Pavithra Lokesh: ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಆ ತೆಲುಗು ನಟನ ಮೇಲೆ ನಟಿ ಪವಿತ್ರ ಲೋಕೇಶ್ ಅವರಿಗೆ ಪ್ರೀತಿ ಇತ್ತಂತೆ.

Pavithra Lokesh ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಮೈಸೂರು ಲೋಕೇಶ್ ರವರ ಮಗಳಾಗಿರುವ ನಟಿ ಪವಿತ್ರ ಲೋಕೇಶ್(Pavithra Lokesh) ರವರು ಇಂದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಅತ್ಯಂತ ಬಹು ಬೇಡಿಕೆಯ ಪೋಷಕ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನರೇಶ್ ಅವರ ಜೊತೆಗೂ ಕೂಡ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದ ಅವರು ನರೇಶ್(Naresh) ಅವರ ನಿರ್ಮಾಣ ಹಾಗೂ ನಾಯಕ ನಟನೆಯಲ್ಲಿ ಮೂಡಿ ಬಂದಿರುವಂತಹ ಮತ್ತೆ ಮದುವೆ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡು ಸಖತ್ ಹವಾ ಸೃಷ್ಟಿಸಿದ್ದರು.

ಸದ್ಯಕ್ಕೆ ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಮತ್ತೆ ಮದುವೆ ಸಿನಿಮಾ ದೊಡ್ಡಮಟ್ಟದಲ್ಲಿ ಅಲ್ಲದಿದ್ದರೂ ಕೂಡ ಡಿಸೆಂಟ್ ಆಗಿ ಎರಡು ಭಾಷೆಗಳಲ್ಲಿ ದೇಶಾದ್ಯಂತ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಸಮಾಧಾನಕರ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಪವಿತ್ರ ಲೋಕೇಶ್ ತಮ್ಮ 6ನೇ ತರಗತಿಯಲ್ಲಿದ್ದ ಕ್ರಶ್ ಬಗ್ಗೆ ಮಾತನಾಡಿದ್ದಾರೆ.

ಹೌದು ಪವಿತ್ರ ಲೋಕೇಶ್ ರವರು 6ನೇ ತರಗತಿಯಲ್ಲಿದ್ದಾಗಲೇ ತೆಲುಗು ನಟ ಆಗಿರುವಂತಹ ಅಕ್ಕಿನೇನಿ ನಾಗಾರ್ಜುನ(Akkineni Nagarjuna) ಅವರ ಮೇಲೆ ಪ್ರೀತಿಯನ್ನು ಹೊಂದಿದ್ದರಂತೆ. ನಟಿ ಆದಮೇಲೆ ಕೂಡ ಮೂರು ಬಾರಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೂ ಕೂಡ ಅವರನ್ನು ನೋಡಿ ಬಾಯಿಂದ ಮಾತೇ ಹೊರಡಲಿಲ್ಲ ಎನ್ನುವುದಾಗಿ ಕೂಡ ಅವರ ಮೇಲಿರುವಂತಹ ಅವರ ವಿಶೇಷ ಪ್ರೀತಿ ಹಾಗೂ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.

error: Content is protected !!