Kiccha Sudeep: ಕಿಚ್ಚನ ಜೊತೆಗೆ ಸಿನಿಮಾ ಮಾಡಬೇಕಾಗಿದ್ದ ನಿರ್ದೇಶಕ ಈಗ ಯಾರು ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಗೊತ್ತಾ?

Kiccha Sudeep ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾ ಗೆ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದಾರೆ. ವಿಕ್ರಾಂತ್ ರೋಣ(Vikrant Rona) ಸಿನಿಮಾ ಕಳೆದ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆಯಾಗಿತ್ತು ಅದಾದ ನಂತರ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಯಕ್ಷಪ್ರಶ್ನೆಯಾಗಿದೆ.

ಕಿಚ್ಚ ಸುದೀಪ್(Kiccha Sudeep) ನಾಯಕ ನಟನಾಗಿ ಕಾಣಿಸಿಕೊಳ್ಳಲಿರುವ 46ನೇ ಸಿನಿಮಾ ಯಾವುದು ಪ್ರತಿಯೊಬ್ಬರಿಗೂ ಕೂಡ ಈಗ ತಿಳಿದುಕೊಳ್ಳಬೇಕಾಗಿರುವಂತಹ ಕುತೂಹಲವಾದ ವಿಚಾರವಾಗಿದೆ. ಇಂದಿನಿಂದ ಅವರ ಮುಂದಿನ ಸಿನಿಮಾದ ಪ್ರೊಮೋ ಚಿತ್ರೀಕರಣ ನಡೆಯಲಿದ್ದು ಅದರ ಕುರಿತಂತೆ ಕೂಡ ಅಭಿಮಾನಿಗಳಲ್ಲಿ ಸಂತೋಷವನ್ನು ಮೂಡಿಸಿದೆ.

ಅದೇ ರೀತಿ ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದ್ದ ನಿರ್ದೇಶಕ ಈಗ ತಮಿಳುನಾಖ್ಯಾತ ನಟ ಆಗಿರುವಂತಹ ತಲಪತಿ ವಿಜಯ್(Thalapathy Vijay) ನಟನೆಯಲ್ಲಿ ಮೂಡಿ ಬರುತ್ತಿರುವಂತಹ ಮುಂದಿನ ಸಿನಿಮಾದ ನಿರ್ದೇಶಕರಾಗಿದ್ದಾರೆ. ಹಾಗಿದ್ದರೆ ಬನ್ನಿ ಆ ನಿರ್ದೇಶಕ ಯಾರು ಎಂಬುದನ್ನು ತಿಳಿಯೋಣ.

ಹೌದು ತಮಿಳುನಾಡು ಚಿತ್ರ ನಿರ್ದೇಶಕ ಆಗಿರುವಂತಹ ವೆಂಕಟ್ ಪ್ರಭು(Venkat Prabhu) ಅವರ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾ ಬರೋದು ಖಾತ್ರಿ ಯಾಗಿತ್ತು ಆದರೆ ಈಗ ಅವರು ತಲಪತಿ ವಿಜಯ್ ನಟನೆಯ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ಸಾಕಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಅವರು ಕಿಚ್ಚ ಸುದೀಪ್ ನಟನೆಯ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!