KL Rahul: ಪದೇ ಪದೇ ಬ್ಯಾಟಿಂಗ್ ನಲ್ಲಿ ಫೈಲ್ ಆಗುತ್ತಿರುವ ರಾಹುಲ್ ಬಗ್ಗೆ ಮಾವ ಸುನಿಲ್ ಶೆಟ್ಟಿ ಹೇಳಿದ್ದೇ ಬೇರೆ!

Suniel Shetty ಕನ್ನಡಿಗ ಕೆಎಲ್ ರಾಹುಲ್(KL Rahul) ಈಗಾಗಲೇ ಇಡೀ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ನಲ್ಲಿ ಹಲವಾರು ತಂಡಗಳ ಪರವಾಗಿ ಆಡಿದ್ದು ಸದ್ಯಕ್ಕೆ ಕಳೆದ ಸೀಸನ್ ನಿಂದ ಹೊಸತಂಡವಾಗಿರುವ ಲಕ್ನೋ(LSG) ತಂಡದ ಪರವಾಗಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಂಡ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ ತಂಡದ ನಾಯಕ ಆಗಿರುವ ಕೆಎಲ್ ರಾಹುಲ್(KL Rahul) ಅವರು ತಂಡದ ಪರವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ಅತ್ಯಂತ ಕಳಪೆ ರೀತಿಯಲ್ಲಿ ತೋರ್ಪಡಿಸುತ್ತಿರುವುದೇ ತಂಡ ಹಾಗೂ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೂ ಕೂಡ ತಲೆನೋವು ತರುವಂತಹ ಪರಿಸ್ಥಿತಿಯನ್ನು ನಿರ್ಮಾಣಗೊಳಿಸಲಿದೆ ಎಂದು ಹೇಳಬಹುದಾಗಿದೆ.

ಈಗಾಗಲೇ ತಮ್ಮ ಮಗಳಾಗಿರುವ ಅಥಿಯ ಶೆಟ್ಟಿ(Athiya shetty) ರವರನ್ನು ಕೆ ಎಲ್ ರಾಹುಲ್ ಮದುವೆಯಾಗಿರುವ ಕಾರಣದಿಂದಾಗಿ ಇಂತಹ ಪ್ರಶ್ನೆಗಳು ಸುನಿಲ್ ಶೆಟ್ಟಿ(Suniel Shetty) ಅವರನ್ನು ಕೂಡ ಮಾಧ್ಯಮಗಳು ಕೇಳಿಯೇ ಕೇಳುತ್ತವೆ. ಹೀಗಾಗಿ ಇದೇ ಪ್ರಶ್ನೆಯನ್ನು ಈಗ ಸುನಿಲ್ ಶೆಟ್ಟಿ ಅವರಿಗೆ ಕೇಳಿದಾಗ ಸುನಿಲ್ ಶೆಟ್ಟಿ ಅವರು ಹೇಳಿರುವ ಹೇಳಿಕೆ ಏನೆಂಬುದನ್ನು ತಿಳಿಯೋಣ ಬನ್ನಿ.

ಪ್ರತಿಯೊಬ್ಬರ ಕರಿಯರ್ ನಲ್ಲಿ ಕೂಡ ಒಂದು ಸಮಯದಲ್ಲಿ ಇಳಿಕೆ ಕಂಡು ಬರುತ್ತದೆ ಆದರೆ ಅದರಿಂದ ಹೊರಬರುವುದು ಕೂಡ ಅವರಿಗೆ ತಿಳಿದಿರುತ್ತದೆ. ರಾಹುಲ್(Rahul) ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಆತ ಇಂತಹ ಪ್ರಶ್ನೆಗಳಿಗೆ ತನ್ನ ಬ್ಯಾಟಿಂಗ್ ಮೂಲಕವೇ ಉತ್ತರ ನೀಡಲಿದ್ದಾನೆ ಎಂಬುದಾಗಿ ತಮ್ಮ ಅಳಿಯನ ಕುರಿತಂತೆ ಸುನಿಲ್ ಶೆಟ್ಟಿ ಭರವಸೆಯನ್ನು ವ್ಯಕ್ತ ಪಡಿಸಿದ್ದಾರೆ.

Leave a Comment

error: Content is protected !!