Rishab Shetty: ಕಾಂತಾರದ ಎರಡನೇ ಭಾಗಕ್ಕಾಗಿ ರಿಷಬ್ ಶೆಟ್ಟಿ ಖರ್ಚು ಮಾಡುತ್ತಿರುವ ಹಣ ಎಷ್ಟು?

Kantara 2 ಕಾಂತಾರ(Kantara) ಸಿನಿಮಾದ ಮೊದಲ ಭಾಗ ಯಾವ ರೀತಿಯಲ್ಲಿ 19 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ ಸರಿಸುಮಾರು 450 ಕೋಟಿ ರೂಪಾಯಿಯ ಆಸು ಪಾಸಿನಲ್ಲಿ ಗಳಿಕೆ ಕಂಡಿದ್ದು ಪ್ರತಿಯೊಬ್ಬರನ್ನು ಕೂಡ ಮೂಕ ವಿಸ್ಮಿತರನ್ನಾಗಿ ಮಾಡಿತ್ತು ಎಂದರೆ ತಪ್ಪಾಗಲಾರದು ಯಾಕೆಂದರೆ ಚಿತ್ರತಂಡ ಕೂಡ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತದೆ ಎಂಬುದಾಗಿ ಭಾವಿಸಿರಲಿಲ್ಲ.

ಆದರೆ ರಿಶಬ್ ಶೆಟ್ಟಿ(Rishab Shetty) ಅವರ ಸಂಪೂರ್ಣ ನ್ಯಾಚುರಲ್ ಸ್ಟೋರಿ ಟೆಲ್ಲಿಂಗ್ ಸ್ಟೈಲ್ ಹಾಗೂ ಅವರು ಸಂಸ್ಕೃತಿಯ ಅನಾವರಣವನ್ನು ಮಾಡಿರುವ ರೀತಿ ಕನ್ನಡ ಭಾಷೆಗಳಿಗಿಂತ ಹೆಚ್ಚಾಗಿ ಪರಭಾಷಿಗರೆ ಇಷ್ಟಪಡುವಂತೆ ಮಾಡಿತು. ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಕಾಂತಾರ ನಂತರದ ದಿನಗಳಲ್ಲಿ ಪರಭಾಶಿಗರ ಬೇಡಿಕೆಯ ಮೇಲಿಗೆ ಪ್ಯಾನ್ ಇಂಡಿಯಾ ಸಿನಿಮಾ ಆಯ್ತು.

ಇನ್ನು ಸದ್ಯಕ್ಕೆ ಕಾಂತಾರ ಸಿನಿಮಾದ ಎರಡನೇ ಭಾಗದ ಸ್ಕ್ರಿಪ್ಟ್ ಬರವಣಿಗೆಯಲ್ಲಿ ರಿಷಬ್ ಶೆಟ್ಟಿ(Rishab Shetty) ತಮ್ಮನ್ನು ತಾವು ಕರಾವಳಿಯ ಭಾಗದಲ್ಲಿ ಬ್ಯುಸಿಯಾಗಿರಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಅಂದರೆ ಆಗಸ್ಟ್ ಆಸುಪಾಸಿನಲ್ಲಿ ಕಥೆ ಸಿದ್ಧಪಡಿಸಿಕೊಂಡು ಚಿತ್ರೀಕರಣಕ್ಕೆ ನೇರವಾಗಿ ಹೋಗುವ ಲೆಕ್ಕಾಚಾರದಲ್ಲಿ ಶೆಟ್ರು ಇದ್ದಾರೆ. ಇನ್ನು ಸಿನಿಮಾದ ಬಜೆಟ್ ಎಷ್ಟಾಗಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಮೂಲಗಳ ಪ್ರಕಾರ ಮೊದಲ ಸಿನಿಮಾದ ಯಶಸ್ಸಿನ ನಂತರ ರಿಷಬ್ ಶೆಟ್ಟಿ(Rishab Shetty) ಮೇಕಿಂಗ್ ಕ್ವಾಲಿಟಿಗಾಗಿ ವಿಶೇಷ ಕ್ಯಾಮೆರಾ ಗಳನ್ನು ತರಿಸಬಹುದು ಹಾಗೂ ಬೇರೆ ಭಾಷೆಯ ಕಲಾವಿದರನ್ನು ಕೂಡ ಅಗತ್ಯವಿದ್ದಲ್ಲಿ ಕರೆಸಬಹುದು ಹೀಗಾಗಿ 30 ರಿಂದ 50 ಕೋಟಿ ಬಜೆಟ್ ಆಸ್ಪಾಸಿನಲ್ಲಿ ಸಿನಿಮಾ ಮುಗಿಯಲಿದೆ ಎಂಬುದಾಗಿ ಲೆಕ್ಕಾಚಾರ ಹಾಕಿದ್ದು ರಿಷಬ್ ಶೆಟ್ಟಿ ಮತ್ತೊಂದು ಮಾಸ್ಟರ್ ಪೀಸ್ ಸಿನಿಮಾವನ್ನು ಕನ್ನಡದ ಮೂಲಕ ನೀಡೋಕೆ ಸಜ್ಜಾಗಿದ್ದಾರೆ ಎಂದು ಹೇಳಬಹುದು.

Leave a Comment

error: Content is protected !!