ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಜೋಡಿಗಳ ಕ್ಯೂಟೆಸ್ಟ್ ಫೋಟೋ

Kavitha Gowda Chandan: ಸ್ನೇಹಿತರೆ, ಕಳೆದ ಕೆಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ (Lakshmi Baramma) ಎಂಬ ಸೀರಿಯಲ್ ಬಹುದೊಡ್ಡ ಮಟ್ಟದಲ್ಲಿ ಜನಮನ್ನಣೆ ಗಳಿಸಿತ್ತು. ಪ್ರತಿನಿತ್ಯ ಒಂದರ ಮೇಲೆ ಮತ್ತೊಂದು ಟ್ವಿಸ್ಟ್ ತೆಗೆದುಕೊಳ್ಳುತ್ತಾ ಸೀರಿಯಲ್ ಪ್ರಿಯರಲ್ಲಿ ದಿನೇ ದಿನೇ ಕುತೂಹಲವನ್ನು ಹೆಚ್ಚಿಸುತ್ತಿದ್ದಂತಹ ಈ ಧಾರಾವಾಹಿಯು ತನ್ನದೇ ಆದ ವಿಶೇಷ ಅಭಿಮಾನಿ ಬಳಗವನ್ನು ಗಳಿಸುವುದರ ಜೊತೆಗೆ ಟಿ ಆರ್ ಪಿ ರೇಟಿಂಗ್ ನಲ್ಲಿಯೂ ಅಗ್ರ ಸ್ಥಾನವನ್ನು ಅಲಂಕರಿಸಿದ್ದು,

ಅದರಂತೆ ಈ ಧಾರವಾಹಿಯಲ್ಲಿ ಚಂದನ್ ಮತ್ತು ಚಿನ್ನು ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಕವಿತಾ ಗೌಡ ಮತ್ತು ಚಂದನ್ ಕುಮಾರ್(Kavitha Gowda and Chandan Gowda) ಜೋಡಿಗಳು ಹಲವು ವರ್ಷಗಳ ಕಾಲ ಪ್ರೀತಿಸಿ, ಮೇ 14, 2021ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ಸ್ನೇಹಿತರೆ ಕೋವಿಡ್ ಸಮಯದಲ್ಲಿಯೂ ಬಹಳ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಮಾಸ್ಕ್ ಧರಿಸಿ ಮುಂಜಾಗ್ರತ ಕ್ರಮಗಳನ್ನು ಪಾಲಿಸುವ ಮೂಲಕ ಮದುವೆಯಾಗಿದ್ದ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಮದುವೆ ಫೋಟೋಗಳ ಮೂಲಕ ನೆಟ್ಟಿಗರ ಗಮನ ಸೆಳೆದರು.

ಮದುವೆಯಾದ ನಂತರ ವೃತ್ತಿ ಬದುಕಿನಲ್ಲಿ ಸಕ್ರಿಯರಾಗಿರುವ ಚಂದನ್ ಮತ್ತು ಕವಿತಾ ತಮ್ಮ ಶೂಟಿಂಗ್ ಕೆಲಸಗಳಿಂದ ಬ್ರೇಕ್ ಪಡೆದು ಪ್ರವಾಸಕ್ಕೆ ತೆರಳಿದ್ದು, ಆ ಸಮಯದಲ್ಲಿ ತೆಗೆದುಕೊಂಡಂತಹ ಕೆಲ ಸುಂದರ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ (Instagram account) ಹಂಚಿಕೊಂಡು ವೈರಲಾಗಿದ್ದಾರೆ. ಹೌದು ಗೆಳೆಯರೇ ಆಗಾಗ ತಮ್ಮ ಫೋಟೋಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳನ್ನು ಆಕರ್ಷಿಸಿಕೊಳ್ಳುವ ಈ ಕ್ಯೂಟೆಸ್ಟ್ ಕಪಲ್ಸ್ ಗಳು ಲೆವೆಲ್ ರೋಡ್(Lavelle road) ನಲ್ಲಿ ಇರುವಂತಹ ಐಷಾರಾಮಿ ರೆಸ್ಟೋರೆಂಟ್ ಒಂದಕ್ಕೆ ತೆರಳಿ ರಾತ್ರಿ ಊಟವನ್ನು ಮಾಡಿದ್ದಾರೆ.

ಆ ಸಮಯದಲ್ಲಿ ತೆಗೆದುಕೊಂಡಂತಹ ಸೆಲ್ಫಿ ಫೋಟೋಗಳನ್ನು ಕವಿತ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ‘ಈ ಸುಂದರ ಸಂಜೆ ಹೀಗಿತ್ತು’ ಎಂಬ ಕ್ಯಾಪ್ಷನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!