Ravichandran: ರವಿಚಂದ್ರನ್ ಹಾಗೂ ಪ್ರಿಯಾಂಕ ಉಪೇಂದ್ರ ನಟನೆಯಲ್ಲಿ ಮೂಡಿ ಬಂದ ಮಲ್ಲ ಸಿನಿಮಾದ ಕಲೆಕ್ಷನ್ ಕೇಳಿದ್ರೆ ಸುಸ್ತಾಗ್ತೀರ!

Priyanka Upendra ರವಿಚಂದ್ರನ್ ರವರ ಸಿನಿಮಾಗಳು ಎಂದಾಗ ನಮಗೆ ಮೊದಲಿಗೆ ನೆನಪಿಗೆ ಬರುವುದು ಸೂಪರ್ ಹಿಟ್ ಆಗಿರುವಂತಹ ರೋಮ್ಯಾಂಟಿಕ್ ಸಾಂಗುಗಳು ಹಾಗೂ ಅವರು ತಮ್ಮ ಸಿನಿಮಾಗೆ ಆಯ್ಕೆ ಮಾಡುವಂತಹ ನಾಯಕನಟಿಯರು. ಅಂದಿನ ಕಾಲದಲ್ಲಿ ಈ ಎರಡು ವಿಚಾರದಲ್ಲಿ ರವಿಚಂದ್ರನ್(Ravichandran) ಅವರು ಬೇರೆಲ್ಲ ಸಿನಿಮಾಗಳಿಗಿಂತ ಹಾಗೂ ಫಿಲಂ ಮೇಕರ್ಸ್ ಗಳಿಗಿಂತ ಹೆಚ್ಚಾಗಿ ಪ್ರಸಿದ್ಧತೆಯನ್ನು ಹೊಂದಿದ್ದರು.

ಅದರಲ್ಲೂ ವಿಶೇಷವಾಗಿ ಇಂದು ನಾವು ಮಾತನಾಡಲು ಹೊರಟಿರುವುದು ಕ್ರೇಜಿಸ್ಟಾರ್ ರವಿಚಂದ್ರನ್ ರವರು ನಾಯಕನಾಗಿ ನಿರ್ದೇಶಕನಾಗಿ ಕಾಣಿಸಿಕೊಂಡಿರುವಂತಹ ಮಲ್ಲ ಸಿನಿಮಾದ(Malla Film) ಬಗ್ಗೆ. ಈ ಸಿನಿಮಾವನ್ನು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿದ್ದ ರಾಮು ಅವರು ನಿರ್ಮಾಣ ಮಾಡಿದ್ದರು. ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾಂಕ ಉಪೇಂದ್ರ(Priyanka Upendra) ರವರು ಕಾಣಿಸಿಕೊಂಡಿದ್ದರು.

2004ರಲ್ಲಿ ಬಿಡುಗಡೆಯಾದ ಈ ಮಲ್ಲ ಸಿನಿಮಾ ಸಾಕಷ್ಟು ವಿಚಾರಗಳಿಗಾಗಿ ದೊಡ್ಡಮಟ್ಟದ ಜನಪ್ರಿಯತೆ ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಕೂಡ ಪಡೆದುಕೊಂಡಿತ್ತು. ಈ ಸಿನಿಮಾದಲ್ಲಿ ರವಿಚಂದ್ರನ್(Ravichandran) ಹಾಗೂ ಪ್ರಿಯಾಂಕ ಉಪೇಂದ್ರರವರ ನಡುವೆ ಇದ್ದಂತಹ ಪ್ರಣಯದ ದೃಶ್ಯಗಳೆ ಸಿನಿಮಾದ ಮೈನ್ ಹೈಲೈಟ್ ಆಗಿದ್ದವು ಎಂದರು ಕೂಡ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಯಮ್ಮೋ ಯಮ್ಮೋ ಸಾಂಗ್ ಎನ್ನುವುದು ದೊಡ್ಡ ಮಟ್ಟದ ಸೂಪರ್ ಹಿಟ್ ಸಾಂಗ್ ಆಗಿತ್ತು.

ಇನ್ನು ಆ ಕಾಲದಲ್ಲಿಯೇ ರವಿಚಂದ್ರನ್(Crazy Star Ravichandran) ರವರ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದ ಮಲ್ಲ ಸಿನಿಮಾ ಭರ್ಜರಿ ಎಂಟು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು ಎಂಬುದಾಗಿ ತಿಳಿದು ಬಂದಿದೆ. ಕೇವಲ ಕಲೆಕ್ಷನ್ ವಿಚಾರದಲ್ಲಿ ಮಾತ್ರವಲ್ಲದೆ ಜನರ ಮೆಚ್ಚುಗೆ ಕೂಡ ಪಾತ್ರವಾಗಿ ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗಳಿಂದ ಯಶಸ್ವಿ ಪ್ರದರ್ಶನ ಕಂಡಿತ್ತು ಎಂಬುದಾಗಿ ಕೂಡ ತಿಳಿದುಬಂದಿದೆ. ಮಲ್ಲ ಸಿನಿಮಾದ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!