Komal: ಆ ಕಾಲದಲ್ಲಿ ಎಲ್ಲಾ ಕಾಮಿಡಿ ಕಲಾವಿದರ ರೇಟ್ ಏರಿಸಿದ್ದೆ ಕೋಮಲ್ ಅಂತೆ! ಅವರು ಒಂದು ದಿನಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Komal Kumar ಖ್ಯಾತ ಕಾಮಿಡಿ ಕಲಾವಿದ ಆಗಿರುವಂತಹ ನಟ ಕೋಮಲ್ ಕುಮಾರ್(Komal Kumar) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ಹಾಸ್ಯಮಯ ಸ್ಟಾರ್ ಆಗಿರುವಂತಹ ನವರಸ ನಾಯಕ ಜಗ್ಗೇಶ್(Jaggesh) ಅವರ ತಮ್ಮ ಆಗಿದ್ದಾರೆ. ಚಿತ್ರರಂಗದ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದಿದ್ದರೂ ಕೂಡ ಕೋಮಲ್ ಅವರು ಕಾಮಿಡಿ ಕಲಾವಿದನಾಗಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಪಡೆದುಕೊಳ್ಳುತ್ತಾರೆ.

ಜಗ್ಗೇಶ್(Jaggesh) ಅವರಂತೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಕಲಾವಿದನಾಗಿ ಕೋಮಲ್ ಕೂಡ ಸಾಕಷ್ಟು ಬೇಡಿಕೆಯನ್ನು ಹೊಂದಿದ್ದು ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಅವರು ಇರಲೇಬೇಕಾಗಿತ್ತು ಎನ್ನುವಷ್ಟರ ಮಟ್ಟಿಗೆ ಪ್ರೇಕ್ಷಕರು ಅವರ ಕಾಮಿಡಿಯನ್ನು ಇಷ್ಟಪಡುತ್ತಿದ್ದರು. ಆದರೆ ಮಧ್ಯದಲ್ಲಿಯೇ ಚದುರಂಗವನ್ನು ತೊರೆದು ಕೋಮಲ್ ಅವರ ಸಾಕಷ್ಟು ವರ್ಷಗಳ ಕಾಲ ಗಾಯಬ್ ಆಗಿದ್ದರು.

ಈಗ ಮತ್ತೆ ಉಂಡೆನಾಮ ಸಿನಿಮಾದ ಮೂಲಕ ನಾಯಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಕಂಬ್ಯಾಕ್ ಮಾಡಲು ಕೋಮಲ್ ಕುಮಾರ್(Komal Kumar) ಸಿದ್ಧರಾಗಿ ನಿಂತಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರ ಪೇಮೆಂಟ್ ಅನ್ನು ಜಾಸ್ತಿ ಮಾಡಿದ್ದೆ ನಾನು ಎನ್ನುವುದಾಗಿ ಹೇಳುತ್ತಾ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದನಾಗಿ ದಿನವೊಂದಕ್ಕೆ ಪಡೆಯುತ್ತಿದ್ದ ಸಂಭಾವನೆ ಬಗ್ಗೆ ಹೇಳಿಕೊಂಡಿದ್ದಾರೆ.

ಹೌದು ಒಂದು ಕಾಲದಲ್ಲಿ ನಟ ಕೋಮಲ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದನಾಗಿ ದಿನವೊಂದಕ್ಕೆ ಭರ್ಜರಿ ನಾಲ್ಕು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರು ಎಂಬುದಾಗಿ ಹೇಳಿಕೊಂಡಿದ್ದು ಇದು ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯವನ್ನು ಮೂಡಿಸಿದ್ದು ಈಗ ಮತ್ತೆ ನಾಯಕ ನಟನಾಗಿ ಅದರಲ್ಲೂ ಹಾಸ್ಯ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಮರು ಪಾದಾರ್ಪಣೆ ಮಾಡುತ್ತಿರುವಂತಹ ಕೋಮಲ್ ಕುಮಾರ್(Komal Kumar) ಅವರಿಗೆ ಅದೇ ರೀತಿ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!