Leelavati: ಹಿರಿಯ ನಟಿ ಲೀಲಾವತಿ ಅಮ್ಮನವರ ಕೊನೆಯ ಕ್ಷಣಗಳು!

Leelavathi Last Moments ಸ್ನೇಹಿತರೆ, 85 ವರ್ಷದ ನಟಿ ಲೀಲಾವತಿಯವರಿಗೆ ನೆನ್ನೆ ಮಧ್ಯಾಹ್ನದ ಸಮಯದಲ್ಲಿ ಉಸಿರಾಟದ ಸಮಸ್ಯೆ ಭಾದಿಸಲು ಆರಂಭವಾದ ಕಾರಣ ಅವರ ಮನೆ ಮಂದಿಯವರಲ್ಲ ಕೂಡಲೇ ನೆಲಮಂಗಲದ ಸೋಲದೇವನ ಹಳ್ಳಿಯ ಫಾರ್ಮ್ ಹೌಸ್ ನಿಂದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದರು. ಕೆಲ ಗಂಟೆ ಗಳವರೆಗೂ ವೈದ್ಯರು ತಮ್ಮ ಶ್ರಮಕ್ಕೂ ಮೀರಿದಂತಹ ಪ್ರಯತ್ನವನ್ನು ಮಾಡಿ ಲೀಲಾವತಿ(Leelavathi) ಅಮ್ಮನವರನ್ನು ಉಳಿಸಿಕೊಳ್ಳಲು, ಆ ಅವಧಿಯಲ್ಲಿ ನೀಡಬಹುದಾದಂತಹ ಎಲ್ಲಾ ಚಿಕಿತ್ಸೆಗಳನ್ನು ಮಾಡಿದರು.

ಯಾವ ಚಿಕಿತ್ಸೆಯು ಫಲಕಾರಿಯಾಗದೆ ಲೀಲಾವತಿ ಅಮ್ಮನವರು ಕೊನೆ ಉ-ಸಿರೆಳೆದಿರುವುದು ಕನ್ನಡ ಸಿನಿಮಾ ರಂಗಕ್ಕೆ ಸೂ-ತಕದ ಛಾಯೆಯನ್ನು ಮೂಡಿಸಿದೆ. ತಮ್ಮ ಕೊನೆಯ ದಿನಗಳಲ್ಲಿ ವಾಯೋಸಹಜ ಕಾಯಿಲೆಯಿಂದ ಬಳಲಿ ತಮ್ಮ ಮಗನ ಹಾರೈಕೆಯಲ್ಲಿ ಕಾಲ ಕಳೆದಂತಹ ಲೀಲಾವತಿ ಅಮ್ಮನವರು ದೈವ ದೀನರಾಗಿದ್ದು ಈ ನೋವನ್ನು ಸಹಿಸುವಂತಹ ಶಕ್ತಿ ಭಗವಂತ ಪುತ್ರ ವಿನೋದ್ ರಾಜ್(Vinod raj) ಅವರಿಗೆ ನೀಡಲಿ ಎಂದು ಪ್ರಾರ್ಥಿಸೋಣ.

6 ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವಂತಹ ಲೀಲಾವತಿ ಅಮ್ಮನವರು 1949ರಲ್ಲಿ ನಾಗಕನ್ನಿಕೆ ಎಂಬ ಸಿನಿಮಾದ ಮೂಲಕ ಬಾಲ ನಟಿಯಾಗಿ ತಮ್ಮ 13ನೇ ವರ್ಷದಲ್ಲಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದರು. ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದಂತಹ ಲೀಲಾವತಿ ಅಮ್ಮನವರಿಗೆ ಎರಡನೇ ತರಗತಿಯಿಂದ ಮುಂದೆ ಓದಲು ಸಾಧ್ಯವಾಗುವುದಿಲ್ಲ, ಅತಿ ಚಿಕ್ಕ ವಯಸ್ಸಿಗೆ ಕೆಲಸಕ್ಕೆ ಹೋಗಿ ಮನೆಯವರನ್ನು

ನೋಡಿಕೊಳ್ಳುತ್ತಿದ್ದಂತಹ ಲೀಲಾವತಿ ಅಮ್ಮನವರು ಡಾಕ್ಟರ್ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಭಕ್ತ ಪ್ರಹ್ಲಾದ ಸಿನಿಮಾದ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಕಣ್ತೆರೆದು ನೋಡು, ಕನ್ಯಾ ರತ್ನ, ಗಾಳಿಗೋಪುರ, ಗೆಜ್ಜೆಪೂಜೆ, ರಣಧೀರ, ಡಾಕ್ಟರ್ ಕೃಷ್ಣ ದಂತಹ ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿ 600ಕ್ಕೂ ಹೆಚ್ಚಿನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಬಹುಭಾಷ ನಟಿಯಾಗಿ ಆಗಿನ ಸಿನಿ ಪ್ರೇಕ್ಷಕರನ್ನು ರಂಜಿಸಿದಂತಹ ಲೀಲಾವತಿ(Leelavathi) ಅಮ್ಮನವರು ತಮಿಳು ಹಾಗೂ ತೆಲುಗಿನಲ್ಲಿ ಬರೋಬ್ಬರಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ಯಾರದು ಎಂಬ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಂತಹ ಲೀಲಾವತಿ ಅಮ್ಮನವರು ಆನಂತರ ಬಣ್ಣದ ಬದುಕಿನಿಂದ ದೂರ ಉಳಿದು ಜನಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಹೌದು ಗೆಳೆಯರೇ ತಮ್ಮ ಮಗ ವಿನೋದ್ ರಾಜ್ ಅವರೊಂದಿಗೆ ಸೇರಿ ನೆಲಮಂಗಲದ ಸೋಲದೇವನ ಹಳ್ಳಿಯಲ್ಲಿ ರೈತ

ಮಹಿಳೆಯಾಗಿ ಕೆಲಸ ಮಾಡಲು ಪ್ರಾರಂಭ ಮಾಡಿದಂತಹ ಲೀಲಾವತಿ(Leelavathi) ಅಮ್ಮನವರು ಅದರಿಂದ ಬಂದಂತಹ ಹಣದಲ್ಲಿ ಬಡವರ ನೇತೃತರ ಹಾಗೂ ಸಿನಿಮಾ ಟೆಕ್ನಿಷಿಯನ್ ಗಳ ಸಹಾಯಕ್ಕೆ ಮುಂದಾದರು. ಸರ್ಕಾರಿ ಆಸ್ಪತ್ರೆ ಒಂದನ್ನು ಕಟ್ಟಿಸಿ ಅದನ್ನು ಸರ್ಕಾರಕ್ಕೆ ವಹಿಸುವ ಮೂಲಕ ಸಾಮಾನ್ಯ ಕಾ-ಯಿಲೆಯಿಂದ ಬಳಲುವಂತಹ ಜನರೆಲ್ಲರಿಗೂ ಉಚಿತ ಪ್ರಾಥಮಿಕ ಚಿಕಿತ್ಸೆ ದೊರಕಲೇಬೇಕು ಎಂಬ ಮಾನವೀಯತೆಯನ್ನು ಮೆರೆದರು.

ಹೀಗೆ ತಾವು ಬದುಕಿದಷ್ಟು ದಿನ ಇತರರಿಗೆ ಮಾದರಿಯಾಗುವಂತೆ ನಡೆದುಕೊಂಡಂತಹ ಲೀಲಾವತಿ(Leelavathi) ಅಮ್ಮನವರು ಇದೀಗ ಮರಳಿ ಬಾರದ ಊರಿಗೆ ತೆರಳಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!