Suniel Shetty: ಕೆಎಲ್ ರಾಹುಲ್ ನನ್ನು ತನ್ನ ಮಗಳಿಗೆ ಮದುವೆ ಮಾಡಿ ಕೊಟ್ಟ ಹಿಂದಿನ ಕಾರಣವನ್ನು ತಿಳಿಸಿದ ಸುನಿಲ್ ಶೆಟ್ಟಿ ಹೇಳಿದ್ದೇನು?

KL Rahul ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಎಲ್ ರಾಹುಲ್ ಕನ್ನಡ ಹಾಗೂ ಕರ್ನಾಟಕ ರಾಜ್ಯ ಕಂಡಂತಹ ಅತ್ಯಂತ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುತ್ತಿರುವಂತಹ ಏಕೈಕ ಕರ್ನಾಟಕ ಮೂಲದ ಕ್ರಿಕೆಟ್ ಗೆ ಆಗಿದ್ದಾರೆ ಕೆ ಎಲ್ ರಾಹುಲ್(KL Rahul). ಇತ್ತೀಚಿಗಷ್ಟೇ ಮಂಗಳೂರು ಮೂಲದ ಬಾಲಿವುಡ್ ನಟ ಸುನಿಲ್ ಶೆಟ್ಟಿ(Suniel Shetty) ಅವರ ಮಗಳಾಗಿರುವ ಅಥಿಯ ಶೆಟ್ಟಿ(Athiya Shetty)ಯವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಇವರಿಬ್ಬರೂ ಹೇಗೆ ಮದುವೆಯಾದರು ಎನ್ನುವುದರ ಕುರಿತಂತೆ ಸ್ವತಹ ಸುನಿಲ್ ಶೆಟ್ಟಿ ಅವರೇ ಕಪಿಲ್ ಶರ್ಮ(Kapil Sharma) ಶೋ ಕಾರ್ಯಕ್ರಮದಲ್ಲಿ ಹೋಗಿದ್ದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಒಂದು ದಿನ ಟಿವಿಯಲ್ಲಿ ಕ್ರಿಕೆಟ್ ನೋಡುತ್ತಿರುವ ಸಂದರ್ಭದಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನ ಸುನಿಲ್ ಶೆಟ್ಟಿ ಅವರಿಗೆ ತುಂಬಾನೇ ಇಷ್ಟ ಆಗುತ್ತೆ ಅದಕ್ಕಿಂತ ಹೆಚ್ಚಾಗಿ ಅವರು ಕೂಡ ಮಂಗಳೂರಿನವರು ಎನ್ನುವುದು ಮತ್ತೊಂದು ಇಷ್ಟ ಆಗುವಂತಹ ವಿಚಾರವಾಗಿರುತ್ತದೆ.

ಆ ಸಂದರ್ಭದಲ್ಲಿ ಅವರ ಪಕ್ಕದಲ್ಲಿ ಕುಳಿತಿದ್ದಂತಹ ಮಗಳು ಹಾಗೂ ಪತ್ನಿಗೆ ತಿಳಿಸಿ ಈ ಹುಡುಗ ಚೆನ್ನಾಗಿ ಮುಂದಿನ ದಿನಗಳಲ್ಲಿ ಮಿಂಚುತ್ತಾನೆ ಎಂಬುದಾಗಿ ಹೇಳಿದಾಗ ಇಬ್ಬರೂ ಕೂಡ ಮುಖ ಮುಖ ನೋಡಿಕೊಂಡು ನಕ್ಕಿದ್ದರಂತೆ. ಅಂದರೆ ಅಷ್ಟರಲ್ಲಾಗಲೇ ಕೆ ಎಲ್ ರಾಹುಲ್ ಹಾಗೂ ಅಥಿಯಶೆಟ್ಟಿ(Athiya Shetty) ಇಬ್ಬರೂ ಕೂಡ ಪ್ರೀತಿಯಲ್ಲಿ ಬಿದ್ದಿದ್ದರು ಎಂಬುದಾಗಿ ತಿಳಿದು ಬಂದಿತ್ತು.

ಅದಕ್ಕೂ ಮುನ್ನವೇ ಸುನಿಲ್ ಶೆಟ್ಟಿ(Suniel Shetty) ಅವರು ತಮ್ಮ ಮಗಳಿಗೆ ಯಾರಾದರೂ ಡಿಸೆಂಟ್ ಆಗಿರುವ ಸೌತ್ ಇಂಡಿಯನ್ ಹುಡುಗನನ್ನೇ ಅದರಲ್ಲೂ ವಿಶೇಷವಾಗಿ ನಮ್ಮ ಮಂಗಳೂರಿನವರನ್ನೇ ಮದುವೆಯಾಗು ಎಂಬುದಾಗಿ ಕೂಡ ಹೇಳಿದ್ದರಂತೆ. ಕೊನೆಗೂ ಸುನಿಲ್ ಶೆಟ್ಟಿ ಅವರು ಇಷ್ಟಪಟ್ಟಂತಹ ಹುಡುಗನನ್ನು ಅವರ ಮಗಳು ಮದುವೆಯಾಗಿರುವುದು ಈಗ ಸಂತೋಷದ ವಿಚಾರವಾಗಿದೆ.

Leave a Comment

error: Content is protected !!