Nayanthara: ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸುವುದಕ್ಕೆ ನಟಿ ನಯನತಾರಾ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Nayanthara ಕಳೆದ ಕೆಲವು ವರ್ಷಗಳಿಂದಲೂ ಕೂಡ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ನಯನತಾರ(Nayanthara) ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿ ಮರೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು ಇಂದಿಗೂ ಕೂಡ ಅವರ ಬೇಡಿಕೆ, ದಕ್ಷಿಣ ಭಾರತ ಚಿತ್ರರಂಗದ ನಾಯಕ ನಟಿಯರಲ್ಲಿ ಕಡಿಮೆಯಾಗಿಲ್ಲ ಎಂದು ಹೇಳಬಹುದು.

ಇಂದಿಗೂ ಕೂಡ ಯುವ ಸ್ಟಾರ್ ನಟಿಯರ ಜೊತೆಗೆ ಕಾಂಪಿಟೇಶನ್ ಮಾಡುವಂತಹ ನಯನತಾರಾ(Nayanthara) ಪ್ರತಿಯೊಂದು ಸ್ಪರ್ಧೆಯಲ್ಲಿ ಕೂಡ ಮುಂದಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ನಯನತಾರಾ ಈಗ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್(Shah Rukh Khan) ಅವರ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ.

ತಮಿಳು ನಿರ್ದೇಶಕ ಆಟ್ಲೀ(Atlee) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜವಾನ್(Jawaan) ಸಿನಿಮಾದಲ್ಲಿ ಶಾರುಖ್ ಖಾನ್ ಅವರಿಗೆ ನಯನತಾರಾ ಅವರ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಈ ಮೂಲಕ ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ನಯನತಾರ ನಟಿಸಿದಂತಾಗುತ್ತದೆ.

ಇನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಚಿತ್ರಗಳಿಗೆ ನಯನತಾರಾ(Nayanthara) ಅವರು 10 ಕೋಟಿ ರೂಪಾಯಿ ಸಂಭವನೆಯನ್ನು ಪಡೆದುಕೊಳ್ಳುತ್ತಾರೆ ಆದರೆ ಬಾಲಿವುಡ್ ಚಿತ್ರರಂಗದ ಈ ಬಿಗ್ ಬಜೆಟ್ ಸಿನಿಮಾಗೆ ಭರ್ಜರಿ 13 ಕೋಟಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನಯನತಾರಾ ಅವರ ಈ ಸಂಭಾವನೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!