Megha Shetty: ಬಿಗ್ ಬಾಸ್ ಶೈನ್ ಶೆಟ್ಟಿ ಜೊತೆ ಸಪ್ತಪದಿ ತುಳಿಯಲಿದ್ದಾರಾ ಮೇಘ ಶೆಟ್ಟಿ? ವೈರಲ್ ಸುದ್ದಿ ಹಿಂದಿನ ಅಸಲಿ ಕಥೆ ಏನು..

ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟನ ಕರಿಯರ್ರನ್ನು ಪ್ರಾರಂಭಮಾಡಿದಂತಹ ಮೇಘ ಶೆಟ್ಟಿ(Megha Shetty) ಅಲ್ಪಾವಧಿಯಲ್ಲಿ ಬೆಳ್ಳಿ ತೆರೆಯಲ್ಲು ಮಿಂಚುವಂತಹ ಅದೃಷ್ಟವನ್ನು ಪಡೆದುಕೊಂಡರು ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬ್ಬಲ್ ರೈಡಿಂಗ್(Triple Riding) ನಂತಹ ಚಿತ್ರಗಳಲ್ಲಿ ಅಭಿನಯಿಸಿ ಪೀಕ್ನಲ್ಲಿ ಇದ್ದಂತಹ ಮೇಘ ಶೆಟ್ಟಿ ಸದ್ಯ ಯಾವ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ?

ಎಂಬುದರ ಯಾವ ಅಪ್ಡೇಟ್ಸ್ ಕೂಡ ನೀಡಿಲ್ಲ. ಹೀಗಿರುವಾಗ ಬಿಗ್ ಬಾಸ್ ಸ್ಪರ್ಧೆ ಶೈನ್ ಶೆಟ್ಟಿ (Shine Shetty) ಅವರೊಂದಿಗೆ ಮೇಘ ಶೆಟ್ಟಿ ಅವರ ಭರ್ಜರಿ ಮದುವೆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗಳಾಗುತ್ತಿದ್ದು, ಇದರ ಅಸಲಿ ಮಾಹಿತಿ ಏನು? ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಕಡಿಮೆ ಸಮಯದಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಂತಹ ಮೇಘ ಶೆಟ್ಟಿ ಅವರು ಪ್ರತಿ ಬಾರಿ ಸೋಶಿಯಲ್ ಮೀಡಿಯಾಗಳ ಮೂಲಕ ನೆಟ್ಟಿಗರ ನಿದ್ರೆ ಗೆಡಿಸುತ್ತಿರುತ್ತಾರೆ.

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೇ ಮೇಘ ಶೆಟ್ಟಿ(Megha Shetty) ಅವರು ಶೈನ್ ಶೆಟ್ಟಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಹೋಲಿ ಆಚರಣೆ ಮಾಡಿದರು. ಇವರಿಬ್ಬರೂ ಒಟ್ಟಾಗಿ ಕ್ಲಿಕ್ಕಿಸಿಕೊಂಡಂತಹ ಸಾಕಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದವು. ಇದರ ಬೆನ್ನಲ್ಲೇ ಹಲವರು ಮೇಘ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರು.

ಅಲ್ಲದೆ ಇತ್ತೀಚಿಗಷ್ಟೇ ಮೇಘ ಶೆಟ್ಟಿ ಅವರು ಮೂಗು ಚುಚ್ಚಿಸಿಕೊಂಡು ಮದುವೆಯ ಮುನ್ಸೂಚನೆಯನ್ನು ನೀಡಿದ್ದಾರೆ. ಹೀಗಾಗಿ ಮಂಗಳೂರಿನವರೇ ಆದಂತಹ ಶೈನ್ ಶೆಟ್ಟಿ ಅವರನ್ನು ಮೇಘ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಲಾಗಿತ್ತು. ಆದರೆ ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಶೈನ್ ಶೆಟ್ಟಿ “ನಾನು ಅವರನ್ನು ರಂಗ ದೇ ಕಾರ್ಯಕ್ರಮದಲ್ಲಿ ಭೇಟಿಯಾದೆ ಮೇಘ ಶೆಟ್ಟಿ(Megha Shetty) ಕೂಡ ಮಂಗಳೂರಿನವರು ದಯವಿಟ್ಟು ನನ್ನ ಹಾಗೂ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾನು ಈ ಕಾರ್ಯಕ್ರಮದಲ್ಲಿ ಅವರನ್ನು ಮೊದಲು ಭೇಟಿ ಮಾಡಿದ್ದು, ಮೊದಲು ಮಾಡಬೇಕಾದ ಕೆಲಸ ನೋಡುತ್ತೇನೆ. ಆಮೇಲೆ ಮದುವೆ ಬಗ್ಗೆ ಯೋಚಿಸುತ್ತೇನೆ” ಎಂದು ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ಬ್ರೇಕ್ ಹಾಕಿದರು.

Karnataka Govt Pension Scheme: ಬಸ್ ಫ್ರೀ ಕೊಟ್ಟಿದ್ದು ಆಯ್ತು, ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು ಆಯ್ತು, ಇದೀಗ ಸಿದ್ದು ಸರ್ಕಾರದಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್!

Leave a Comment

error: Content is protected !!