Dhruva Sarja: ಧ್ರುವ ಸರ್ಜಾ ಅವರ ಮಗಳ ನಾಮಕರಣಕ್ಕೆ ಮೇಘನಾ ರಾಜ್ ಅವರು ನೀಡುತ್ತಿರುವ ಉಡುಗೊರೆ ಏನು ಗೊತ್ತಾ?

Meghana Raj ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Action Prince Dhruva Sarja) ಅವರು ಈಗಾಗಲೇ ಸದ್ಯಕ್ಕೆ ಮಾರ್ಟಿನ್ ಹಾಗೂ ಕೆಡಿ ಸಿನಿಮಾಗಳ ಚಿತ್ರಿಕರಣದಲ್ಲಿ ಹಾಗೂ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ವ್ಯಸ್ತರಾಗಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.

ಇತ್ತೀಚಿಗಷ್ಟೇ ಅವರ ಪತ್ನಿ ಆಗಿರುವ ಪ್ರೇರಣಶಂಕರ್(Prerana Shankar) ಅವರು ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಧ್ರುವ ಸರ್ಜಾ ಅವರು ಈಗ ತಂದೆಯ ಸ್ಥಾನಕ್ಕೆ ಪ್ರಮೋಷನ್ ಪಡೆದುಕೊಂಡಿದ್ದಾರೆ. ಕುಟುಂಬಕ್ಕೆ ಲಕ್ಷ್ಮಿ ಆಗಮನವಾಗಿದೆ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಭಾವಿಸಿ ಸಂಭ್ರಮಾಚರಣೆಯನ್ನು ನಡೆಸಿದ್ದರು.

ಕೆಲವೊಂದು ಅಧಿಕೃತ ಮೂಲಗಳ ಪ್ರಕಾರ ಧ್ರುವ ಸರ್ಜಾ(Dhruva Sarja) ದಂಪತಿಗಳು ತಮ್ಮ ಹೆಣ್ಣು ಮಗುವಿನ ನಾಮಕರಣವನ್ನು ಅತಿ ಶೀಘ್ರದಲ್ಲಿಯೇ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಸಲಿದ್ದಾರೆ ಎನ್ನುವ ಸುದ್ದಿಗಳು ಕೂಡ ಕೇಳಿ ಬರುತ್ತಿವೆ. ಇನ್ನು ತನ್ನ ಬಾಮೈದನ ಮಗಳಿಗೆ ನಟಿ ಮೇಘನಾ ರಾಜ್(Meghana Raj) ರವರು ನಾಮಕರಣದ ದಿನದಂದು ನೀಡುತ್ತಿರುವ ಉಡುಗೊರೆಯನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಾ.

ಹೌದು ಮಿತ್ರರೇ ನಟಿ ಮೇಘನಾ ರಾಜ್(Meghana Raj) ಅವರು ಧ್ರುವ ಸರ್ಜಾ(Dhruva Sarja) ಅವರ ಮಗಳ ನಾಮಕರಣದ ದಿನದಂದು ಭರ್ಜರಿ 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡುವ ಪ್ಲಾನ್ ಹಾಕಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆದಷ್ಟು ಬೇಗ ಈ ಶುಭ ಸಮಾರಂಭ ಸರ್ಜಾ ಕುಟುಂಬದಲ್ಲಿ ನಡೆಯಲಿ ಎಂಬುದಾಗಿ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Leave a Comment

error: Content is protected !!