Kiccha Sudeep: ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿ ಕಿಚ್ಚ ಸುದೀಪ್ ದಂಪತಿಗಳು ಇಲ್ಲಿವೆ ಫೋಟೋಸ್

Kiccha Sudeep: ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಹಾಗೂ ಪ್ರಿಯ ದಂಪತಿಗಳಿಗೆ ಸಾಮಾಜಿಕ ಜಾಲತಾಣದ ತುಂಬೆಲ್ಲ 22ನೇ ವರ್ಷದ ವಾರ್ಷಿಕೋತ್ಸವಕ್ಕೆ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ. ಅವರ ಮುದ್ದಿನ ಮಗಳು ಸಾನ್ವಿ, ಸ್ನೇಹಿತರು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ವತಿಯಿಂದ ಮದುವೆ ವಾರ್ಷಿಕೋತ್ಸವಕ್ಕೆ (Marriage Anniversary) ಶುಭಾಶಯವನ್ನು ಕೋರಿದ್ದು ಕಿಚ್ಚ ಸುದೀಪ್ ಹಾಗೂ ಪ್ರಿಯ ಅವರ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದ ತುಂಬೆಲ್ಲಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೌದು ಸ್ನೇಹಿತರೆ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಈ ಜೋಡಿಗಳು ತಮ್ಮ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಮನಸ್ತಾಪ ಮೂಡಿದರು ಕೂಡ ಸಂಸಾರಿಕ ಜೀವನದಲ್ಲಿ ಇದೆಲ್ಲವೂ ಸಾಮಾನ್ಯವಾಗಿವಾದದ್ದು ಎಂಬುದನ್ನು ಅರಿತುಕೊಂಡು ಇಂದಿಗೂ ಬಹಳ ಅನ್ಯೂನ್ಯವಾಗಿ ಎಲ್ಲೆಡೆ ಕಾಣಿಸಿಕೊಳ್ಳುತ್ತಾ ಇತರರಿಗೆ ಆದರ್ಶವಾಗುವಂತೆ ಬದುಕುತ್ತಿದ್ದಾರೆ.

ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಬಹಳ ಖುಷಿಯಿಂದ ಲೈಫ್ ಲೀಡ್ ಮಾಡುತ್ತಾ 22 ವರ್ಷಗಳನ್ನು ಒಟ್ಟಾಗಿ ಕಳೆದಿದ್ದಾರೆ. ಕಿಚ್ಚ ಸುದೀಪ್ ಅವರನ್ನು ರೀಲ್ ಹಾಗೂ ರಿಯಲ್ ಲೈಫ್ ಎರಡರಲ್ಲೂ ಹೀರೋ ಎಂಬುದನ್ನು ತಮ್ಮ ಪ್ರತಿ ನಡೆಯ ಮೂಲಕ ಸಾಬೀತು ಪಡಿಸುತ್ತಲೇ ಇರುತ್ತಾರೆ. ಸಿನಿ ಕೆಲಸಗಳನ್ನು ಎಷ್ಟು ಸುಗಮವಾಗಿ ನಿಭಾಯಿಸುತ್ತಾರೋ ತಮ್ಮ ವೈಯಕ್ತಿಕ ವಿಚಾರಗಳನ್ನು ಅಷ್ಟೇ ಪ್ರೀತಿ ಹಾಗೂ ಕಾಳಜಿ ವಹಿಸಿ ನೋಡಿಕೊಳ್ಳುತ್ತಾರೆ.

ಇನ್ನು 2001ರಲ್ಲಿ ಪ್ರೀತಿಸಿ ಮದುವೆಯಾದಂತಹ ಈ ಜೋಡಿಗಳಿಗೆ ಸಾನ್ವಿ ಸುದೀಪ್ (Saanvi Sudeep) ಎಂಬ ಮುದ್ದಿನ ಮಗಳಿದ್ದು, ಆಗಾಗ ತಮ್ಮ ಮಗಳೊಂದಿಗೆ ಚಿತ್ರ ವಿಚಿತ್ರವಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಕಿಚ್ಚ ವೈರಲ್ ಆಗುತ್ತಿರುತ್ತಾರೆ. ಆದರೆ ಈಗ ಇವರಿಬ್ಬರ ಮದುವೆ ಆನಿವರ್ಸರಿಯ ಅಂಗವಾಗಿ ಪ್ರಿಯ ಸುದೀಪ್ (Priya Sudeep) ಅವರು ಟ್ವಿಟ್ಟರ್ ನಲ್ಲಿ ಗಂಡನೊಟ್ಟಿಗಿನ ಫೋಟೋ ಒಂದನ್ನು ಹಂಚಿಕೊಂಡು ನಮ್ಮ ಮಧ್ಯೆ ಇರುವ ಪ್ರೀತಿಗೆ ಈಗಲೂ ಹೃದಯ ಬಡೆದುಕೊಳ್ಳುತ್ತಿದೆ ಎಂಬ ಕ್ಯಾಪ್ಶನ್ ಬರೆದು 22ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ Vasishta Simha: ಹುಟ್ಟು ಹಬ್ಬದ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣನ ಆಶೀರ್ವಾದ ಪಡೆದ ವಸಿಷ್ಟ ಸಿಂಹ!

Leave a Comment

error: Content is protected !!