ ಮಿಲ್ಕ್ ಫೆಡರೇಶನ್(Karnataka Milk Federation) ನ ಫೇಸ್ ಆಗಿರುವ ನಂದಿನಿ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಇದುವರೆಗೂ ಕಾಣಿಸಿಕೊಂಡಿರುವಂತಹ ಕನ್ನಡದ ಸ್ಟಾರ್ ನಟರ ಬಗ್ಗೆ ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ಒಂದಿಂಚು ಬಿಡದಂತೆ ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ 1994 ರಂದು ಕನ್ನಡ ಕಂಠೀರವ ಕನ್ನಡ ಕಲಾಭೂಷಣ ಡಾಕ್ಟರ್ ರಾಜಕುಮಾರ್ ರವರು ನಂದಿನಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಉಚಿತವಾಗಿ ಕಾಣಿಸಿಕೊಳ್ಳುತ್ತಾರೆ. ರೈತರನ್ನು ಹೈನುಗಾರಿಕೆಯಲ್ಲಿ ಉತ್ತೇಜಿಸುವ ಉದ್ದೇಶದಿಂದಲೇ ಅಣ್ಣಾವ್ರು ಇಂತಹ ಒಳ್ಳೆಯ ಹೆಜ್ಜೆಯನ್ನು ಇಡುತ್ತಾರೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಅವರು ಕೂಡ 2003ರಲ್ಲಿ ಉಚಿತವಾಗಿ ಯಾವುದೇ ಸಂಭಾವನೆ ಇಲ್ಲದೆ ನಂದಿನಿಯ ಬ್ರಾಂಡ್ ಅಂಬಾಸಿಡರ್ ಆಗಲು ಒಪ್ಪಿಕೊಳ್ಳುತ್ತಾರೆ.

ಇದಾದ ನಂತರ ಯಾವುದೇ ಸಂಭವನ ಇಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಕೂಡ ನಂದಿನಿಯ ಬ್ರಾಂಡ್ ಅಂಬಾಸಿಡರ್ ಆಗಿ 2009 ರಲ್ಲಿ ಆಯ್ಕೆಯಾಗುತ್ತಾರೆ. ಪುನೀತ್ ರಾಜಕುಮಾರ್ ಅವರ ಬೆಂಬಲದಿಂದ ಕೆಎಂಎಫ್ ಸಂಸ್ಥೆಯ ನಂದಿನಿ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿತ್ತು ಎನ್ನುವುದು ಕೂಡ ನಿಮಗೆಲ್ಲರಿಗೂ ತಿಳಿದಿದೆ. ಇವರೇ ಗೆಳೆಯರೇ ಕೆಎಂಎಫ್ ಪರವಾಗಿ ಯಾವುದೇ ಸಂಭಾವನೆ ಇಲ್ಲದೆ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಂತಹ ಕನ್ನಡದ ಮೂರು ನಟರತ್ನರು.

Leave a Comment

error: Content is protected !!