Martin: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಟೀಸರ್ ನೋಡೋಕೂ ಹಣ ಕೊಡ್ಬೇಕಂತೆ! ಕಾರಣ ಕೇಳಿದ್ರೆ ಸೂಪರ್ ಅಂತೀರಾ.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಕಾಲಿಟ್ಟು ಹಲವಾರು ವರ್ಷಗಳೇ ಕಳೆದಿದ್ದರೂ ಕೂಡ ಅವರು ನಾಯಕನಾಗಿ ನಟಿಸಿರುವ ಸಿನಿಮಾಗಳು ಕೇವಲ ಮೂರು ಮತ್ತೊಂದು ಎನ್ನುವಂತಿದೆ. ಒಂದು ಸಿನಿಮಾ ಮಾಡಲು ಮೂರರಿಂದ ನಾಲ್ಕು ವರ್ಷಗಳನ್ನು ಧ್ರುವ ಸರ್ಜಾ(Dhruva Sarja) ರವರು ಬಳಸಿಕೊಳ್ಳುತ್ತಾರೆ. ಇದೇ ಅವರ ಅಭಿಮಾನಿಗಳ ಬೇಸರಕ್ಕೆ ಕೂಡ ಕಾರಣವಾಗಿದೆ.

ಸದ್ಯಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ನಟನಾಗಿ ನಟಿಸಿರುವ ಎರಡು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ. ಮೊದಲನೇದಾಗಿ ಎಪಿ ಅರ್ಜುನ್(AP Arjun) ರ್ದೇಶನದಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್ ಸಿನಿಮಾ ಹಾಗೂ ಎರಡನೇದಾಗಿ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕೆಡಿ ಸಿನಿಮಾ. ಎರಡು ಸಿನಿಮಾಗಳು ಕೂಡ ಮಾಸ್ ವಿಚಾರಕ್ಕಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದು ಸಿನಿಮಾದ ಕುರಿತಂತೆ ಅಭಿಮಾನಿಗಳಲ್ಲಿ ನಿರೀಕ್ಷೆ ಕೂಡ ಹೆಚ್ಚಾಗಿದೆ.

Dhruva Sara Martin

ಎಲ್ಲಕ್ಕಿಂತ ವಿಶೇಷ ಎನ್ನುವಂತೆ ಇದೇ ಫೆಬ್ರವರಿ 23ರಂದು ಧ್ರುವ ಸರ್ಜಾ ಹಾಗೂ ಎಪಿ ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್(Martin Teaser) ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿದ್ದು ಈ ಟೀಸರ್ ಅನ್ನು ನೋಡಲು ಟಿಕೆಟ್ ಅನ್ನು ಸಿದ್ಧಪಡಿಸಲಾಗಿದ್ದು ಅದರಿಂದ ಹಣವನ್ನು ಪಡೆಯುವಂತಹ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಇದೇನಪ್ಪಾ ಟೀಸರ್ ನೋಡೊಕು ಹಣ ನೀಡಬೇಕಾ ಎಂಬುದಾಗಿ ಅಭಿಮಾನಿಗಳು ಕೇಳಿದ್ರೆ ಅದು ನಿಜಕ್ಕೂ ಕೂಡ ತಪ್ಪಾಗುತ್ತೆ ಯಾಕೆಂದರೆ ಇದಕ್ಕೆ ಇರುವಂತಹ ಹಿಂದಿನ ಕಾರಣವೇ ಬೇರೆ ಇದೆ.

ಹೌದು ಮಿತ್ರರೇ, ಟೀಸರ್ ಟಿಕೆಟ್ ನಿಂದ ಬಂದಂತಹ ಹಣವನ್ನು ಗೋಶಾಲೆಯ ಅಭಿವೃದ್ಧಿಗಾಗಿ ಚಿತ್ರತಂಡ ನೀಡಲಿದೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಕ ಪ್ರಾಣಿಯ ರಕ್ಷಣೆಗಾಗಿ ಮಾರ್ಟಿನ್ ಚಿತ್ರ ತಂಡ ಮಾಡುತ್ತಿರುವ ಈ ಕಾರ್ಯ ವ್ಯಾಪಕವಾಗಿ ಜನ ಮೆಚ್ಚುಗೆಗೆ ಒಳಗಾಗಿದೆ. ಮಾರ್ಟಿನ್ ತಂಡದ ಈ ಯೋಜನೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!