Kasturi Nivasa: ಕಸ್ತೂರಿ ನಿವಾಸ ಸಿನಿಮಾಗೆ ಅಣ್ಣಾವ್ರೇ ಮೊದಲ ಆಯ್ಕೆಯಾಗಿರಲಿಲ್ಲ! ಯಾರಿಗೂ ಗೊತ್ತಿಲ್ಲದ ರಹಸ್ಯಕರ ವಿಚಾರವಿದು!

Dr Rajkumar ರಾಜಕುಮಾರ್(Rajkumar) ಎಂದರೆ ಕನ್ನಡ ಕನ್ನಡ ಎಂದರೆ ರಾಜಕುಮಾರ್ ಎನ್ನುವುದು ಸಾಕಷ್ಟು ವರ್ಷಗಳಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಜನದನಿತವಾಗಿರುವ ಮಾತು. ಕನ್ನಡ ಚಿತ್ರರಂಗದಲ್ಲಿ ಅವರನ್ನು ದೇವರಂತೆ ಪೂಜಿಸಲು ಕೂಡ ಅವರ ಸಿನಿಮಾ ಜೀವನವೇ ಒಂದು ಉದಾಹರಣೆ ಎಂದು ಹೇಳಬಹುದು. ರಾಜಕುಮಾರ್ ಅವರು ತಮ್ಮ ಜೀವನದಲ್ಲಿ ಇನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತಿಯೊಂದು ಸಿನಿಮಾಗಳು ಕೂಡ ಸಮಾಜಕ್ಕೆ ಒಂದು ಸಂದೇಶವನ್ನು ಸಾರುವ ಅಂತಹ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮೂಡಿಸುವಂತಹ ಪ್ರಯತ್ನವನ್ನು ಮಾಡಿದ್ದವು. ಅದರಲ್ಲೂ ವಿಶೇಷವಾಗಿ ಕಸ್ತೂರಿ ನಿವಾಸ(Kasturi Nivasa) ಸಿನಿಮಾ ಕೂಡ ವಿಭಿನ್ನ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಅದರ ಹಿಂದಿನ ಕಥೆನೇ ಬೇರೆ ಇದೆ.

ಹೌದು ಈ ಸಿನಿಮಾವನ್ನು ಬರೆದಿದ್ದು ತಮಿಳು ಲೇಖಕ. ಹೀಗಾಗಿ ಅವರಿಗೆ ಮೊದಲ ನಾಯಕನ ಆಯ್ಕೆ ರಾಜಕುಮಾರ ಆಗಿರಲಿಲ್ಲ ಬದಲಾಗಿ ತಮಿಳಿನಲ್ಲಿಯೇ ಬೇರೆ ನಾಯಕ ನಟನೆಗೆ ಸಿನಿಮಾ ಮಾಡುವ ಯೋಚನೆ ಇತ್ತು, ಆದರೆ ನಂತರ ಅವರು ಒಪ್ಪದಿದ್ದ ಕಾರಣ ಶ್ರೀ ಉದಯ್ ಶಂಕರ್ ಅವರ ಮೂಲಕ ಕನ್ನಡದಲ್ಲಿ ದೊರೆ ಹಾಗೂ ಭಗವಾನ್ ದ್ವಯರು ರಾಜಕುಮಾರ್(Rajkumar) ಅವರಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ.

ಇನ್ನು ಈ ಸಿನಿಮಾವನ್ನು ತಿರಸ್ಕರಿಸಿದ್ದ ಮೊದಲ ನಟ ಯಾರು ಎಂದರೆ ತಮಿಳು ಚಿತ್ರರಂಗದ ಲೆಜೆಂಡರಿ ನಟ ಆಗಿರುವಂತಹ ಶಿವಾಜಿ ಗಣೇಶನ್ ರವರು. ಶಿವಾಜಿ ಗಣೇಶನ್(Shivaji Ganeshan) ರವರು ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ದುಃಖಾಂತ್ಯ ಇದೆ ಎನ್ನುವ ಕಾರಣಕ್ಕಾಗಿ ಈ ಸಿನಿಮಾವನ್ನು ತಿರಸ್ಕರಿಸುತ್ತಾರೆ ಹಾಗೂ ರಾಜಕುಮಾರ್ ಅವರು ಈ ಸಿನಿಮಾವನ್ನು ಒಪ್ಪಿಕೊಂಡು ಈ ಸಿನಿಮಾದ ಮೂಲಕ ಇನ್ನು ದೊಡ್ಡ ಮಟ್ಟದ ಸಕ್ಸಸ್ ಪಡೆಯುತ್ತಾರೆ.

Leave a Comment

error: Content is protected !!