Sanjay Dutt: ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಲೀಕ್ ಆಯ್ತು ನೋಡಿ ಸಂಜಯ್ ದತ್ ಮಾಸ್ ಲುಕ್!

KD Film ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ನಾಯಕ ನಟನಾಗಿ ಹಾಗೂ ಜೋಗಿ ಪ್ರೇಮ್(Jogi Prem) ನಿರ್ದೇಶಕನಾಗಿ ಕಾಣಿಸಿಕೊಂಡಿರುವಂತಹ KD ಸಿನಿಮಾ ಚಿತ್ರಿಕರಣದ ಹಂತದಲ್ಲಿದ್ದು ಇತ್ತೀಚಿಗಷ್ಟೇ ನಟಿ ಶಿಲ್ಪ ಶೆಟ್ಟಿ(Shilpa Shetty) ಅವರು ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಹಲ್ಚಲ್ ಅನ್ನು ಸೃಷ್ಟಿಸಿತ್ತು.

ಇನ್ನು ಈ ಸಿನಿಮಾ Vintage ಕಾಲದಲ್ಲಿ ನಡೆದಿರುವಂತಹ ಬೆಂಗಳೂರಿನ ಕೆಲವೊಂದು ಘಟನೆಗಳನ್ನು ಆಧರಿಸಿದ ಸಿನಿಮಾ ಎಂಬುದಾಗಿ ತಿಳಿದು ಬರುತ್ತಿದ್ದು ಅಂದಿನ ಕಾಲಕ್ಕೆ ತಕ್ಕಂತೆ ಪ್ರತಿಯೊಂದು ವಾತಾವರಣ ಕೂಡ ಸೆಟ್ ನಲ್ಲಿ ನಿರ್ಮಾಣವಾಗಿದೆ. ಖಂಡಿತವಾಗಿ ಸಿನಿಮಾ ಪ್ರೇಮ್(Prem) ಅವರ ನಿರ್ದೇಶನದಲ್ಲಿ ಸೊಗಸಾಗಿ ಮೂಡಿ ಬರಲಿದೆ ಎನ್ನುವುದಂತೂ ಸಿನಿಮಾ ಪಂಡಿತರ ನಂಬಿಕೆಯಾಗಿದೆ.

ಇನ್ನು ಈ ಸಿನಿಮಾದಲ್ಲಿ ಕೆಜಿಎಫ್ ಚಾಪ್ಟರ್ 2(KGF Chapter 2) ಚಿತ್ರದ ನಂತರ ಬಾಲಿವುಡ್ ಚಿತ್ರರಂಗದ ಸಂಜು ಬಾಬಾ ಆಗಿರುವ ಸಂಜಯ್ ದತ್ ರವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಅಧಿಕೃತ ಪ್ರಕಟಣೆ ಕೂಡ ಹೊರಬಂದಿತ್ತು. ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂಜಯ್ ದತ್(Sanjay Dutt) ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಕೂಡ ಇತ್ತು.

ಚಿತ್ರತಂಡ ಇದರ ಕುರಿತಂತೆ ಯಾವುದೇ ಫೋಟೋ ಅಥವಾ ಪಸ್ಟ್ ಲುಕ್ ಪೋಸ್ಟರ್ಗಳನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ಚಿತ್ರೀಕರಣದ ಸೆಟ್ನಲ್ಲಿ ಡೆಡ್ಲಿ ಆದಿತ್ಯ(Deadly Aditya) ಅವರ ಸಂಜಯ್ ದತ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತೆಗೆದಿರುವಂತಹ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಕೆಡಿ ಸಿನಿಮಾದ ಫೋಟೋಗಳು ಆಗಿದ್ದು ಸಂಜಯ್ ದತ್(Sanjay Dutt) ಅವರ ಲುಕ್ ನೋಡಿ ಎಲ್ಲರೂ ಕೂಡ ಥ್ರಿಲ್ ಆಗಿದ್ದಾರೆ.

Leave a Comment

error: Content is protected !!