Virat Kohli: ವಿರಾಟ್ ಕೊಹ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ? ಅದಕ್ಕೆ ಕಿಂಗ್ ಅಂತ ಹೇಳೋದುದು.

Virat Kohli Net Worth ಅಂಡರ್ 19 ತಂಡದ ಕ್ಯಾಪ್ಟನ್ ಆಗಿ ಕಪ್ ಗೆಲ್ಲುವುದರಿಂದ ಹಿಡಿದು ಭಾರತ ತಂಡದ ಪರವಾಗಿ ಸಾಕಷ್ಟು ದಾಖಲೆಗಳನ್ನು ನಿರ್ಮಿಸುವವರೆಗೂ ಕೂಡ ವಿರಾಟ್ ಕೊಹ್ಲಿ(Virat Kohli) ಅವರ ಸಾಧನೆ ಎನ್ನುವುದು ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ. ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಜನಿಸಿದರು ಕೂಡ ಇಂದಿಗೂ ಅವರು ಸಿಂಪಲ್ ಆಗಿ ಜೀವಿಸುತ್ತಾರೆ ಆದರೆ ರಾಯಲ್ ಆಗಿ ಸಂಪಾದನೆ ಮಾಡಿದ್ದಾರೆ.

ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿರುವ ಹಾಗೂ ಹೆಚ್ಚು ಹಣವನ್ನು ಗಳಿಸುತ್ತಿರುವ ಕ್ರಿಕೆಟಿಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಆರ್‌ಸಿಬಿ(RCB) ತಂಡದ ಪರವಾಗಿ ಕಳೆದ ಹಲವಾರು ವರ್ಷಗಳಿಂದಲೂ ಕೂಡ ಬ್ಯಾಟ್ಸ್ಮನ್ ಆಗಿ ಆಡುತ್ತಾ ಬಂದಿದ್ದು ತಂಡದ ಬಗ್ಗೆ ಅವರು ಹೊಂದಿರುವ ಪ್ರಾಮಾಣಿಕತೆ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೆ ಮೆಚ್ಚುಗೆಯನ್ನು ತರಿಸುತ್ತದೆ.

ಇನ್ನು ವಿರಾಟ್ ಕೊಹ್ಲಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅನುಷ್ಕಾ ಶರ್ಮ(Anushka Sharma) ಅವರನ್ನು ಪ್ರೀತಿಸಿ ಮದುವೆಯಾಗಿರುವುದು ತಿಳಿದಿದೆ. ಈಗಾಗಲೇ ವಮಿಕಾ(Vamika) ಎನ್ನುವಂತಹ ಮುದ್ದಾದ ಹೆಣ್ಣು ಮಗಳು ಕೂಡ ಇದ್ದಾಳೆ. ಇಂದಿನ ಲೇಖನಿಯಲ್ಲಿ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿರುವ ಒಟ್ಟಾರೆ ಆಸ್ತಿ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಮಿತ್ರರೇ ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ(Virat Kohli) ಅವರು ಭರ್ಜರಿ ಸಾವಿರದ ನೂರು ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸದ್ಯಕ್ಕೆ ಈ ಜನರೇಶನ್ ನ ಅತ್ಯಂತ ಶ್ರೀಮಂತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave a Comment

error: Content is protected !!