Kirik Keerthi: ಕಿರಿಕ್ ಕೀರ್ತಿ ಹಾಗೂ ಅವರ ಹೆಂಡತಿ ಮಧ್ಯೆ ಹುಳಿ ಹಿಂಡಿದ್ದು ಯಾರು? ಇಲ್ಲಿದೆ ನೋಡಿ ಜಗಳದ ಹಿನ್ನೆಲೆಯ ಸಂಪೂರ್ಣ ವಿವರ.

Kirik Keerthi ಕಿರಿಕ್ ಕೀರ್ತಿ(Kirik Keerthy) ಅವರು ನಿರೂಪಕನಾಗಿ ನಟನಾಗಿ ಈಗಾಗಲೇ ಹಲವಾರು ಬಾರಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡಿರುವಂತಹ ಪ್ರತಿಭೆ ಹೇಗಿದ್ದರು ಕೂಡ ಇತ್ತೀಚಿನ ದಿನಗಳಲ್ಲಿ ಅವರ ವೈಯಕ್ತಿಕ ಜೀವನದ ಕಲಹ ಎನ್ನುವುದು ಸಾಮಾಜಿಕವಾಗಿ ಕೇಳಿ ಬಂದು ಅವರ ನೆಮ್ಮದಿಯನ್ನು ಹಾಳು ಮಾಡಿದೆ ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಅವರ ದಾಂಪತ್ಯ ಜೀವನ ಎನ್ನುವುದು ಅಹಿತಕರ ರೀತಿಯಲ್ಲಿ ಸದ್ದು ಮಾಡುತ್ತಿದೆ.

ನಿಮಗೆಲ್ಲರಿಗೂ ನೆನಪಿರಬಹುದು ಕಿರಿಕ್ ಕೀರ್ತಿ(Kirik Keerthi) ಅವರು ಅರ್ಪಿತ(Arpitha Keerthi) ಅವರನ್ನು ಮನೆಯವರ ವಿರೋಧದ ನಡುವೆ ಕೂಡ ಪ್ರೀತಿಸಿ ಮದುವೆಯಾದವರು. ಇಷ್ಟೊಂದು ರೋಚಕ ಲವ್ ಸ್ಟೋರಿ ಇದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದೆ ಇಬ್ಬರು ಕೂಡ ಬೇರೆ ಬೇರೆಯಾಗಿ ವಾಸಿಸುತ್ತಿರುವುದು ಯಾಕೆ ಇವರಿಬ್ಬರ ಜಗಳದ ಹಿನ್ನೆಲೆ ಏನು ಎನ್ನುವುದಾಗಿ ಹಲವರ ತಲೆಯಲಿ ಗೊಂದಲದ ಗೂಡು ಕಟ್ಟಿರಬಹುದು. ಬನ್ನಿ ಇದರ ಕುರಿತಂತೆ ಇನ್ನಷ್ಟು ವಿವರವಾಗಿ ತಿಳಿಯೋಣ.

ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವಂತಹ ಪೋಸ್ಟ್ಗಳನ್ನು ನೋಡಿ ನಾನು ನಸುನಾಗುತ್ತಿದ್ದೆ ಯಾಕೆಂದರೆ ಅಲ್ಲಿ ನನ್ನ ಬಗ್ಗೆ ತಿಳಿಯದೆ ಇರುವವರು ಅವರ ಬಾಯಿಗೆ ಬಂದಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇಲ್ಲಿ ನಡೆದಿರುವಂತಹ ವಿಚಾರ ನನ್ನ ಹಾಗೂ ಅರ್ಪಿತ ನಡುವೆ ಮಾತ್ರ ಇದೆ ಹೀಗಾಗಿ ಇದರ ಕುರಿತಂತೆ ನಮ್ಮಿಬ್ಬರಿಗಿಂತ ಹೆಚ್ಚಾಗಿ ಯಾರೂ ಕೂಡ ತಿಳಿದಿಲ್ಲ ಎಂಬುದಾಗಿ ಕಿರಿಕ್ ಕೀರ್ತಿ(Kirik Keerthi) ಈ ಕುರಿತಂತೆ ಮೊದಲ ಹೇಳಿಕೆಯನ್ನು ನೀಡಿದ್ದಾರೆ.

ನಮ್ಮ ಜೀವನದಲ್ಲಿ ನಾಲ್ಕು ಪಾತ್ರಗಳು ನಾವಿಬ್ಬರು ದೂರವಾಗುವಂತೆ ಮಾಡಿದ್ದು ಒಂದು ವೇಳೆ ನನ್ನ ಜಾಗದಲ್ಲಿ ಬೇರೆ ಯಾರೇ ಆಗಿದ್ದರೂ ಕೂಡ ಒಂದು ಜೈಲಿನಲ್ಲಿ ಇರುತ್ತಿದ್ದ ಇಲ್ಲವೇ ಸ್ಮ’ ಶಾನದಲ್ಲಿ ಇರುತ್ತಿದ್ದ ಎಂಬುದಾಗಿ ತಮ್ಮ ಜೀವನದಲ್ಲಿ ಅವರು ಅನುಭವಿಸುತ್ತಿರುವಂತಹ ಕಷ್ಟದ ವಿವರಣೆಯನ್ನು ನೀಡಿದ್ದಾರೆ. ಸಾಮಾನ್ಯ ಜನರಾಗಿ ನಾವು ಬಯಸುವುದು ಅವರಿಬ್ಬರೂ ಒಂದಾಗಿರಲಿ ಎನ್ನುವುದು. ನೀವು ಕೂಡ ಕಿರಿಕ್ ಕೀರ್ತಿ ಹಾಗೂ ಅರ್ಪಿತ ದಂಪತಿಗಳಿಬ್ಬರೂ ಕೂಡ ಮತ್ತೆ ಜೊತೆಯಾಗಿ ಜೀವಿಸಲಿ ಎನ್ನುವ ಆಸೆಯನ್ನು ಹೊಂದಿದ್ದರೆ ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!