Deepika Das: ಬೆಕ್ಕನ್ನು ಕಳೆದುಕೊಂಡಿದ್ದಾರೆ ದೀಪಿಕಾ ದಾಸ್. ಹುಡುಕಿಕೊಟ್ಟವರಿಗೆ ದೀಪಿಕಾ ದಾಸ್ ಕೊಡ್ತಿರೋ ಬಹುಮಾನ ಎಷ್ಟು ಗೊತ್ತಾ?

Deepika Das ಜೀ ಕನ್ನಡ ವಾಹಿನಿಯ ನಾಗಿಣಿ ಧಾರಾವಾಹಿಯ ಮೂಲಕ ಪ್ರವರ್ಧಮಾನಕ್ಕೆ ಬಂದಂತಹ ನಟಿ ದೀಪಿಕಾ ದಾಸ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಕನ್ನಡ ಕಿರುತೆರೆಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್(Bigg Boss) ಮೂಲಕ ಕೂಡ ದೊಡ್ಡ ಮಟ್ಟದಲ್ಲಿ ಜನರಿಗೆ ಪರಿಚಿತರಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ.

ಸದ್ಯಕ್ಕೆ ದೀಪಿಕಾ ದಾಸ್(Deepika Das) ಕಾಣೆಯಾಗಿದ್ದಾರೆ ಎನ್ನುವವರಿಗೆ ದುಬೈನಲ್ಲಿ ಕ್ರಿಸ್ ಗೆಲ್ ಅವರ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ಆಶ್ಚರ್ಯವನ್ನು ನೀಡಿದರು. ಒಟ್ಟಾರೆಯಾಗಿ ಸದ್ಯಕ್ಕೆ ದೀಪಿಕಾ ದಾಸ್ ಅವರು ಹಾಲಿಡೇ ಮೂಡ್ ನಲ್ಲಿ ಇದ್ದಾರೆ ಎಂದರೆ ತಪ್ಪಾಗಲಾರದು. ಪ್ರೇಕ್ಷಣೀಯ ಸ್ಥಳಗಳಲ್ಲಿ ತಮ್ಮ ಸ್ನೇಹಿತರ ಜೊತೆಗೆ ಸುತ್ತಾಡುತ್ತಿರುವ ದೀಪಿಕಾ ದಾಸ್ ಅವರು ಮತ್ತೊಂದು ವಿಚಾರಕ್ಕಾಗಿ ಕೂಡ ಈಗ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ.

Deepika Das Cat Missing

ಹೌದು ಶಾಡೋ ಎನ್ನುವ ಬೆಕ್ಕು ಕಾಣೆಯಾಗಿರುತ್ತದೆ ಹುಡುಕಿಕೊಟ್ಟವರಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎನ್ನುವ ಪೋಸ್ಟ್ ಅನ್ನು ದೀಪಿಕ ದಾಸ್ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿದ್ದು ಇದಕ್ಕೆ ನಟಿ ಸಂಜನಾ ಗಲ್ರಾಣಿ ಕೂಡ ಇಂತಹ ಬೆಕ್ಕುಗಳನ್ನು ವಾಮಾ’ಚಾರ ಮಾಡಲು ಬಳಸಿರಬಹುದು ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.

ಮತ್ತೊಂದು ಕಡೆ ಕಾಮೆಂಟ್ ಬಾಕ್ಸ್ ನಲ್ಲಿ ನೆಟ್ಟಿಗರು ನನ್ನ ಬಳಿ ಬಿಳಿ ಬಣ್ಣದ ಬೆಕ್ಕಿದೆ ಸದ್ಯಕ್ಕೆ ಹಣದ ಅರ್ಜೆಂಟ್ ಇದೆ ಬಣ್ಣ ಬಳಿದು ಕೊಡ್ಲಾ ಎನ್ನುವುದಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ಬೆಕ್ಕಿಗೆ ಇರುವ ಬೆಲೆ ಮನುಷ್ಯರಿಗೆ ಇಲ್ವಲ್ಲ ಎಂಬುದಾಗಿ ಬೇಸರದಿಂದ ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ನಿಮಗೆ ಈ ಫೋಟೋದಲ್ಲಿ ಕಾಣುವಂತಹ ಬೆಕ್ಕು ಸಿಕ್ಕಿದರೆ ದೀಪಿಕಾ ದಾಸ್(Deepika Das) ರವರಿಗೆ ನೀಡಿದರೆ ಹತ್ತರಿಂದ ಹದಿನೈದು ಸಾವಿರ ಬಹುಮಾನವನ್ನಂತೂ ಗೆಲ್ಲಬಹುದಾಗಿದೆ.

Leave a Comment

error: Content is protected !!